ಚುಕುಟು ಸುದ್ದಿಗಳು
ಇಂದು ಸಂತವಾಣಿ ಭಕ್ತಿಗೀತೆ
ಮಂಗಳೂರು, ಫೆ.20: ಸಂಗೀತ ಭಾರತಿ ಪ್ರತಿಷ್ಠಾನ ವತಿಯಿಂದ ನಗರದ ರಥಬೀದಿಯಲ್ಲಿರುವ ಶ್ರೀವೆಂಕಟರಮಣ ದೇವಸ್ಥಾನದ ಸಹಯೋಗದಲ್ಲಿ ರಥೋತ್ಸವ ಪ್ರಯುಕ್ತ ದೇವಸ್ಥಾನದ ರಾಜಾಂಗಣದಲ್ಲಿ ೆ.21ರಂದು ಸಂಜೆ 5:30 ಗಂಟೆಗೆ ಭಕ್ತಿ ರಥ ಸಂತವಾಣಿ ಭಕ್ತಿಗೀತೆ ಕಾರ್ಯಕ್ರಮ ನಡೆಯಲಿದೆ ಎಂದು ಪ್ರತಿಷ್ಠಾನದ ಉಪಾಧ್ಯಕ್ಷ ನರೇಂದ್ರ ಎಲ್.ನಾಯಕ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಭಕ್ತಿ ಸಂಗೀತ ಗಾಯಕರಾದ ಪಂಡಿತ್ ಉಪೇಂದ್ರ ಭಟ್, ಪುತ್ತೂರು ನರಸಿಂಹ ನಾಯಕ್ ಹಾಗೂ ಶಂಕರ್ ಶಾನುಭಾಗ್ ಸಂಗೀತ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ. ಸಂಗೀತ ಕಾರ್ಯಕ್ರಮದಲ್ಲಿ ಹಾರ್ಮೋನಿಯಂನಲ್ಲಿ ನರೇಂದ್ರ ಎಲ್.ನಾಯಕ್, ತಬ್ಲಾದಲ್ಲಿ ರಾಜೇಶ್ ಭಾಗವತ್ ಮತ್ತು ದೀಪಕ್ ನಾಯಕ್, ವಯೋಲಿನ್‌ನಲ್ಲಿ ಮಣಿಪಾಲದ ಟಿ.ರಂಗ ಪೈ, ವಿಶೇಷ ಪಕ್ಕವಾದ್ಯದಲ್ಲಿ ಮುಂಬೈನ ಸೂರ್ಯಕಾಂತ್ ಸುರ್ವೆ, ಸಮನ್ವಯಕಾರರಾಗಿ ಉಷಾಪ್ರಭಾ ಎನ್.ನಾಯಕ್ ಸಹಕರಿಸಲಿದ್ದಾರೆ.
ಪ್ರತಿಷ್ಠಾನದ ಕೋಶಾಧಿಕಾರಿ ಉಷಾಪ್ರಭಾ ಎನ್. ನಾಯಕ್ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.
ಇಂದು ಪ್ರೇಮ್ ರಾಗಿಣಿ ಕಾರ್ಯಕ್ರಮ
ಮಂಗಳೂರು, ಫೆ.20: ದೈವಿಕ್ ಅಮೃತ್ ಕೊಂಕಣಿ ಧಾರ್ಮಿಕ ಮಾಸಿಕ ಪತ್ರಿಕೆಯ ದಶಮಾನೋತ್ಸವ ಪ್ರಯುಕ್ತ ಮುಂಬೈ ಸಂಗೀತ ಅಭಿನಯ ಅಕಾಡಮಿಯಿಂದ ‘ಪ್ರೇಮ್ ರಾಗಿಣಿ’ ಕಾರ್ಯಕ್ರಮ ೆ.21ರಂದು ಸಂಜೆ 6 ಗಂಟೆಗೆ ಕುಲಶೇಖರ ಕೋರ್ಡೆಲ್ ಚರ್ಚ್ ವಠಾರದಲ್ಲಿ ನಡೆಯಲಿದೆ ಎಂದು ಪತ್ರಿಕೆಯ ನಿರ್ದೇಶಕ ರೆ.ಾ.ಆ್ಯಂಡ್ರು ಡಿಸೋಜ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
‘ಪ್ರೇಮ್ ರಾಗಿಣಿ’ ಸಂಗೀತ, ನೃತ್ಯ ಆಧಾರಿತ ಧ್ವನಿ ಬೆಳಕಿನ ವಿಭಿನ್ನ ಕಾರ್ಯಕ್ರಮವಾಗಿದ್ದು,ರೆ.ಡಾ.ಚಾರ್ಲ್ಸ್ ವಾಜ್ ನಿರ್ದೇಶನದಲ್ಲಿ ನಾನಾ ಧರ್ಮಗಳ ಕಲಾವಿದರು ಅಭಿನಯಿಸುವ ಸೌಹಾರ್ದಯುತ ಕಾರ್ಯವಾಗಿದ್ದು, ದೇವರು ಆದಿಯಲ್ಲಿ ಆಕಾಶ ಮತ್ತು ಭೂಮಿಯ ರಚನೆಯಿಂದ ಮೊದಲ್ಗೊಂಡು ಯೇಸು ಕ್ರಿಸ್ತರ ಪುನರುತ್ಥಾನದ ಕಥೆಯನ್ನು ಬಿಂಬಿಸಲಾಗುವುದು ಎಂದು ಅವರು ಹೇಳಿದರು.
