ಕೊಣಾಜೆ: ಮತದಾನ

ಕೊಣಾಜೆ: ಮುಡಿಪು ಸಮೀಪದ ಬೋಳಿಯಾರ್ನ ರಂತಡ್ಕ ಮತದಾನ ಕೇಂದ್ರದಲ್ಲಿ ಸಚಿವ ಯು.ಟಿ.ಖಾದರ್ ಅವರು ಮತ ಚಲಾಯಿಸಿದರು.

ಕೊಣಾಜೆ: ಹರೇಕಳದ ಮತದಾನ ಕೇಂದ್ರದಲ್ಲಿ ಉಪನ್ಯಾಸಕಿ, ಕೊಣಾಜೆ ಜಿಲ್ಲಾ ಪಂಚಾಯಿತಿಯ ಕಾಂಗ್ರೆಸ್ ಅಭ್ಯರ್ಥಿ ರಶೀದಾ ಬಾನು ತಂದೆ ಮಹಮ್ಮದ್ ಮುಸ್ತಫಾರೊಂದಿಗೆ ಮತದಾನ ಕೇಂದ್ರಕ್ಕೆ ಬಂದು ಮತ ಚಲಾವಣೆ ಮಾಡಿದರು.

ಕೊಣಾಜೆ: ಕುರ್ನಾಡು ಜಿಲ್ಲಾ ಪಂಚಾಯಿತಿ ಕ್ಷೇತ್ರದಲ್ಲಿ ಹಿರಿಯ ಮತದಾರರೊಬ್ಬರನ್ನು ಸಂತೋಷ್ ಕುಮಾರ್ ಬೋಳಿಯಾರ್ ಅವರು ಎತ್ತಿಕೊಂಡು ಬಂದು ಮತ ಚಲಾಯಿಸಲು ಸಹಾಯ ಮಾಡಿದರು.

ಕೊಣಾಜೆ: ಮುಡಿಪುವಿನ ಮತದಾನ ಕೇಂದ್ರಕ್ಕೆ ಹಿರಿಯ ಮತದಾರರಾದ ಬಸಪ್ಪ ಪೂಜಾರಿ ಕೊಡಕ್ಕಲ್ಲು(90) ಅವರು ಊರುಗೋಲಿನ ಸಹಾಯದೊಂದಿಗೆ ಬಂದು ಮತದಾನ ಮಾಡಿದರು.

ಕೊಣಾಜೆ: ಕುರ್ನಾಡು ಜಿಲ್ಲಾ ಪಂಚಾಯಿತಿ ಕ್ಷೇತ್ರದ ಮತದಾನ ಕೇಂದ್ರವೊಂದರಲ್ಲಿ ಬುದ್ದಿಮಾಂದ್ಯ ಯುವಕನ ಮತದಾನಕ್ಕೆ ಅವರ ತಾಯಿ ಸಹಾಯ ಮಾಡಿದರು.

ಕೊಣಾಜೆ: ಕರ್ನಾಟಕ ಸುನ್ನಿ ಉಲಮಾ ಒಕ್ಕೂಟದ ರಾಜ್ಯಾಧ್ಯಕ್ಷ ಖಾಝಿ ಬೇಕಲ್ ಇಬ್ರಾಹಿಂ ಮುಸ್ಲಿಯಾರ್ ಕೈರಂಗಳ ಗ್ರಾಮದ ಮೋಂಟುಗೋಳಿ ಅಂಗನವಾಡಿ ಕೇಂದ್ರದಲ್ಲಿ ಮತ ಚಲಾಯಿಸಿದರು.
Next Story







