ವಿವಾದದ ಭೂಮಿಕೆ ಮೇಕ್ ಇನ್ ಇಂಡಿಯಾ ವೇದಿಕೆ
ಬೆಂಕಿ ಆಕಸ್ಮಿಕ: ನಿಯಮ ಗಾಳಿಗೆ ತೂರಿದ ಮಹಾರಾಷ್ಟ್ರಸರಕಾರ
ಮೋದಿ ಮಹತ್ವಾಕಾಂಕ್ಷೆಯ ಮೇಕ್ ಇನ್ ಇಂಡಿಯಾ ವೇದಿಕೆಯನ್ನು ಆಹುತಿ ಪಡೆದ ಬೆಂಕಿಯನ್ನು ಅಗ್ನಿಶಾಮಕ ದಳ ಸೋಮವಾರ ಸಂಜೆ ಆರಿಸಿ, 12 ಗಂಟೆಗಳಲ್ಲಿ ಗಿರಗಾಂವ್ ಬೀಚ್‌ನಲ್ಲಿ ದುರಂತದ ಸಣ್ಣ ಕುರುಹು ಕೂಡ ಇರಲಿಲ್ಲ. ಲೋಹದ ಪ್ರೇಮ್ ಹಾಗೂ ಪೆಂಡಾಲ್‌ಗೆ ಹಾಕಿದ್ದ ಬಿದಿರನ್ನೂ ಟ್ರಕ್‌ಗಳಲ್ಲಿ ಬೇರೆ ಡೆಗೆ ಸಾಗಿಸಲಾಗಿತ್ತು. ಬೆಂಕಿಗೆ ಆಹುತಿಯಾಗಿ ಅಸ್ಥಿಪಂಜರವಾಗಿದ್ದ ವೇದಿಕೆ ಮಾಯವಾಗಿತ್ತು. ಬೂದಿಯನ್ನೂ ಗುಡಿಸಿ ಚೊಕ್ಕ ಮಾಡ ಲಾಗಿತ್ತು.
ಮುಂಬೈನಲ್ಲಿ ನಡೆಯುತ್ತಿರುವ ಮೇಕ್ ಇನ್ ಇಂಡಿಯಾ ಸಪ್ತಾಹದ ಅಂಗವಾಗಿ ಆಯೋಜಿಸಿದ್ದ ನೃತ್ಯ ಪ್ರದರ್ಶನ ವೇಳೆ ವೇದಿಕೆಯ ಕೆಳಗೆ ರವಿವಾರ ರಾತ್ರಿ ಬೆಂಕಿ ಕಾಣಿಸಿಕೊಂಡಿತ್ತು. ನಿಮಿಷಗಳಲ್ಲೇ ಬೆಂಕಿಯ ಕೆನ್ನಾಲಿಗೆ ಇಡೀ ವೇದಿಕೆಗೆ ಚಾಚಿತು. ಅದೃಷ್ಟವಶಾತ್ ಯಾವ ಜೀವ ಹಾನಿಯೂ ಸಂಭವಿಸಲಿಲ್ಲ. ಸಭಾಂಗಣದಲ್ಲಿದ್ದ 20 ಸಾವಿರ ಮಂದಿಯನ್ನು ಮಿಂಚಿನ ವೇಗದಲ್ಲಿ ಯಶಸ್ವಿಯಾಗಿ ತೆರವು ಮಾಡಲಾ ಯಿತು. ಸರಕಾರಿ ಹಾಗೂ ಸಾರ್ವಜನಿಕ ಯಂತ್ರ ಅವಶೇಷಗಳನ್ನು ಸ್ವಚ್ಛಗೊಳಿಸಿ, ಕಡಲ ಕಿನಾರೆಯನ್ನು ಯಥಾಸ್ಥಿತಿಗೆ ತರಲಾಯಿತು.ದರೆ ಕಥೆ ಇಷ್ಟಕ್ಕೆ ಮುಗಿಯುವುದಿಲ್ಲ. ಕಡಲ ಕಿನಾರೆಯಲ್ಲಿ ಈ ಮೆಗಾ ಸಮಾರಂಭ ನಡೆಸಲು ಅನುಮತಿ ಕೋರಿದ್ದ ರಾಜ್ಯ ಸರಕಾರದ ಪ್ರಸ್ತಾವನೆಯನ್ನು ಮುಂಬೈ ಹೈಕೋರ್ಟ್ ಹಾಗೂ ಕಡಲ ಕಿನಾರೆ ಚಟುವಟಿಕೆಗಳ ಮೇಲುಸ್ತುವಾರಿಯ ವಿಶೇಷ ಸಮಿತಿ ತಿರಸ್ಕರಿಸಿತ್ತು ಎನ್ನುವುದು ಗಮನಾರ್ಹ. ದುರಂತವನ್ನು ತಪ್ಪಿಸಿದ ಕ್ರಮ ಶ್ಲಾಘನೀಯ ಎಂದ ಮಾತ್ರಕ್ಕೆ ಈ ಸತ್ಯವನ್ನು ಮುಚ್ಚಿಡುವುದು ಸಾಧ್ಯವಿಲ್ಲ.