ಪತ್ರಿಕೆಯ ಸಂಪಾದಕ ಸಂತೋಷ್ ಆಲ್ವಿನ್ ಲೋಬೊ, ೆರ್‌ವಿಂಡ್ಸ್ ಮಾಸ್ ಕಮ್ಯುನಿಕೇಶನ್ಸ್ ನಿರ್ದೇಶಕ ಎಲಿಯಾಸ್ ಫೆರ್ನಾಂಡಿಸ್, ಪ್ರಚಾರ ಸಮಿತಿಯ ಸಂಚಾಲಕ ಸ್ಟ್ಯಾನ್ಲಿ ಬಂಟ್ವಾಳ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.
ಇಂದು ಅಭಿನಂದನಾ ಕಾರ್ಯಕ್ರಮ
ಉಡುಪಿ, ಫೆ.20: ಕಳೆದ 35 ವರ್ಷಗಳಿಂದ ದೇಶದ ವಿವಿಧೆಡೆ ಸೇವೆಗೈಯುತ್ತಿರುವ ಮರ್ಣೆ-ಕನರಾಡಿ ಗ್ರಾಮದ ಏಳು ಮಂದಿ ಬ್ರಹ್ಮಕುಮಾರಿಯರಿಗೆ ಹುಟ್ಟೂರಿನ ಅಭಿನಂದನೆ ಹಾಗೂ ಈಶ್ವರೀಯ ಆಧ್ಯಾತ್ಮಿಕ ಸಂದೇಶ ಕಾರ್ಯಕ್ರಮವನ್ನು ಫೆ.21ರಂದು ಅಪರಾಹ್ನ 3ಗಂಟೆಗೆ ಮರ್ಣೆ ಖಾಸಗಿ ಹಿರಿಯ ಪ್ರಾಥಮಿಕ ಶಾಲೆಯ ಬಯಲು ರಂಗಮಂಟಪದಲ್ಲಿ ಆಯೋಜಿಸಲಾಗಿದೆ ಎಂದು ಅಭಿನಂದನಾ ಸಮಿತಿಯ ಅಧ್ಯಕ್ಷ, ನಿವೃತ್ತ ಪ್ರಾಂಶುಪಾಲ ಡಾ.ವಾದಿರಾಜ ಭಟ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಕನರಾಡಿಯಲ್ಲಿ ಹುಟ್ಟಿ ಬೆಳೆದು ಮರ್ಣೆ ಶಾಲೆಯಲ್ಲಿ ಕಲಿತ ಬ್ರಹ್ಮಕುಮಾರಿಗಳಾದ ಗದಗದಲ್ಲಿರುವ ಬಿ.ಕೆ.ಜಯಂತಿ, ಧಾರವಾಡದ ಬಿ.ಕೆ.ಅಂಬುಜಾಕ್ಷಿ, ಕಟಪಾಡಿಯ ಬಿ.ಕೆ.ಶೀತಲಾ, ಪೂನದ ಬಿ.ಕೆ.ಅಂಬುಜ, ರಾಣಿಬೆನ್ನೂರಿನ ಬಿ.ಕೆ.ಮಾಲತಿ, ಮೂಡುಬೆಳ್ಳೆಯ ಬಿ.ಕೆ.ವಿನಯ, ಗಂಟುಕಲ್ಲುವಿನಲ್ಲಿರುವ ಬಿ. ಕೆ.ಪಾರ್ವತಿ ಅವರನ್ನು ಅಭಿನಂದಿಸಲಾಗುವುದು.
ಸುದ್ದಿಗೋಷ್ಠಿಯಲ್ಲಿ ಬಿ.ಕೆ.ಜಗನ್ನಾಥ್ ಕುಂದರ್, ಬಿ.ಕೆ.ಮಾಲತಿ, ಬಿ.ಕೆ. ವಿನಯ, ಬಿ.ಕೆ.ಜಯಂತಿ ಉಪಸ್ಥಿತರಿದ್ದರು
ಇಂದು ಬ್ರಹ್ಮಕಲಶ
ಉಳ್ಳಾಲ, ಫೆ.20: ಶ್ರೀ ಮಲರಾಯ ಧೂಮಾವತಿ ಬಂಟ ದೈವಗಳ ಚಾರಿಟೇಬಲ್ ಟ್ರಸ್ಟ್ ಆಶ್ರಯದಲ್ಲಿ ಮಾ.21ರಿಂದ 26ರತನಕ ಕಿನ್ಯ ಬೆಳರಿಂಗೆಯ ಶ್ರೀ ಮಲರಾಯ ಧೂಮಾವತಿ ಬಂಟ ದೈವಗಳ ಪುನಃ ಪ್ರತಿಷ್ಠೆ ಮತ್ತು ಬ್ರಹ್ಮಕಲಶ ಹಾಗೂ ಧರ್ಮನೇಮ ನಡೆಯಲಿದೆ.
