Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಅಂತಾರಾಷ್ಟ್ರೀಯ
  4. ಈ ಫೇಲೆಸ್ತೀನಿ ಪತ್ರಕರ್ತನ...

ಈ ಫೇಲೆಸ್ತೀನಿ ಪತ್ರಕರ್ತನ ಅನ್ನಸತ್ಯಾಗ್ರಹ 87ನೆ ದಿವಸಕ್ಕೆ!:

ಇಸ್ರೇಲ್‌ನ ಕ್ರೌರ್ಯವಿನ್ನೂ ಮುಗಿದಿಲ್ಲ. ಯಾಕೋ ಜಗತ್ತು ಮೌನವಾಗಿದೆ !

ವಾರ್ತಾಭಾರತಿವಾರ್ತಾಭಾರತಿ20 Feb 2016 7:17 PM IST
share
ಈ ಫೇಲೆಸ್ತೀನಿ ಪತ್ರಕರ್ತನ ಅನ್ನಸತ್ಯಾಗ್ರಹ 87ನೆ ದಿವಸಕ್ಕೆ!:

ಫೆಲೆಸ್ತೀನಿ ಪತ್ರಕರ್ತ ಇದೋ ಅನ್ನಸತ್ಯಾಗ್ರಹದ ಮೂಲಕ ಸಾವಿನ ದವಡೆಗೆ ಸಾಗುತ್ತಿದ್ದಾನೆ. ಝೀಯೊನಿಸ್ಟ್ ಕ್ರೌರ್ಯದ ವಿರುದ್ಧ ಒಬ್ಬ ಪತ್ರಕರ್ತ ತನ್ನ ಪಾಣವನ್ನು ಪಣವಾಗಿಟ್ಟು ನಡೆಸುತ್ತಿರುವ ಒಂದು ಹೋರಾಟವಿದು. ಆದರೆ ಜಗತ್ತು ಇದನ್ನು ಅಷ್ಟಾಗಿ ಗಮನಿಸಿಲ್ಲ. ಹಮಾಸ್ ಭಯೋತ್ಪಾದಕ ಎಂದಾರೋಪಿಸಿ ಇಸ್ರೇಲ್ ಬಂಧಿಸಿರುವ ಮುಹಮ್ಮದ್‌ರ ಸತ್ಯಾಗ್ರಹಕ್ಕೆ 87 ದಿವಸಕಳೆದಿವೆ. ತನ್ನನ್ನು ಅನ್ಯಾಯವಾಗಿ ಇಸ್ರೇಲ್ ಬಂಧಿಸಿಟ್ಟಿದೆ ಎಂದು ಪ್ರತಿಭಟಿಸಿ ಇವರು ಅನ್ನಸತ್ಯಾಗ್ರಹವನ್ನು ಪ್ರಾರಂಭಿಸಿದ್ದರು.

ಅವರು ಸಾವಿನೊಂದಿಗೆ ಹೋರಾಡುವ ವೀಡಿಯೊ ಬಹಿರಂಗವಾಗಿದೆ. ನವೆಂಬರ್‌ನಿಂದ ಅವರು ಆಹಾರ ಸೇವಿಸಲು ನಿರಾಕರಿಸುತ್ತಿದ್ದಾರೆ. ಶರೀರದ ಅರ್ಧಾಂಶವೇ ಅಶಕ್ತವಾಗಿದೆ. ಮಿನರಲ್ ನೀರು ಹಾಗೂ ವಿಟಮಿನಲ್‌ಗಳನ್ನು ಅವರಿಗೆ ನೀಡಲಾಗುತ್ತಿದೆ. ತನ್ನ ವಿಚಾರಣೆ ನಡೆಸುವಾಗ ಅತಿಕ್ರೂರವಾಗಿ ಹಿಂಸಿಸಿದ್ದನ್ನು ಪ್ರತಿಭಟಿಸಿ ಅವರು ಅನ್ನ ಸತ್ಯಾಗ್ರಹಕ್ಕಿಳಿದಿದ್ದರು.