ಸಮಾರಂಭಕ್ಕೆ ಅನುಮತಿ ನೀಡುವಂತೆ ಸರಕಾರ ಮಾಡಿದ್ದ ಮನವಿ ಯನ್ನು ಸಮಿತಿ ತಿರಸ್ಕರಿಸಲು ಪ್ರಮುಖ ಕಾರಣ ಹಿಂದಿನ ಅನುಭವ. 2010ರಲ್ಲಿ ಮಹಾರಾಷ್ಟ್ರದ ಸುವರ್ಣ ಮಹೋತ್ಸವ ಆಚರಣೆಗೆ ಬೀಚ್‌ನಲ್ಲಿ ಅನುಮತಿ ನೀಡಿದ್ದಾಗ, ಸಮಿತಿಯ ನಿಯಮಗಳನ್ನು ಸರಕಾರ ಗಾಳಿಗೆ ತೂರಿತ್ತು. ಸಾರ್ವಜನಿಕರ ಸಾಗರ ವೀಕ್ಷಣೆಗೆ ಅಡ್ಡಿಯಾಗುವಂಥ ವೇದಿಕೆ ನಿರ್ಮಾಣವನ್ನು ನಿಯಮಾವಳಿ ನಿಷೇಸುತ್ತದೆ. ಆದರೆ ಅದನ್ನು ಕಳೆದ ಬಾರಿ ಸರಕಾರ ಉಲ್ಲಂಸಿತ್ತು.
ಮುಂಬೈ ಮಿರರ್ ವರದಿಯ ಪ್ರಕಾರ ಈ ಬಾರಿ ಸರಕಾರ ಇನ್ನೊಂದು ನಿಯಮಾವಳಿಯನ್ನು ಗಾಳಿಗೆ ತೂರಿದೆ. ಅದೆಂದರೆ, ಕಾರ್ಯಕ್ರಮದಲ್ಲಿ ಸಿಡಿಮದ್ದು ಬಳಕೆ ಮಾಡಿದ್ದು. ವೇದಿಕೆಯ ಪಕ್ಕದಲ್ಲಿ ಯಾವುದೇ ಪಟಾಕಿ ಸಿಡಿಸದಂತೆ ಅಗ್ನಿಶಾಮಕ ದಳ ಕಟ್ಟುನಿಟ್ಟಿನ ಸೂಚನೆ ನೀಡಿದ್ದರೂ, ಅದನ್ನು ನಿರ್ಲಕ್ಷಿಸಲಾಗಿತ್ತು. ರವಿವಾರದ ಬೆಂಕಿ ಆಕಸ್ಮಿಕಕ್ಕೆ ಕಾರಣ ಏನು ಎಂಬ ತನಿಖೆ ಇನ್ನೂ ನಡೆಯುತ್ತಿದ್ದು, ಪಟಾಕಿ ಸಿಡಿಸಲು ಮತ್ತು ಸುಡು ಮದ್ದಿನ ಪ್ರದರ್ಶನಕ್ಕೆ ಬಳಸಲು ತಂದಿದ್ದ ಗ್ಯಾಸ್ ಸಿಲಿಂಡರ್‌ನಲ್ಲಿ ಸೋರಿಕೆ ಉಂಟಾದದ್ದೇ ಕಾರಣ ಎಂದು ಹೇಳಲಾಗುತ್ತಿದೆ.