Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಸಿನಿಮಾ
  4. ಸ್ಪಾಟ್‌ಲೈಟ್ ತನಿಖಾ ಪತ್ರಿಕೋದ್ಯಮದ...

ಸ್ಪಾಟ್‌ಲೈಟ್ ತನಿಖಾ ಪತ್ರಿಕೋದ್ಯಮದ ಆಳ-ಅಗಲ

ವಾರ್ತಾಭಾರತಿವಾರ್ತಾಭಾರತಿ20 Feb 2016 11:53 PM IST
share
ಸ್ಪಾಟ್‌ಲೈಟ್ ತನಿಖಾ ಪತ್ರಿಕೋದ್ಯಮದ ಆಳ-ಅಗಲ

ಸ್ಪಾಟ್    ಲೈಟ್’ ಇಂಗ್ಲಿಷ್ ಚಿತ್ರ ತನಿಖಾ ಪತ್ರಿಕೋದ್ಯಮವನ್ನು ಕೇಂದ್ರವಾಗಿಟ್ಟು ಬಂದಿರುವ ಒಂದು ಥ್ರಿಲ್ಲರ್ ಚಿತ್ರವಾಗಿದೆ. ನಿರ್ದೇಶಕ ಟಾಮ್ ಮೆಕಾರ್ತಿ ಅವರ ಅಪಾರ ಶ್ರಮ ಚಿತ್ರವನ್ನು ಪರಿಣಾಮ ಕಾರಿಯಾಗಿ ಗುರಿ ಮುಟ್ಟಿಸುವಲ್ಲಿ ಯಶಸ್ವಿಯಾಗಿದೆ. ಅತ್ಯಂತ ವಿವಾದಾತ್ಮಕ ಕತಾವಸ್ತುವನ್ನು ಈ ಚಿತ್ರಕ್ಕಾಗಿ ಅವರು ಆಯ್ಕೆ ಮಾಡಿಕೊಂಡಿದ್ದಾರೆ. ಚಿತ್ರದ ವಿವಾದಾತ್ಮಕ ವಿಷಯವನ್ನು ಬದಿಗಿಟ್ಟು ನೋಡಿದರೂ ಇದು ಕೇವಲ ಸಾಕ್ಷ ಚಿತ್ರವಾಗಿಯಲ್ಲದೆ, ಅದರಾಚೆಗೂ ನಮ್ಮನ್ನು ತಲುಪಲು ಪ್ರಯತ್ನಿಸುತ್ತದೆ. ತನಿಖಾ ಪತ್ರಿಕೋದ್ಯಮದ ಆಳ, ಅಗಲಗಳನ್ನು ಈ ಚಿತ್ರ ಪರಿಚಯಿಸುತ್ತದೆ. ಚರ್ಚ್‌ಗಳಲ್ಲಿ ಮಕ್ಕಳ ಲೈಂಗಿಕ ಶೋಷಣೆಯನ್ನು ಕೇಂದ್ರವಾಗಿಟ್ಟುಕೊಂಡು ತನಿಖೆಗೆ ಇಳಿಯುವ ಸ್ಪಾಟ್‌ಲೈಟ್ ಎದುರಿಸುವ ಸವಾಲನ್ನು ಚಿತ್ರ ನಿರೂಪಿ ಸುತ್ತಾ ಹೋಗುತ್ತದೆ. ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣದ ಬಗ್ಗೆ ಸುಳಿವು ಪಡೆದ ತಂಡ ಅದನ್ನು ಸಾರ್ವಜನಿಕರ ಗಮನಕ್ಕೆ ತರಲು ಹವಣಿಸುತ್ತದೆ. ಆದುದರಿಂದ ಒಂದು ಹನಿ ರಕ್ತದ ಎಳೆಯನ್ನು ಹಿಡಿದುಕೊಂಡು ದೌರ್ಜನ್ಯದ ಆಳಕ್ಕೆ ಇಳಿಯುತ್ತದೆ. ಆದರೆ ಅಂತಿಮವಾಗಿ ತಾವು ಮಾಡಿದ ತನಿಖೆಯನ್ನು ಬಹಿರಂಗ ಪಡಿಸಲಾಗದ ಸನ್ನಿವೇಶವನ್ನು ಅದು ಎದುರಿಸುತ್ತದೆ. ರಾಬಿನ್ಸನ್ (ಮೈಕೆಲ್ ಕೀಟನ್), ಸಾಚ ಫೆಫರ್ (ಮೆಕ್ ಆಡಮ್ಸ್), ಮೈಕ್ ರೆಝೆಂಡೆಸ್ (ರಪೆಲ್ಲೊ) ಮತ್ತು ಮಾಟ್ ಕರೋಲ್ (ಡಿಆಕ್ರಿ) ತಂಡ ಚಿತ್ರದ ಪ್ರಮುಖ ಭಾಗವನ್ನು ನಿರ್ವಹಿಸುತ್ತದೆ. ಒಂದು ತಿಂಗಳ ಕಾಲಾ ವಕಾಶದಲ್ಲಿ ತಮ್ಮ ತನಿಖೆಯನ್ನು ಪೂರ್ತಿಗೊಳಿಸುವಲ್ಲಿ ಅವರು ನಡೆಸುವ ಶ್ರಮ ಚಿತ್ರದ ಪ್ರಮುಖ ಭಾಗವಾಗಿದೆ. ಸ್ಪಾಟ್‌ಲೈಟ್ ತಂಡ ಸಂತ್ರಸ್ತರ ಜತೆ ಚರ್ಚಿಸುತ್ತದೆ. ಎರಡೂ ಕಡೆಯ ವಕೀಲರು ಹಾಗೂ ಧರ್ಮಗುರುಗಳ ಅಭಿಪ್ರಾಯವನ್ನೂ ಪಡೆಯುತ್ತದೆ. ಈ ಅವಧಿಯಲ್ಲಿ ಅವರ ಶ್ರಮ ಫಲ ನೀಡುತ್ತದೆ. ಇಲ್ಲಿ ಪತ್ರಕರ್ತರಿಗೂ ಅವರದೇ ಆದ ವ್ಯಕ್ತಿತ್ವಗಳಿವೆ. ಇಲ್ಲಿರುವ ಬೇರೆ ಬೇರೆ ಪತ್ರಕರ್ತರು ತಮ್ಮದೇ ಆದ ಸ್ವಂತಿಕೆಯುಳ್ಳ, ಬೇರೆ ಬೇರೆ ಸ್ವಭಾವಗಳನ್ನು ಹೊಂದಿದವರು. ಸ್ಪಾಟ್‌ಲೈಟ್ ಚಿತ್ರದ ಸಂಭಾಷಣೆಗಳು ಸ್ವಲ್ಪಮಟ್ಟಿಗೆ ತೂಕದ್ದು ಎನಿಸುತ್ತವೆ. ಈ ಚಿತ್ರದಲ್ಲಿ ತೀರಾ ಗಂಭೀರ ವಿಷಯ ಹಾಗೂ ತ್ರಾಸದಾಯಕ ಪ್ರಯತ್ನದ ಬಗ್ಗೆ ಯಾವುದೇ ವಿವೇಕರಹಿತ ಪುನರಾವರ್ತನೆ ಇಲ್ಲದಿರುವುದರಿಂದ ವಿವರಗಳನ್ನು ಸಮರ್ಪಕವಾಗಿ ಅರ್ಥೈಸಿಕೊಳ್ಳಲು ಪೂರಕವಾಗಿ ಕೆಲಸ ಮಾಡುತ್ತದೆ. ಇಲ್ಲಿ ಯಾವ ಪಾತ್ರಗಳು ಭಾವಾತಿರೇಕವನ್ನು ತಲುಪುವುದಿಲ್ಲ. ಹಾಗೆಯೇ ಪಾತ್ರಗಳ ವೈಭವೀಕರಣವೂ ಇಲ್ಲ. ವಾಸ್ತವದ ನೆಲೆಯಲ್ಲಿ ಕತೆಯನ್ನು ನಿರ್ದೇಶಕ ನಿರೂಪಿಸುತ್ತಾ ಹೋಗುತ್ತಾನೆ. ಇಲ್ಲಿ ಪತ್ರಕರ್ತರ ತನಿಖೆಯನ್ನು ನಿಖರವಾಗಿ ರೂಪಿಸಲಾಗಿದೆ. ಇದರ ಕೀರ್ತಿ ಸಹ ಸಂಭಾಷಣೆಕಾರರಾದ ಜೋಶ್ ಸಿಂಗರ್ ಹಾಗೂ ಮೆಕಾರ್ತಿಯವರಿಗೂ ಸಲ್ಲಬೇಕು.