ಫೆ.23ರಿಂದ ಪುನರ್ ಪ್ರತಿಷ್ಠೆ
ಮಂಗಳೂರು, ಫೆ.20: ಕುಂಜತ್‌ಬೈಲ್ ಜ್ಯೋತಿನಗರ ಜ್ಯೋತಿಸ್ವರೂಪ ಶ್ರೀ ಅಯ್ಯಪ್ಪ ಸ್ವಾಮಿ ಭಜನಾ ಮಂದಿರದ ಶ್ರೀಧರ್ಮಶಾಸ್ತ ಪುನರ್ ಪ್ರತಿಷ್ಠೆ ಕಾರ್ಯಕ್ರಮ ೆ.23ರಿಂದ 25ರವರೆಗೆ ನಡೆಯಲಿದೆ ಎಂದು ಜೀರ್ಣೋದ್ಧಾರ ಸಮಿತಿ ಸಂಚಾಲಕ ಪ್ರಕಾಶ್ ರೈ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಜೀರ್ಣೋದ್ಧಾರ ಸಮಿತಿ ಗೌರವಾಧ್ಯಕ್ಷ ತುಕರಾಮ ಸನಿಲ್, ಹರೀಶ್ ಶೆಟ್ಟಿ, ಸುಮಂತ್ ರಾವ್, ವಿ.ರಾಜೇಶ್ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.
ಫೆ.28: ನಾಗಮಂಡಲೋತ್ಸವ
ಮಂಗಳೂರು, ಫೆ.20: ರಥಬೀದಿ ಗಾಯತ್ರಿದೇವಿ ದೇವಸ್ಥಾನ ರಸ್ತೆಯ ಶಶಿಮಹಲ್ ಕಂಪೌಂಡ್‌ನಲ್ಲಿ ಚತುಃಪವಿತ್ರ ನಾಗಮಂಡಲೋತ್ಸವ ೆ.28ರಂದು ನಡೆಯಲಿದೆ ಎಂದು ನಾಗಮಂಡಲ ಪ್ರಚಾರ ಮತ್ತು ಮಾಧ್ಯಮ ಸಮಿತಿಯ ರಾಜಗೋಪಾಲ ರೈ ತಿಳಿಸಿದರು.
ನಾಗಮಂಡಲ ಆಯೋಜಕ ಮಹೇಂದ್ರ ಕುಮಾರ್, ಸಮಿತಿ ಅಧ್ಯಕ್ಷ ಬಿ.ಅಮರನಾಥ್ ರೈ, ಸಾಂಸ್ಕೃತಿಕ ಕಾರ್ಯಕ್ರಮ ಸಮಿತಿ ಅಧ್ಯಕ್ಷ ಎಂ.ಶಶಿಧರ ಹೆಗ್ಡೆ, ಅಜಿಲ ಅಡ್ವರ್ಟೈಸರ್ಸ್‌ನ ದೇವಿಪ್ರಸಾದ್ ಅಜಿಲ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.
29ರಂದು ಹಿರಿಯ ನಾಗರಿಕರಿಗೆ ಪ್ರವಾಸ
ಕಾರ್ಕಳ, ಫೆ.20: ಕಾರ್ಕಳ ತಾಲೂಕು ಹಿರಿಯ ನಾಗರಿಕರ ಸಂಘದ ವತಿಯಿಂದ ಕಟೀಲು, ಪೊಳಲಿ, ಪಿಲಿಕುಳ ಧಾರ್ಮಿಕ ಹಾಗೂ ಶೈಕ್ಷಣಿಕ ಸ್ಥಳಗಳಿಗೆ ಫೆ.29ರಂದು ಪ್ರವಾಸ ಹಮ್ಮಿಕೊಳ್ಳಲಾಗಿದೆ. ಸಂಘದ ಸದಸ್ಯರು ಫೆ.25ರೊಳಗೆ ಹೆಸರು ನೊಂದಾಯಿಸಬಹುದು. ಮಾಹಿತಿಗೆ ಸಂಘದ ಕಚೇರಿ (ಮೊ.ಸಂ:9902171444, 9845054498)ಯನ್ನು ಸಂಪರ್ಕಿಸಬಹುದು.
ಮಾ.6: ಎಲಿಯ ಮಸೀದಿಯ ಉರೂಸ್
ಮೂಡುಬಿದಿರೆ, ಫೆ.20: ಪುಚ್ಚೆಮೊಗರು ಗ್ರಾಮದ ಎಲಿಯ ಜುಮಾ ಮಸೀದಿಯಲ್ಲಿ ಸೈಯದ್ ಡಾ. ಅಬೂಬಕರ್ ವಲಿಯುಲ್ಲಾಹಿ ಹೆಸರಿನಲ್ಲಿ ಪ್ರತಿ ಎರಡು ವರ್ಷಕ್ಕೊಮ್ಮೆ ನಡೆಯುವ ಮುಖಾಂ ಉರೂಸ್ ಮಾ.6ರಂದು ನಡೆಯಲಿದೆ ಎಂದು ಮಸೀದಿ ಆಡಳಿತ ಸಮಿತಿ ಅಧ್ಯಕ್ಷ ಅಬ್ದುಲ್ಲತೀಫ್ ಮದರ್ ಇಂಡಿಯಾ ತಿಳಿಸಿದರು. ಎಲಿಯ ಮಸೀದಿಗೆ 800 ವರ್ಷಗಳ ಇತಿಹಾಸವಿದೆ. ಕಳೆದ 30 ವರ್ಷಗಳಿಂದ ಇಲ್ಲಿ ಉರೂಸ್ ಕಾರ್ಯಕ್ರಮ ನಡೆಯುತ್ತಿವೆ. ಮಾ.6ರಂದು ಸಂಜೆ ಸ್ಥಳೀಯ ಖತೀಬ್ ಬಿ.ಕೆ. ಅಲ್ತಾಫ್ ಅಧ್ಯಕ್ಷತೆಯಲ್ಲಿ ನಡೆಯುವ ಉರೂಸ್ ಕಾರ್ಯಕ್ರಮವನ್ನು ದ.ಕ ಜಿಲ್ಲಾ ಖಾಝಿ ಶೈಖುನಾ ತ್ವಾಕ ಅಹ್ಮದ್ ಮುಸ್ಲಿಯಾರ್ ಉದ್ಘಾಟಿಸಲಿದ್ದಾರೆ. ಸೈಯದ್ ಅಲಿ ತಂಙಳ್ ಕುಂಬೋಳ್, ಕೆ.ಐ. ಅಬ್ದುಲ್ ಖಾದರ್ ದಾರಿಮಿ ಕುಕ್ಕಿಲ ಮತ್ತಿತರ ಧಾರ್ಮಿಕ ಮುಖಂಡರು ಭಾಗವಹಿಸಲಿದ್ದಾರೆ ಎಂದರು.