ಇಸ್ರೇಲ್ ಇವರನ್ನು ಹಮಾಸ್ ಕಾರ್ಯಕರ್ತನೆಂದು ಹೇಳುತ್ತಿದೆ. ಇಸ್ರೇಲ್‌ನ ವಿವಾದಾಸ್ಪದ ಕಾನೂನು ಪ್ರಕಾರ ಶಂಕೆಯಾಧಾರದಲ್ಲಿ ಯಾರನ್ನಾದರೂ ಆರುತಿಂಗಳವರೆ ವಿಚಾರಣೆಯಿಲ್ಲದೆ ಜೈಲಿನೊಳಗೆ ಇರಿಸಬಹುದಾಗಿದೆ. ಈ ಪತ್ರಕರ್ತನ ಅವಸ್ಥೆಯ ಬಗ್ಗೆ ವಿಶ್ವಸಂಸ್ಥೆ ಕಳವಳ ವ್ಯಕ್ತಪಡಿಸಿದೆ. ಅವರ ಆರೋಗ್ಯ ಸ್ಥಿತಿ ಜಿಂತಾಜನಕವಾಗಿದೆ ಎಂದು ರೆಡ್‌ಕ್ರಾಸ್ ಸೊಸೈಟಿ ಹೇಳುತ್ತಿದೆ.

ಮುಹಮ್ಮದ್‌ರ ಬಿಡುಗಡೆಗಾಗಿ ತಾನು ಅನ್ನ ಸತ್ಯಾಗ್ರಹಕ್ಕಿಳಿದಿದ್ದೇನೆ ಎಂದು ಅರಬ್ ಇಸ್ರೇಲಿ ವಿದ್ವಾಂಸರಾದ ರಾಯಿದ್ ಸಲಾಹ್ ಘೋಷಿಸಿದ್ದಾರೆ. ಯಾರೂ ಬೇಕಾದರೂ ಈ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಬಹುದೆಂದು ಅವರು ಹೇಳಿದ್ದಾರೆ. ಮುಹಮ್ಮದ್‌ರನ್ನು ಬಂಧನದಲ್ಲಿಡುವ ಆದೇಶವನ್ನು ಸುಪ್ರೀಂ ಕೋರ್ಟ್ ಅಧಿಕೃತವಾಗಿ ಫೆ. 14ಕ್ಕೆ ರದ್ದುಗೊಳಿಸಿದೆ. ಫೆಲೆಸ್ತೀನ್‌ನ ವೆಸ್ಟ್‌ಬ್ಯಾಂಕ್‌ನ ರಮಲ್ಲಾದ ಆಸ್ಪತ್ರೆಗೆ ಹಸ್ತಾಂತರಿಸುವ ಮುಹಮ್ಮದ್‌ರ ಬೇಡಿಕೆಯನ್ನು ಕೋರ್ಟ್ ಪುರಸ್ಕರಿಸಲಿಲ್ಲ.

ಆಮೇಲೆ ಅಫಲಾ ಎಂಬಲ್ಲಿನ ಆಸ್ಪತ್ರೆಗೆ ಸೇರಿಸಲಾಯಿತು. ಸೋಮವಾರ ಅವರನ್ನು ಈಸ್ಟ್ ಜೆರುಸಲೇಮ್‌ನಲ್ಲಿ ಫೆಲೆಸ್ತೀನಿ ವ್ಯಕ್ತಿಯ ಒಡೆತನದಲ್ಲಿರುವ ಮಾಕಾಸೆದ್ ಆಸ್ಪತ್ರೆಗೆ ಸೇರಿಸಲು ಕೋರ್ಟು ಸಮ್ಮತಿಸಿದೆ ಎಂದು ವರದಿಗಳಾಗಿವೆ. ಆದರೆ ಇದಕ್ಕೆ ಮುಹಮ್ಮದ್ ಸಿದ್ಧರಾಗಿಲ್ಲ ಎಂದು ಅವರನ್ನು ಸಂದರ್ಶಿಸಿದ ಮಾಜಿ ಅರಬ್ ಇಸ್ರೇಲಿ ಪಾರ್ಲಿಮೆಂಟ್ ಸದಸ್ಯ ಹಾಗೂ ಫಿಶಿಸಿಯನ್ ಔಫ್ ಅಗ್ಬಾರಿಯ ಹೇಳಿದ್ದಾರೆ.

ಇಬ್ಬರು ಮಕ್ಕಳ ತಂದೆಯಾದ ಮುಹಮ್ಮದ್‌ರಿಗೆ ಮೂವತ್ತೆರಡು ವರ್ಷ ವಯಸ್ಸಾಗಿದೆ. ಸೌದಿ ಅರೇಬಿಯದ ಅಲ್‌ಮಜ್ದ್ ಟೆಲಿವಿಝನ್‌ನ ನೆಟ್‌ವರ್ಕ್ ಕರಸ್ಪಾಡೆಂಟ್ ಆಗಿದ್ದಾರೆ. ನವೆಂಬರ್ 21ಕ್ಕೆ ಅವರನ್ನು ರಮಲ್ಲಾದಲ್ಲಿ ಇಸ್ರೇಲ್ ಪೊಲೀಸರು ಬಂಧಿಸಿದ್ದರು.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X