ಸಿಎಂ. ಸಿದ್ದರಾಮಯ್ಯ ತವರೂರು ಸಿದ್ದರಾಮನ ಹುಂಡಿಗೆ ಬಂತು ಹಾವು... !

ಮೈಸೂರು, ಫೆ.20: ಮುಖ್ಯ ಮಂತ್ರಿ ಸಿದ್ದರಾಮಯ್ಯ ತವರೂರು ಮೈಸೂರು ಜಿಲ್ಲೆಯ ಸಿದ್ದರಾಮಯ್ಯನ ಹುಂಡಿಯ ಮತಗಗಟ್ಟೆಯ ಬಳಿ ಹಾವೊಂದು ಪತ್ತೆಯಾಗಿದ್ದು, ಸ್ಥಳೀಯರು ಹಾವನ್ನು ಹಿಡಿದು ಕೊಂದು ಹಾಕಿದ್ದಾರೆ.
ಮುಖ್ಯ ಮಂತ್ರಿ ಸಿದ್ದರಾಮಯ್ಯ ಜಿಲ್ಲಾ ಪಂಚಾಯತ್ ಮತ್ತು ತಾಲೂಕು ಪಂಚಾಯತ್ ಚುನಾವಣೆಯಲ್ಲಿ ಮತ ಚಲಾಯಿಸಲು ಸ್ವಲ್ಪ ಹೊತ್ತಿನಲ್ಲಿ ಮತಗಟ್ಟೆಗೆ ಬರುತ್ತಾರೆ ಎಂಬ ಸುದ್ದಿ ಹರಡಿದ ಬೆನ್ನಲ್ಲೆ ಮತಗಟ್ಟೆಯ ಬಳಿ ಹಾವು ಕಾಣಿಸಿಕೊಂಡಿದೆ.
ಸ್ಥಳೀಯರು ಹಾವನ್ನು ಹಿಡಿದು ಕೊಂದು ದೂರ ಎಸೆದಿದ್ದಾರೆ.
Next Story