ಜಮಾಅತ್ ಪ್ರಮುಖರಾದ ಯೂಸುಫ್ ಮಿಜಾರು, ಅಬ್ದುಲ್ ಖಾದರ್ ಮತ್ತು ಉಮರಬ್ಬ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದ್ದರು.
ಫೆ.27: ಮಂಗಳೋತ್ಸವ
ಕಿನ್ನಿಗೋಳಿ, ಫೆ.20: ಶ್ರೀ ಶನೀಶ್ವರ ಮಂಡಳಿ ಪಂಜ ಕೊಯಿಕುಡೆ ಇದರ ಶನೀಶ್ವರ ದೇವರ ಪೂಜಾ ಮಂಗಳೋತ್ಸವವು ವೇದಮೂರ್ತಿ ಪಂಜ ವಾಸುದೇವ ಭಟ್ಟರ ಪೌರೋಹಿತ್ಯದಲ್ಲಿ ಖ್ಯಾತ ಕಲಾವಿದರ ಕೂಡುವಿಕೆಯಲ್ಲಿ ಯಕ್ಷಗಾನ ತಾಳಮದ್ದಳೆ ಶೈಲಿಯಲ್ಲಿ ಫೆ.27ರಂದು ರಾತ್ರಿ 9 ಗಂಟೆಗೆ ಪಂಜ ನಿತ್ಯಾನಂದ ಅಕ್ಕಿಗಿರಣಿಯ ವಠಾರದಲ್ಲಿ ನಡೆಯಲಿದೆ ಎಂದು ಶನೀಶ್ವರ ಮಂಡಳಿಯ ಪ್ರಕಟನೆ ತಿಳಿಸಿದೆ.
ತಝ್‌ಕಿಯಾ ಗಾರ್ಡನ್‌ಗೆ ಪದಾಧಿಕಾರಿಗಳ ಆಯ್ಕೆ
ಕುಂದಾಪುರ, ಫೆ.20: ಸೈಯದ್ ಜಅ್ಫರ್ ಅಸ್ಸಖಾಫ್ ತಂಙಳ್ ಕೋಟೇಶ್ವರ ಸಾರಥ್ಯದಲ್ಲಿ ಕುಂದಾಪುರದಲ್ಲಿ ಸ್ಥಾಪನೆಯಾಗಲಿರುವ ಧಾರ್ಮಿಕ, ಶೈಕ್ಷಣಿಕ ವಿದ್ಯಾಕೇಂದ್ರವಾದ ಇಮಾಂ ಬೂಸೂರೀ ತಝ್‌ಕಿಯಾ ಗಾರ್ಡನ್‌ಗೆ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದೆ.
ಗೌರವಾಧ್ಯಕ್ಷರಾಗಿ ಉಡುಪಿ ಜಿಲ್ಲಾ ಖಾಝಿ ಅಲ್‌ಹಾಜ್ ಇಬ್ರಾಹೀಂ ಮುಸ್ಲಿಯಾರ್ ಬೇಕಲ, ಅಧ್ಯಕ್ಷರಾಗಿ ಸೈಯದ್‌ಜಅ್ಫರ್ ಅಸ್ಸಖಾಫ್ ತಂಙಳ್ ಕೋಟೇಶ್ವರ, ಉಪಾಧ್ಯಕ್ಷರಾಗಿ ಶಾಬಾನ್ ಹಂಗಳೂರು, ಕೆ.ಎ. ಅಬ್ದುರ್ರಹ್ಮಾನ್ ರಝ್ವಿ ಕಲ್ಕಟ್ಟ, ಪ್ರಧಾನ ಕಾರ್ಯದರ್ಶಿಯಾಗಿ ಬಿ.ಎಂ. ನಾಸೀರ್ ಮೂಡುಗೋಪಾಡಿ, ಕಾರ್ಯದರ್ಶಿಯಾಗಿ ಎಂ.ಅಬೂಬಕರ್, ಎಚ್.ಅಬೂಬಕರ್, ಕೋಶಾಧಿಕಾರಿಯಾಗಿ ಕೆ.ಎಸ್.ಎಂ.ಮನ್ಸೂರ್ ಆಯ್ಕೆಯಾದರು.
