ವಿದಾಯದ ಟೆಸ್ಟ್ ನಲ್ಲಿ ಮೆಕಲಮ್ ವೇಗದ ಶತಕ
ನ್ಯೂಝಿಲೆಂಡ್- ಆಸ್ಟ್ರೇಲಿಯ ಎರಡನೆ ಟೆಸ್ಟ್

ಕ್ರೈಸ್ಟ್‌ಚರ್ಚ್, ಫೆ.20: ಇಲ್ಲಿ ಇಂದು ಆರಂಭಗೊಂಡ ಆಸ್ಟ್ರೇಲಿಯ ವಿರುದ್ಧದ ಎರಡನೆ ಟೆಸ್ಟ್‌ನಲ್ಲಿ ವಿದಾಯದ ಟೆಸ್ಟ್ ಆಡುತ್ತಿರುವ ನ್ಯೂಝಿಲೆಂಡ್ ತಂಡದ ನಾಯಕ ಬ್ರೆಂಡನ್ ಮೆಕಲಮ್54 ಎಸೆತಗಳಲ್ಲಿ ಶತಕ ಸಿಡಿಸಿ ಇತಿಹಾಸ ಬರೆದಿದ್ದಾರೆ.
ಇದು ಟೆಸ್ಟ್ ಕ್ರಿಕೆಟ್‌ನಲ್ಲಿ ವೇಗದ ಶತಕವಾಗಿದ್ದು, 54 ಎಸೆತಗಳಲ್ಲಿ 16 ಬೌಂಡರಿ ಮತ್ತು 4ಸಿಕ್ಸರ್ ನೆರವಿನಲ್ಲಿ ಅವರು ಶತಕ ಪೂರ್ಣಗೊಳಿಸಿದರು. 78 ನಿಮಿಷಗಳ ಅವಧಿಯಲ್ಲಿ ಅವರ ಶತಕ ಪೂರ್ಣಗೊಂಡಿತು. 34ರ ಹರೆಯದ ಮೆಕಲಮ್ 101ನೆ ಟೆಸ್ಟ್‌ನಲ್ಲಿ 12ನೆ ಟೆಸ್ಟ್ ಶತಕ ಪೂರೈಸಿದ್ದಾರೆ.
ಮೆಕಲಮ್ 124ನಿಮಿಷಗಳ ಬ್ಯಾಟಿಂಗ್‌ನಲ್ಲಿ145 ರನ್(79ಎ, 21ಬೌ, 6ಸಿ) ಗಳಿಸಿ ಔಟಾಗಿದ್ಧಾರೆ. ಅವರ ಭರ್ಜರಿ ಬ್ಯಾಟಿಂಗ್ ನೆರವಿನಲ್ಲಿ ನ್ಯೂಝಿಲೆಂಡ್ ಮೊದಲ ಇನಿಂಗ್ಸ್‌ನಲ್ಲಿ 65.4 ಓವರ್‌ಗಳಲ್ಲಿ 370 ರನ್‌ಗಳಿಗೆ ಮೊದಲ ಇನಿಂಗ್ಸ್ ಮುಗಿಸಿದೆ. ಮೊದಲ ದಿನದ ಆಟ ನಿಂತಾಗ ಆಸ್ಟ್ರೇಲಿಯ ಮೊದಲ ಇನಿಂಗ್ಸ್‌ನಲ್ಲಿ20ಓವರ್‌ಗಳಲ್ಲಿ 1ವಿಕೆಟ್ ನಷ್ಟದಲ್ಲಿ 57ರನ್ ಗಳಿಸಿದೆ.
ಸಂಕ್ಷಿಪ್ತ ಸ್ಕೋರ‍್ ವಿವರ
ನ್ಯೂಝಿಲೆಂಡ್ ಮೊದಲ ಇನಿಂಗ್ಸ್ 65.4 ಓವರ್‌ಗಳಲ್ಲಿ ಆಲೌಟ್ 370 ( ಮೆಕಲಮ್ 145, ಆ್ಯಂಡಸನ್ 72, ವಾಟ್ಲಿಂಗ್ 58; ಲಿನ್ 3-61), ಆಸ್ಟ್ರೇಲಿಯ ಮೊದಲ ಇನಿಮಗ್ಸ್ 20 ಓವರ್ ಗಳಲ್ಲಿ 57/1( ಬನ್ಸ್ 27; ಬೌಲ್ಟ್ 1-18).





