ಮದುವೆ ಫೋಟೊದಲ್ಲಿರುವ ಚಿನ್ನಾಭರಣಗಳನ್ನು ವಿಚ್ಛೇದನ ಸಮಯದಲ್ಲಿ ಮರಳಿಕೇಳಲಾಗದು: ಕೇರಳ ಹೈಕೋರ್ಟ್

ತಿರುವನಂತಪುರಂ: ಮದುವೆ ಸಂದರ್ಭದಲ್ಲಿ ಧರಿಸಿದ್ದ ಚಿನ್ನಾಭರಣಗಳನ್ನು ವಿವಾಹ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸುವಾಗ ಮರಳಿ ಕೇಳಲು ಸಾಧ್ಯವಿಲ್ಲ ಎಂದು ಕೇರಳ ಹೈಕೋರ್ಟ್ ಹೇಳಿದೆ. ವಿವಾಹ ಸಮಯದಲ್ಲಿ ಧರಿಸಿದ ಚಿನ್ನಾಭರಣ ನೈಜ ಚಿನ್ನವೇ ಅಥವಾ ರೋಲ್ಡ್‌ಗೋಲ್ಡ್ ಆಗಿದೆಯೇ ಎಂಬುದನ್ನು ಫೋಟೊ ನೋಡಿ ಖಚಿತ ಪಡಿಸಲು ಸಾಧ್ಯವಿಲ್ಲ ಎಂದು ಕೋರ್ಟ್ ಬೆಟ್ಟು ಮಾಡಿದೆ.
ತಿರುವನಂತಪುರದ ವಿ. ಮುಮ್ಮದ್ ಅಲಿ ವಿವಾಹ ವಿಚ್ಛೇದನಕ್ಕೆ ಸಲ್ಲಿಸಿದ ಅರ್ಜಿಯನ್ನು ಪರಿಗಣಿಸಿ ಜಸ್ಟೀಸ್ ಸಿ.ಟಿ ರವಿಕುಮಾರ್ ಈ ತೀರ್ಪು ನೀಡಿದ್ದಾರೆ. ಚಿನ್ನದ ಯಥಾರ್ಥ ಮೌಲ್ಯವನ್ನು ನಿರ್ಧರಿಸಲು ಫೋಟೊ ವನ್ನು ಪರಿಗಣಿಸುವಂತಿಲ್ಲ. ಬದಲಾಗಿ ಸ್ಪಷ್ಟ ಪುರಾವೆ ಬೇಕು. ಫೋಟೊ ನೋಡಿ ತೀರ್ಪು ನೀಡಲು ಸಾಧ್ಯವಿಲ್ಲ ಎಂದು ಅವರು ಹೇಳಿದ್ದಾರೆ. ಫೋಟೊದಲ್ಲಿ ಕಾಣುವ ಚಿನ್ನ ನೈಜವೇ ಎಂದು ತಿಳಿದುಕೊಳ್ಳುವ ತಂತ್ರಜ್ಞಾನ ಇನ್ನೂ ಬಂದಿಲ್ಲ. ಮುಸ್ಲಿಮ್ ವಿವಾಹ ಕಾನೂನಿನಂತೆ ವಿವಾಹವಿಚ್ಛೇದನವಾಗುವ ಮಹಿಳೆಗೆ ಮರುಮದುವೆ ಆಗುವವರೆಗೂ ಜೀವನಾಂಶ ಪಡೆಯುವ ಅರ್ಹತೆಯಿದೆ ಎಂದು ಕೋರ್ಟ್ ತಿಳಿಸಿದೆ.
Next Story





