ಮಂಗಳೂರು : ಕೆ.ಎಸ್. ನರಸಿಂಹಸ್ವಾಮಿ ಕಾವ್ಯಾನುಸಂಧಾನ ಕಾರ್ಯಕ್ರಮ

ಮಂಗಳೂರು,ಫೆ.20:ಮಂಗಳೂರು ಕಲ್ಕೂರ ಪ್ರತಿಷ್ಠಾನ ಹಾಗೂ ಐಕಳ ಪೊಂಪೈ ಪದವಿ ಕಾಲೇಜು ಭಾಷಾ ಸಂಘದ ಆಶ್ರಯದಲ್ಲಿ ಕಾಲೇಜಿನ ಸಭಾಂಗಣದಲ್ಲಿ ಇತ್ತೀಚೆಗೆ ಕೆ.ಎಸ್. ನರಸಿಂಹಸ್ವಾಮಿ ಕಾವ್ಯಾನುಸಂಧಾನ ಕಾರ್ಯಕ್ರಮ ನಡೆಯಿತು.
ಕಲ್ಕೂರ ಪ್ರತಿಷ್ಠಾನದ ಅಧ್ಯಕ್ಷ ಎಸ್. ಪ್ರದೀಪ ಕುಮಾರ ಕಲ್ಕೂರ ಕಾರ್ಯಕ್ರಮ ಉದ್ಘಾಟಿಸಿದರು. ಐಕಳ ಪೊಂಪೈ ಪದವಿ ಕಾಲೇಜು ಪ್ರಿನ್ಸಿಪಾಲ್ ಡಾ. ಜೋನ್ ಕ್ಲಾರೆನ್ಸ್ ಮಿರಾಂದ ಅಧ್ಯಕ್ಷತೆ ವಹಿಸಿದ್ದರು. ಕಟೀಲು ದುರ್ಗಾಪರಮೇಶ್ವರಿ ದೇವಳ ಪದವಿ ಕಾಲೇಜು ಪ್ರಿನ್ಸಿಪಾಲ್ ಎಂ. ಬಾಲಕೃಷ್ಣ ಶೆಟ್ಟಿ ಯವರು ಕೆ ಎಸ್. ಎನ್. ಬಗ್ಗೆ ಉಪನ್ಯಾಸ ನೀಡಿದರು. ಜಯಲಕ್ಷ್ಮೀ ಬಿ. ಶೆಟ್ಟಿ, ಜನಾರ್ದನ ಹಂದೆ ಉಪಸ್ಥಿತರಿದ್ದರು. ಕಾಲೇಜು ಭಾಷಾ ಸಂಘದ ನಿರ್ದೇಶಕಿ ಡಾ. ಪ್ರೀಡಾ ಡಿಸೋಜ ಸ್ವಾಗತಿಸಿದರು. ಡಾ. ಮಂಜುನಾಥ ಎಸ್. ಎ. ವಂದಿಸಿದರು.
Next Story