ನವರಿ 28ರಂದು ಮುಂಬೈ ಹೈಕೋರ್ಟ್ ಸರಕಾರದ ಪ್ರಸ್ತಾವನೆ ಯನ್ನು ತಿರಸ್ಕರಿಸಿ, ಗಿರಗಾಂವ್ ಚೌಪತ್ತಿ ಬೀಚ್ ಪ್ರದೇಶದಲ್ಲಿ ವೇದಿಕೆ, ಹಿನ್ನೆಲೆ ವೇದಿಕೆ, ಕೊಠಡಿಗಳು, ಶೌಚಾಲಯಗಳ ನಿರ್ಮಾಣದ ಮೂಲಕ ಬೀಚ್‌ಗೆ ಹಾನಿಯಾಗುವ ಸಾಧ್ಯತೆ ಇದೆ ಎಂದು ತೀರ್ಪು ನೀಡಿತ್ತು. ಈ ಸಮಾರಂಭ ವೀಕ್ಷಣೆಗೆ ದೊಡ್ಡ ಜನಸಮೂಹ ಆಗಮಿಸುವ ನಿರೀಕ್ಷೆ ಇದ್ದು, ಇದರಿಂದ ಬೀಚ್ ಪರಿಸರದ ಮೇಲಾಗುವ ಹಾನಿಯನ್ನು ವಿವರಿ ಸಬೇಕಿಲ್ಲ ಎಂದು ತನ್ನ ತೀರ್ಪಿನಲ್ಲಿ ಹೇಳಿತ್ತು.ತೀರ್ಪಿನ ವಿರುದ್ಧ ರಾಜ್ಯ ಸರಕಾರ ಸುಪ್ರೀಂಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿ, ಅಂತಾರಾಷ್ಟ್ರೀಯ ಪ್ರತಿನಿಗಳ ಸಮ್ಮುಖದಲ್ಲಿ ನಡೆ ಯುವ ಈ ಸಮಾರಂಭ ಭಾರತದ ಹೆಮ್ಮೆಯ ಪ್ರತೀಕ ಎಂದು ವಾದಿಸಿತು. ಪೆಬ್ರವರಿ 3ರಂದು ಸುಪ್ರೀಂಕೋರ್ಟ್, ಹೈಕೋರ್ಟ್ ಆದೇಶಕ್ಕೆ ತಡೆ ನೀಡಿ ಕಾರ್ಯಕ್ರಮಕ್ಕೆ ಅನುಮತಿ ನೀಡಿತು. ಬಳಿಕ ಸರಕಾರ ಬೀಚ್‌ನಲ್ಲಿ 1,000 ಚದರ ಮೀಟರ್ ವಿಸ್ತೀರ್ಣದ ವೇದಿಕೆ ನಿರ್ಮಿಸಿತು. ಇಡೀ ಬೀಚ್ ಪ್ರದೇಶವನ್ನು ಇದು ಆವರಿಸಿದ್ದರಿಂದ ಸಮುದ್ರ ವೀಕ್ಷಣೆಗೆ ಅಡ್ಡಿ ಉಂಟಾಗಿತ್ತು. ಸಮಾರಂಭ ಸುಪ್ರೀಂಕೋರ್ಟ್ ಕೃಪಾಕಟಾಕ್ಷದಲ್ಲಿ ನಡೆದರೂ, ಅದಕ್ಕೆ ನಿಗದಿಪಡಿಸಿದ ಜಾಗ ಮಾತ್ರ ಹೈಕೋರ್ಟ್ ಹಾಗೂ 2001ರಲ್ಲಿ ಕೋರ್ಟ್ ನೇಮಿಸಿದ ಮೇಲುಸ್ತುವಾರಿ ಸಮಿತಿಯ ಕೆಂಗಣ್ಣಿಗೆ ಗುರಿಯಾಗಿತ್ತು.