ಸುಳ್ಯ: ಯೋಗ ಕಾರ್ಯಾಗಾರ
ಸುಳ್ಯ, ಫೆ.20: ಸುಳ್ಯದ ಸ್ನೇಹ ಶಿಕ್ಷಣ ಸಂಸ್ಥೆಯ ಬಯಲು ಸೂರ್ಯ ಆಲಯದಲ್ಲಿ ಯೋಗರತ್ನ ಗೋಪಾಲಕೃಷ್ಣ ದೇಲಂಪಾಡಿಯ ಯೋಗ ಕಾರ್ಯಾಗಾರ ನಡೆಯಿತು.
ಮಂಗಳೂರಿನ ಶ್ಯಾಮ ಪ್ರಸಾದ ಮುದ್ರಜೆ ಹಾಗೂ ದಯಾನಂದ ಸಂಪನ್ಮೂಲ ವ್ಯಕ್ತಿಗಳಾಗಿ ಸಹಕರಿಸಿದರು. ನಿವೃತ್ತ ಶಿಕ್ಷಕ ಪೆದಮಲೆ ರಾಮಭಟ್ಟರು ಕಾರ್ಯಾಗಾರ ಉದ್ಘಾಟಿಸಿದರು. ಕುವೆಂಪು ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಕೊಳಂಬೆ ಚಿದಾನಂದ ಗೌಡರು ಅತಿಥಿಗಳಾಗಿದ್ದರು. ಸ್ನೇಹ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ.ಚಂದ್ರಶೇಖರ ದಾಮ್ಲೆ ಮಾತನಾಡಿದರು. ಶಾಲಾ ಮುಖ್ಯ ಶಿಕ್ಷಕಿ ಜಯಲಕ್ಷ್ಮೀ ದಾಮ್ಲೆ ವಂದಿಸಿದರು.
ಆತ್ಮಹತ್ಯೆಗೈದ ರೈತನ ಮನೆಗೆ ಭೇಟಿ
ಕುಂದಾಪುರ, ಫೆ.20: ರಬ್ಬರ್ ಬೆಲೆ ಕುಸಿತದಿಂದ ಸಾಲ ತೀರಿಸಲಾಗದೆ ಆತ್ಮಹತ್ಯೆ ಮಾಡಿಕೊಂಡ ಕೆರಾಡಿ ಗ್ರಾಮದ ನಿವಾಸಿ ಹೆರಿಯ ನಾಯ್ಕರ ಮನೆಗೆ ಸಿಪಿಎಂ ಮುಖಂಡ ಸುರೇಶ ಕಲ್ಲಾಗರ ಭೇಟಿ ನೀಡಿ ಸಾಂತ್ವನ ಹೇಳಿದರು.
ಕೃಷಿಗಾಗಿ 3 ಲಕ್ಷ ರೂ.ಗಿಂತಲೂ ಹೆಚ್ಚು ಸಾಲ ಮಾಡಿಕೊಂಡಿದ್ದ ಹೆರಿಯ ನಾಯ್ಕರು ರಬ್ಬರ್ ಬೆಲೆ ಕುಸಿತದಿಂದಾಗಿ ಸಾಲ ತೀರಿಸಲಾಗದೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ರಬ್ಬರ್ ಬೆಲೆ ಕುಸಿತಕ್ಕೆ ಕೇಂದ್ರದ ಬಿಜೆಪಿ ಸರಕಾರದ ಧೋರಣೆ ಪ್ರಮುಖ ಕಾರಣವಾಗಿದೆ ಎಂದವರು ಹೇಳಿದರು.
ಹೆರಿಯ ನಾಯ್ಕ ಕುಟುಂಬದ ಸಂಪೂರ್ಣ ಸಾಲ ತೀರಿಸಲು ಸರಕಾರ ಮುಂದಾಗಬೇಕು, ಕುಟುಂಬದ ಒಬ್ಬರಿಗೆ ಉದ್ಯೋಗ ಹಾಗೂ 5 ಲಕ್ಷ ರೂ. ಪರಿಹಾರ ನೀಡಬೇಕೆಂದು ಸಿಪಿಎಂ ಉಡುಪಿ ಜಿಲ್ಲಾ ಸಮಿತಿ ರಾಜ್ಯ ಸರಕಾರವನ್ನು ಒತ್ತಾಯಿಸಿ
ಮುಲ್ಕಿ: ಪದಾಧಿಕಾರಿಗಳ ಪದಗ್ರಹಣ
ಮುಲ್ಕಿ, ಫೆ.20: ಯುವ ಸಮಾಜ ಮಾದಕ ವ್ಯಸನಕ್ಕೆ ಬಲಿಯಾಗದೆ ದೇಶ ಕಟ್ಟುವ ಕಾರ್ಯದಲ್ಲಿ ತೊಡಗಿಸಿಕೊಳ್ಳಬೇಕು ಎಂದು ಜೇಸಿಐನ ವಲಯ ಉಪಾಧ್ಯಕ್ಷ ರಕ್ಷಿತ್ ಕೆ. ಹೇಳಿದರು.
‘ಮುಲ್ಕಿ ಶಾಂಭವಿ ಜೇಸಿಐ’ನ 2016ನೆ ಸಾಲಿನ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಅವರು ಮಾತನಾಡಿದರು.
