ಖ್ಯಾತ ಆಂಗ್ಲ ಸಾಹಿತಿ ಇಕೊ ಇನ್ನಿಲ್ಲ
ರೋಮ್,ಫೆ.20: ‘ ದಿ ನೇ ಮ್ ಆಫ್ ರೋಸ್’ ಕಾದಂಬರಿ ಖ್ಯಾತಿಯ ಇಟಲಿಯ ಖ್ಯಾತ ಸಾಹಿತಿ, ಉಂಬೆರ್ಟೊ ಶುಕ್ರವಾರ ನಿಧನರಾಗಿದ್ದಾರೆ. ಅವರಿಗೆ 84 ವರ್ಷ ವಯಸ್ಸಾಗಿತ್ತು. ಅವರು ಬರೆದ ನಿಗೂಢ ಕೊಲೆ ಕಾದಂಬರಿ ದಿ ನೇಮ್ ಆಫ್ ರೋಸ್ ವಿಶ್ವದಾದ್ಯಂತ ಓದುಗರ ಆಪಾರ ಪ್ರಶಂಸೆಗೆ ಪಾತ್ರವಾಗಿತ್ತು.
ಇಕೊ ಬರೆದ ‘ಫೌಕಾಲ್ಟ್ಸ್ ಪೆಂಡುಲಮ್’ ಕೂಡಾ ವಿಮರ್ಶಕರ ಮೆಚ್ಚುಗೆಯನ್ನು ಗಳಿಸಿತ್ತು. ಅವರು ಬರೆದ ಕೊನೆಯ ಕಾದಂಬರಿ ನೂಮರೋ ಝಿರೋ ಕಳೆದ ವರ್ಷ ಪ್ರಕಟವಾಗಿತ್ತು.
Next Story