ಡಲ ಕಿನಾರೆ ಚಟುವಟಿಕೆಗಳ ನಿಯಂತ್ರಣಕ್ಕೆ 2005ರಲ್ಲಿ ಸಮಿತಿ ಕೆಲ ಮಾರ್ಗದರ್ಶಿ ಸೂತ್ರಗಳನ್ನು ರಚಿಸಿತು. ಈ ಬೀಚ್‌ನ ಇತಿಹಾಸದ ಬಗ್ಗೆ ಸಂಶೋಧನೆ ನಡೆಸಿ, ಈ ಕಡಲ ಕಿನಾರೆಯನ್ನು ಕೆಲ ಸಮಾರಂಭಗಳಿಗೆ ಬಳಸಿ ಕೊಳ್ಳಲು ಅವಕಾಶ ಕೊಡುತ್ತೇವೆ ಎಂದು ಸಾಲಿಸಿಟರ್ ಹಾಗೂ ಸಮಿತಿ ಸದಸ್ಯ ರಾಜನ್ ಜಯಕರ್ ಹೇಳುತ್ತಾರೆ. ಇದರಲ್ಲಿ ಗಣೇಶ ಹಾಗೂ ದುರ್ಗೆ ಮೂರ್ತಿ ಮುಳುಗಿಸುವುದು, ರಾಮಲೀಲಾ ಹಾಗೂ ಕೃಷ್ಣಲೀಲಾ ಉತ್ಸವ, ಕ್ರಿಸ್‌ಮಸ್ ಆಚರಣೆ ಸೇರುತ್ತದೆ.
ರಾಮಲೀಲಾ ಹಾಗೂ ಕ್ರಿಸ್‌ಮಸ್‌ನಂಥ ಆಚರಣೆಗೆ ಬೀಚ್ ಬದಿಯ ಒಂದು ಭಾಗವನ್ನು ಮಾತ್ರ ನೀಡಲಾಗುತ್ತದೆ. ಇದರಿಂದ ಸಮುದ್ರ ವೀಕ್ಷಣೆಗೆ ಯಾವ ಅಡ್ಡಿಯೂ ಆಗುವುದಿಲ್ಲ. ಬೀಚ್‌ನ ಉಳಿದ ಭಾಗ ಸಾರ್ವಜನಿಕರಿಗೆ ಮುಕ್ತವಾಗಿರುತ್ತದೆ. ಈ ಮಾರ್ಗಸೂಚಿಯ ಪ್ರಕಾರ ಯಾವುದೇ ರಾಜಕೀಯ ಸಮಾರಂಭ ಅಥವಾ ರ್ಯಾಲಿಗಳಿಗೆ ಅವಕಾಶ ಇಲ್ಲ. ಈ ಮಾರ್ಗಸೂಚಿಗಳನ್ನು ರಾಜ್ಯ ಸರಕಾರ ಸೇರಿದಂತೆ ಎಲ್ಲರೂ ಯಾವ ವಿರೋಧವೂ ಇಲ್ಲದೇ ಒಪ್ಪಿಕೊಂಡರು.
