ಮೈಕ್ರೋಸಾಫ್ಟ್ ಕ್ರಿಯೇಟ್ ಟು ಇನ್‌ಸ್ಪಾರ್ ಪ್ರಾಜೆಕ್ಟ್ - ಮೌಂಟ್ ಕಾರ್ಮೆಲ್ ಕೇಂದ್ರೀಯ ಶಾಲೆಗೆ ಪ್ರಶಸ್ತಿ

ಮಂಗಳೂರು,ಫೆ.20:ಮೈಕ್ರೋಸಾಫ್ಟ್ ಕ್ರಿಯೇಟ್ ಟು ಇನ್‌ಸ್ಪಾರ್ ವತಿಯಿಂದ ಇತ್ತೀಚೆಗೆ ನಗರದ ಸಂತ ಅಲೋಶಿಯಸ್ ಗೊಂಝಾಗ ಶಾಲೆಯಲ್ಲಿ ಜರಗಿದ ವಿಶೇಷ ಯೋಜನಾ ಕಾರ್ಯಾಗಾರದಲ್ಲಿ ಮೆರಿಲ್ ಮೌಂಟ್ ಕಾರ್ಮೆಲ್ ಕೇಂದ್ರೀಯ ವಿದ್ಯಾಸಂಸ್ಥೆಯು ನಾಲ್ಕು ವಿಭಾಗಗಳಲ್ಲಿ ಪ್ರಶಸ್ತಿಯನ್ನು ಪಡೆದಿದೆ.
ಅಧಿಕ ಇಲೆಕ್ಟ್ರಾನಿಕ್ ತ್ಯಾಜ್ಯ ಶೇಖರಣೆ, ಸಮಾಜದಲ್ಲಿ ಪರಿಸರ ಜಾಗೃತಿ ಮೂಡಿಸುವುದ್ದಕ್ಕಾಗಿ ಮಾಧ್ಯಮಗಳ ಮೂಲಕ ಸಮಾಜ ಜಾಗೃತಿ ಹಾಗೂ ಮೈಕ್ರೋಸಾಫ್ಟ್ ಪ್ರಾಜೆಕ್ಟ್‌ಗಳಲ್ಲಿ ಸಂಸ್ಥೆಯ ಅತ್ಯುತ್ತಮ ಯೋಗದಾನಕ್ಕಾಗಿ ಈ ಪ್ರಶಸ್ತಿ ಲಭಿಸಿದೆ.
ಕಾರ್ಯಾಗಾರದ ಸಮಾರೋಪ ಸಮಾರಂಭದಲ್ಲಿ ಮೌಂಟ್ ಕಾರ್ಮೆಲ್ ಶಾಲೆಯ ಪರವಾಗಿ ಶಿಕ್ಷಕಿಯರಾದ ಹನಾ ಹಾಗೂ ವಿದ್ಯಾ ರೈ ಅವರು ಕಾರ್ಯಕ್ರಮದ ಮುಖ್ಯ ಅತಿಥಿಯಾಗಿದ್ದ ಸಂತ ಅಲೋಶಿಯಸ್ ಗೊಂಝಾಗ ಶಾಲೆಯ ಸಂಚಾಲಕ ಫಾ. ಐವನ್ ಮೆಂಡೋನ್ಸಾ ಅವರಿಂದ ಪ್ರಶಸ್ತಿ ಸ್ವೀಕರಿಸಿದರು. ಮೈಕ್ರೋಸಾಫ್ಟ್ ವಿದ್ಯಾ ಕಂಪನಿಯ ಪ್ರತಿನಿಧಿಗಳಾದ ಪ್ರಿಯ ಹಾಗೂ ಜಯಶ್ರೀ ಗೋವಿಂದ ಉಪಸ್ಥಿತರಿದ್ದರು.
Next Story