ನೂತನ ಅಧ್ಯಕ್ಷ ಮಲ್ಲಿಕಾರ್ಜುನ್‌ಆರ್.ಕೆ. ಮಟ್ಟ, ಮುಲ್ಕಿ ಶಾಂಭವಿ ಜೇಸಿಐ ನಿಕಟಪೂರ್ವಾಧ್ಯಕ್ಷ ಚಂದ್ರಶೇಖರ್ ಶೆಟ್ಟಿ, ಮುಲ್ಕಿ ಎಎಸ್ಸೈ ವಾಮನ್ ಸಾಲ್ಯಾನ್, ಜೇಸಿಐ ವಲಯಾಧ್ಯಕ್ಷ ಸಂದೀಪ್ ಕುಮಾರ್, ಮುಲ್ಕಿ ನಗರ ಪಂಚಾಯತ್ ಮಾಜಿ ಅಧ್ಯಕ್ಷ ಶಶಿಕಾಂತ್ ಶೆಟ್ಟಿ, ತಾಪಂ ಮಾಜಿ ಅಧ್ಯಕ್ಷ ರಂಗನಾಥ ಶೆಟ್ಟಿ ಅತಿಥಿಗಳಾಗಿ ಭಾಗವಹಿಸಿದ್ದರು.
ಫೆ.28: ಅಂತರ್ ಶಾಲಾ ವರ್ಣಚಿತ್ರ ಕಲಾ ಸ್ಪರ್ಧೆ
ಮಂಗಳೂರು,ಫೆ.20: ನಗರದ ಮಣಿಪಾಲ್ ಶಾಲೆಯ ಆಶ್ರಯದಲ್ಲಿ ಜಿಲ್ಲೆಯ ವಿವಿಧ ಶಾಲೆಯ ಮಕ್ಕಳಿಗಾಗಿ ವರ್ಣಚಿತ್ರ ಕಲಾ ಸ್ಪರ್ಧೆ ‘ಬಣ್ಣದ ಉತ್ಸವ -2016’ ವನ್ನು ಫೆ.28ರಂದು ಸುರತ್ಕಲ್‌ನ ಹೊಟೇಲ್ ಲಲಿತ್ ಸಭಾಂಗಣದಲ್ಲಿ ಆಯೋಜಿಸಲಾಗಿದೆ. ‘ಪೃಥ್ವಿ-2099 ’ಎಂಬ ವಿಷಯದಲ್ಲಿ ಎಲ್‌ಕೆಜಿಯಿಂದ ಪ್ರಾಥಮಿಕ ಶಾಲೆ ಹಾಗೂ ಪ್ರೌಢ ಶಾಲಾ ವಿದ್ಯಾರ್ಥಿಗಳಿಗೆ ಪ್ರತ್ಯೇಕ ಸ್ಪರ್ಧೆ ನಡೆಯಲಿದೆ. ವಿಜೇತರಿಗೆ ಆಕರ್ಷಕ ಬಹುಮಾನ ಮತ್ತು ಎಲ್ಲ ಸ್ಪರ್ಧಾಳುಗಳಿಗೆ ಪ್ರಮಾಣ ಪತ್ರ ವಿತರಿಸಲಾಗುವುದು. ಮಾಹಿತಿಗಾಗಿ ದೂ. ಸಂ: 0824-4252305, ಮೊ.ಸಂ: 9611873905 / 9535657335ನ್ನು ಸಂಪರ್ಕಿಸಬಹುದು ಎಂದು ಪ್ರಕಟನೆ ತಿಳಿಸಿದೆ.
ಮುಲ್ಕಿ: ಆರೋಗ್ಯ ತಪಾಸಣಾ ಶಿಬಿರ
ಮುಲ್ಕಿ, ಫೆ.20: ಮುಲ್ಕಿ ಬಂಟರ ಸಂಘದ ಮಹಿಳಾ ವಿಭಾಗದ ಆಶ್ರಯದಲ್ಲಿ ಜಸ್ಟಿಸ್ ಕೆ.ಎಸ್.ಹೆಗ್ಡೆ ಆಸ್ಪತ್ರೆಯ ಸಹಯೋಗದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ ಮುಲ್ಕಿ ಬಂಟರ ಸಂಘದ ಸಭಾಂಗಣದಲ್ಲಿ ನಡೆಯಿತು.
