ಹರ್ಯಾಣದಲ್ಲಿ ಹಿಂಸಾಚಾರ 4ಸಾವು
ಪ್ರತಿಭಟನೆ ನಿಲ್ಲಿಸಲು ಜಾಟ್ ಸಮುದಾಯಕ್ಕೆ ಡಿಜಿಪಿ ಮನವಿ

ಹರ್ಯಾಣ, ಫೆ.20: ಹರ್ಯಾಣದಲ್ಲಿ ಸಂಭವಿಸಿದ ಹಿಂಸಾಚಾರಕ್ಕೆ ಈ ವರೆಗೆ ನಾಲ್ವರು ಬಲಿಯಾಗಿದ್ದಾರೆ ಮತ್ತು 78 ಮಂದಿ ಗಾಯಗೊಂಡಿದ್ದಾರೆ ಎಂದು ರಾಜ್ಯದ ಡಿಜಿ-ಐಜಿಪಿ ವೈ.ಪಿ. ಸಿಂಘಾಲ್ ತಿಳಿಸಿದ್ದಾರೆ.
9 ಜಿಲ್ಲೆಗಳಲ್ಲಿ ಹಿಂಸಾಚಾರ ಮುಂದುವರಿದಿದೆ. ಘಟನೆಯಲ್ಲಿ ಗಾಯಗೊಂಡವರ ಪೈಕಿ ಐದು ಮಂದಿ ಪೊಲೀಸರು ಮತ್ತು ಐದು ಮಂದಿ ನಾಗರಿಕರು ಐಸಿಯುವಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿ ಹಲವರನ್ನು ಬಂಧಿಸಲಾಗಿದೆ ಎಂದು ಡಿಜಿಪಿ ಸಿಂಘಾಲ್ ಮಾಹಿತಿ ನೀಡಿದ್ದಾರೆ.
ಪ್ರತಿಭಟನೆಯನ್ನು ನಿಲ್ಲಿಸುವಂತೆ ಜಾಟ್ ಸಮುದಾಯದವರಲ್ಲಿ ಡಿಜಿಪಿ ಅವರು ಮನವಿ ಮಾಡಿದ್ದಾರೆ.
Next Story