2010ರಲ್ಲಿ ರಾಜ್ಯ ಸರಕಾರ ಮಹಾರಾಷ್ಟ್ರದ ಸುವರ್ಣ ಮಹೋ ತ್ಸವಕ್ಕೆ ಈ ಜಾಗದಲ್ಲಿ ಅನುಮತಿ ಕೇಳಿತು. ಇದು ಇಡೀ ರಾಜ್ಯದ ಆಚರಣೆಯಾಗಿರುವ ಹಿನ್ನೆಲೆಯಲ್ಲಿ ಸಮಿತಿ ಹಾಗೂ ಹೈಕೋರ್ಟ್ ಅನುಮತಿ ನೀಡಿದ್ದವು. ಆದರೆ ರಾಮಲೀಲಾ ಉತ್ಸವ ನಡೆಯುವ ಜಾಗದಲ್ಲೇ ನಡೆಯಬೇಕು ಎಂದು ಸ್ಪಷ್ಟಪಡಿಸಲಾಗಿತ್ತು. ಆದರೆ ಸಮಾರಂಭ ನಡೆಸುವ ವೇಳೆ ಸಮಿತಿಯ ನಿಯಮಾವಳಿಯನ್ನು ಮರೆಯಲಾಯಿತು ಎನ್ನುವ ಅಂಶವನ್ನು ಜಯಕರ್ ಹೈಕೋರ್ಟ್ ಗಮನಕ್ಕೆ ತಂದಿದ್ದರು. ರಾಮಲೀಲಾ ಉತ್ಸವ ನಡೆಯುವ ಜಾಗದಲ್ಲಿ ಸಮಾರಂಭ ಏರ್ಪಡಿಸಲು ಅನುಮತಿ ನೀಡಿದ್ದರೂ, ಬೇರೆ ಕಡೆ ಅದನ್ನು ವ್ಯವಸ್ಥೆಗೊಳಿಸಲಾಯಿತು
ಇನ್ನುಕಟ್ಟುನಿಟ್ಟು
ಮೇಕ್ ಇನ್ ಇಂಡಿಯಾ ಸಮಾರಂಭಕ್ಕಾಗಿ ರಾಜ್ಯ ಸರಕಾರ ಸಮಿತಿ ಯನ್ನು ಸಂಪರ್ಕಿಸಿತು. ಬಳಿಕ ನ್ಯಾಯಾಲಯದ ಮೊರೆ ಹೋಯಿತು. ಆದರೆ ಸಮಿತಿಯ ಮಾರ್ಗಸೂಚಿಯಲ್ಲಿ ಯಾವ ಬದಲಾವಣೆಗೂ ಕೋರದೆ, ಬೀಚ್ ಮಧ್ಯದಲ್ಲಿ ಸಮಾರಂಭ ನಡೆಸಲು ಅನುಮತಿ ಕೋರಿತು.
ಇದೀಗ ಬೆಂಕಿ ಆಕಸ್ಮಿಕದ ಬಳಿಕ ಸಮಿತಿ, ವಾರ್ಷಿಕವಾಗಿ ನಡೆಯುವ ರಾಮಲೀಲಾ, ಕ್ರಿಸ್‌ಮಸ್ ಆಚರಣೆ ಹಾಗೂ ಗಣೇಶೋತ್ಸವ ಗಳಿಗೂ ಕಟ್ಟುನಿಟ್ಟಿನ ನಿಯಮಾವಳಿ ಜಾರಿಗೊಳಿಸಲು ನಿರ್ಧರಿಸಿದೆ. ನಾನು ಇನ್ನು ಮುಂದೆ ಅನುಮತಿ ನೀಡುವ ಸಂದರ್ಭದಲ್ಲಿ, ಅಗ್ನಿಶಾಮಕ ದಳ ಹಾಗೂ ಪೊಲೀಸ್ ಪ್ರತಿನಿಗಳನ್ನೂ ಸಭೆಗೆ ಆಹ್ವಾನಿಸುತ್ತೇವೆ. ಅಗ್ನಿಸುರಕ್ಷತೆ ಬಗ್ಗೆ ಕೂಡಾ ಗಮನ ಹರಿಸಬೇಕು ಎನ್ನುವುದು ನಮ್ಮ ನಿಲುವು ಎಂದು ಜಯಕರ್ ಹೇಳಿದರು.
ಮೇಕ್ ಇನ್ ಇಂಡಿಯಾ ಸಮಾರಂಭದಲ್ಲಿ ಉಂಟಾದ ದೋಷ,ರಾಮಲೀಲಾ ಉತ್ಸವದಲ್ಲಿ ರಾವಣನನ್ನು ಸುಡುವ ಸಂದರ್ಭದಲ್ಲೂ ಆಗಬಹುದು. ಲೈಸನ್ಸ್ ನೀಡುವ ಮುನ್ನ ಬಹುಶಃ ನಾವು ಇದೀಗ ಹೆಚ್ಚಿನ ಷರತ್ತುಗಳನ್ನು ವಿಧಿಸಬೇಕಾಗುತ್ತದೆ.
ಕೃಪೆ: ಸ್ಕ್ರಾಲ್. ಇನ್