ಮುಲ್ಕಿ ಬಂಟರ ಸಂಘದ ಅಧ್ಯಕ್ಷ ಸಂತೋಷ್ ಕುಮಾರ್ ಹೆಗ್ಡೆ ಶಿಬಿರ ಉದ್ಘಾಟಿಸಿದರು. ಆಸ್ಪತ್ರೆಯ ಸಾರ್ವಜನಿಕ ಸಂಪರ್ಕ ವಿಭಾಗದ ಸಹಾಯಕ ಅಧಿಕಾರಿ ಉದಯ, ದೇರಳಕಟ್ಟೆಯ ಕೆ.ಎಸ್.ಹೆಗ್ಡೆ ಮೆಡಿಕಲ್ ಅಕಾಡಮಿಯ ವೈದ್ಯಾಧಿಕಾರಿ ಡಾ.ಅಂಕುರ್, ಮುಲ್ಕಿ ಬಂಟರ ಸಂಘದ ಪೂರ್ವಾಧ್ಯಕ್ಷ ಮುರಳೀಧರ ಭಂಡಾರಿ, ಕಿನ್ನಿಗೋಳಿ ಬಂಟರ ಸಂಘದ ಅಧ್ಯಕ್ಷ ಸ್ವರಾಜ್ ಶೆಟ್ಟಿ, ಮುಂಬೈ ಬಂಟರ ಸಂಘದ ಮಹಿಳಾ ವಿಭಾಗದ ಅಧ್ಯಕ್ಷೆ ಸಹನಾ ಶೆಟ್ಟಿ, ಮುಲ್ಕಿ ಬಂಟರ ಸಂಘದ ಮಹಿಳಾ ವಿಭಾಗದ ಅಧ್ಯಕ್ಷೆ ಬಬಿತಾ ಶೆಟ್ಟಿ ಉಪಸ್ಥಿತರಿದ್ದರು
ಇಂದು ಕಾಲ್ನಡಿಗೆ ಜಾಥಾ
ಉಪ್ಪಿನಂಗಡಿ, ಫೆ.20: ಎಸ್ಸೆಸ್ಸೆಫ್ ಮೂರುಗೋಳಿ-ಕುಪ್ಪೆಟ್ಟಿ ಸೆಕ್ಟರ್ ವತಿಯಿಂದ ಫೆ.21ರಂದು ಸಂಜೆ 4 ಗಂಟೆಗೆ ಕಲ್ಲೇರಿ ಜನತಾ ಕಾಲನಿ ಜುಮಾ ಮಸೀದಿಯಿಂದ ಕಲ್ಲೇರಿ ಜಂಕ್ಷನ್‌ವರೆಗೆ ಎಸ್‌ಬಿಎಸ್ ಮದ್ರಸ ವಿದ್ಯಾರ್ಥಿಗಳಿಂದ ‘ಭಯೋತ್ಪಾದನೆ ವಿರುದ್ಧ ಜಿಹಾದ್’ ಎಂಬ ವಿಷಯದಲ್ಲಿ ಕಾಲ್ನಡಿಗೆ ಜಾಥಾ ನಡೆಯಲಿದೆ ಎಂದು ಪ್ರಕಟನೆ ತಿಳಿಸಿದೆ.
ಫೆ.23: ಹಕ್ಕುಪತ್ರ ಮೇಳ
ಕಾಸರಗೋಡು, ಫೆ.20: ಜಿಲ್ಲಾ ಮಟ್ಟದ ಹಕ್ಕು ಪತ್ರ ಮೇಳ ಫೆ.23ರಂದು ಕಾಸರಗೋಡು ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆಯಲಿದೆ ಎಂದು ಜಿಲ್ಲಾಧಿಕಾರಿ ಪಿ.ಎಸ್. ಮುಹಮ್ಮದ್ ಸಗೀರ್ ತಿಳಿಸಿದ್ದಾರೆ.
ಜಿಲ್ಲಾಧಿಕಾರಿಯ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಅವರು, ಜಿಲ್ಲೆಯ 6 ಸಾವಿರ ಮಂದಿಗೆ ಅಂದು ಬೆಳಗ್ಗೆ ರಾಜ್ಯ ಕಂದಾಯ ಸಚಿವ ಅಡೂರು ಪ್ರಕಾಶ್ ಹಕ್ಕುಪತ್ರವನ್ನು ವಿತರಿಸುವರು. 2014ರ ಫೆ.1ರಿಂದ ಮಾ.31ರ ತನಕ ಸ್ವೀಕರಿಸಿದ ಅರ್ಜಿಗಳು, ಕಂದಾಯ ಸರ್ವೇ ಅದಾಲತ್, ಜನಸಂಪರ್ಕ ಕಾರ್ಯಕ್ರಮದಲ್ಲಿ ಸ್ವೀಕರಿಸಿದ ಅರ್ಜಿಗಳನ್ನು ಪರಿಗಣಿಸಿ ಹಕ್ಕು ಪತ್ರ ವಿತರಿಸಲಾಗುವುದು. ತಲಾ ಮೂರು ಸೆಂಟ್ಸ್ ಸ್ಥಳದ ಹಕ್ಕು ಪತ್ರ ನೀಡಲಾಗುವುದು.
ಹೆಚ್ಚುವರಿ ದಂಡಾಧಿಕಾರಿ ಎಚ್. ದಿನೇಶನ್, ಉಪ ತಹಶೀಲ್ದಾರ್ ಸಿ. ಜಯನ್, ಬಿ. ಅಬ್ದುಲ್ ನಾಸರ್, ಆರ್.ಪಿ. ಮಹಾದೇವ ಕುಮಾರ್, ಕೆ., ಜಯಲಕ್ಷ್ಮೀ, ಕೆ. ಕುಂಞಂಬು ನಾಯರ್, ಪಿ.ಎಸ್. ಅನಿಲ್, ವೀಣಾ ಮ್ಯಾಥ್ಯೂ, ಎಂ. ಪ್ರದೀಪ್, ಶಶಿಧರ ಶೆಟ್ಟಿ , ವಿ. ಜಯರಾಜನ್, ಪಿ.ಕೆ. ಶೋಭಾ, ಕೆ. ಸುಜಾತಾ ಉಪಸ್ಥಿತರಿದ್ದರು.
ಫೆ.22-23: ನೇಮೋತ್ಸವ
ಕಿನ್ನಿಗೋಳಿ, ಫೆ.20: ಶ್ರೀ ಕೋಡ್ದಬ್ಬು ದೈವಸ್ಥಾನ ಪಂಜದ ಸಪರಿವಾರ ಕೋಡ್ದಬ್ಬು ದೈವದ ವಾರ್ಷಿಕ ನೇಮೋತ್ಸವ ಫೆ.22,23ರಂದು ನಡೆಯಲಿದೆ ಎಂದು ದೈವಸ್ಥಾನದ ಆಡಳಿತ ಮಂಡಳಿ ಪ್ರಕಟನೆ ತಿಳಿಸಿದೆ.
ಭಜನಾ ಮಂಡಳಿಗೆ ಶಿಲಾನ್ಯಾಸ
ಸುರತ್ಕಲ್, ಫೆ.20: ಎಂ.ಆರ್.ಪಿ.ಎಲ್. ಕಾಲನಿಯ ಚೇಳಾಯರು ಶ್ರೀ ಶಾರದಾಂಬ ದೇವಸ್ಥಾನ ಸಮಿತಿಯ ಆಶ್ರಯದಲ್ಲಿ ನಿರ್ಮಿಸಲ್ಪಡುವ ಶ್ರೀ ಶಾರದಾಂಬ ಭಜನಾ ಮಂದಿರಕ್ಕೆ ಕಟೀಲು ದುರ್ಗಾ ಪರಮೇಶ್ವರಿ ದೇವಾಲಯದ ಅರ್ಚಕ ಅನಂತಪದ್ಮನಾಭ ಆಸ್ರಣ್ಣ ಶಿಲಾನ್ಯಾಸಗೈದರು.
ಈ ಸಂದರ್ಭ ಸುರತ್ಕಲ್ ಸದಾಶಿವ ಮಹಾಗಣಪತಿ ದೇವಸ್ಥಾನದ ಅನುವಂಶಿಕ ಮೊಕ್ತೇಸರ ಎಸ್.ದಾಸಮಯ್ಯ, ಕಳವಾರುಗುತ್ತು ಚಿತ್ತರಂಜನ್ ಶೆಟ್ಟಿ, ಎಂ. ಆದಿತ್ಯ ಮುಕ್ಕಲ್ದಿ ಖಂಡಿಗೆ ಬೀಡು, ಉದ್ಯಮಿ ನಾರಾಯಣ ಗುಜರನ್, ಸಮಿತಿಯ ಅಧ್ಯಕ್ಷ ಕರುಣಾಕರ ಶೆಟ್ಟಿ, ಖಂಡಿಗೆ ಬೀಡು, ಭಜನಾ ಮಂಡಳಿಯ ಅಧ್ಯಕ್ಷ ಕರುಣಾಕರ ಶೆಟ್ಟಿ, ಕಾರ್ಯದರ್ಶಿ ಸುರೇಶ್ ಶೆಟ್ಟಿ, ಶಾರದಾ ದೇವಸ್ಥಾನದ ಕಾರ್ಯದರ್ಶಿ ಯಶೋಧರ ಕುಲಾಲ್, ಗುತ್ತಿಗೆದಾರ ವೇಣು ವಿನೂದ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.
ಕಿನ್ನಿಗೋಳಿ: ಸಾಧಕರಿಗೆ ಸನ್ಮಾನ
ಮುಲ್ಕಿ, ಫೆ.20: ಕಿನ್ನಿಗೋಳಿ ರೋಟರಿ ಕ್ಲಬ್‌ನ ಆಶ್ರಯದಲ್ಲಿ ವೃತ್ತಿಪರ ಮಾಸಾಚರಣೆ ಹಾಗೂ ವೃತ್ತಿಪರ ಸನ್ಮಾನ ಸಮಾರಂಭ ಕಿನ್ನಿಗೋಳಿಯ ರೋಟರಿ ರಜತಭವನದಲ್ಲಿ ನಡೆಯಿತು.
ರೋಟರಿ ಅಧ್ಯಕ್ಷ ಎಂ. ಬಾಲಕೃಷ್ಣ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಹೋಟೆಲ್ ಉದ್ಯಮಿ ಕಮಲ, ರಿಕ್ಷಾ ಚಾಲಕ ಜಗನ್ನಾಥ್ ಕೋಟ್ಯಾನ್, ಪ್ರಗತಿಪರ ಕೃಷಿಕ ಸಂಜೀವ ಅಂಚನ್‌ರನ್ನು ಸನ್ಮಾನಿಸಲಾಯಿತು. ರೋಟರಿ ಜಿಲ್ಲೆ 3180 ವಲಯ 3ರ ಸಹಾಯಕ ಗವರ್ನರ್ ಸತ್ಯೇಂದ್ರ ಪೈ, ವಲಯ 3ರ ಸೇನಾನಿ ರಾಬರ್ಟ್ ಫ್ರಾಂಕ್ಲಿನ್ ರೇಗೊ, ಕಿನ್ನಿಗೋಳಿ ರೋಟರಿ ಕ್ಲಬ್‌ನ ನಿಕಟಪೂರ್ವ ಅಧ್ಯಕ್ಷ ವಿಲಿಯಂ ಸಿಕ್ವೇರಾ, ವೃತ್ತಿಪರ ಸೇವಾ ಯೋಜನಾಧಿಕಾರಿ ವೇದವ್ಯಾಸ ಉಡುಪ ಮತ್ತಿತರರು ಉಪಸ್ಥಿತರಿದ್ದರು