ವಾಸ್ತವವಾಗಿ ಸ್ಪಾಟ್‌ಲೈಟ್ ತನಿಖಾ ಪತ್ರಕರ್ತರ ತಂಡ ನಡೆಸಿದ ತನಿಖೆಗೆ ಪುಲಿಟ್ಜರ್ ಪ್ರಶಸ್ತಿ ಬಂದಿತ್ತು. ಈ ಚಿತ್ರವನ್ನು ನೀವು ವೀಕ್ಷಿಸಿದರೆ ಅವರಿಗೆ ಯಾಕೆ ಪ್ರಶಸ್ತಿ ಬಂತು ಎನ್ನುವುದನ್ನು ಅರ್ಥಮಾಡಿಕೊಳ್ಳುವುದು ತೀರಾ ಸುಲಭ. ತೀರಾ ಗಟ್ಟಿ, ಪ್ರೇಕ್ಷಣೀಯ ಹಾಗೂ ಆಘಾತಕಾರಿ, ಖಂಡಿತವಾಗಿಯೂ ಅತ್ಯುತ್ತಮ ಕೆಲಸ. ಕೆಲ ದಿನಗಳ ಕಾಲವಾದರೂ ನಿಮ್ಮ ಮನದಲ್ಲಿ ಗಾಢವಾಗಿ ಉಳಿಯುವ ಶಕ್ತಿಯನ್ನು ಈ ಚಿತ್ರ ಹೊಂದಿದೆ.

ಪತ್ರಕರ್ತ
ಉಮರ್ ಅಬ್ದುಲ್ಲಾ ಪತ್ತೇದಾರಿಕೆ!
ಜಮ್ಮು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಉಮರ್ ಅಬ್ದುಲ್ಲಾ ರಹಸ್ಯ ಪತ್ತೇದಾರಿಕೆ ನಡೆಸಿ, ತೀರಾ ರಹಸ್ಯ ಎನಿಸುವ ವಿಷಯಗಳನ್ನು ಬಹಿರಂಗಗೊಳಿಸಿದ್ದಾರೆ. ಇದರ ಎಲ್ಲ ಕೀರ್ತಿ ಸಲ್ಲಬೇಕಾಗಿರುವುದು ಅವರ ಮೊಬೈಲ್‌ನಲ್ಲಿರುವ ಆ್ಯಪ್‌ಗೆ. ಅದು ಉಮರ್ ಅವರ ರಾಜಕೀಯ ಪ್ರತಿಸ್ಪರ್ಧಿ ಮೆಹಬೂಬ ಮುಫ್ತಿ ಹಾಗೂ ಬಿಜೆಪಿ ಪ್ರಧಾನ ಕಾರ್ಯದರ್ಶಿ ರಾಮಮಾಧವ್ ಅವರ ನಡುವೆ ಶ್ರೀನಗರದಲ್ಲಿ ನಡೆಯಬೇಕಿದ್ದ ರಹಸ್ಯ ಸಭೆಯಾಗಬೇಕಿತ್ತು. ಅಬ್ದುಲ್ಲಾ ತಮ್ಮ ಫ್ಲೈಟ್ ಟ್ರ್ಯಾಕರ್ ಮೊಬೈಲ್ ಆ್ಯಪ್‌ನಲ್ಲಿ ವೇಳಾಪಟ್ಟಿಯಲ್ಲಿ ಸೇರಿರದ ವಿಟಿ-ಜೆಎಸ್‌ಜಿ ವಿಮಾನ ಶ್ರೀನಗರ ವಿಮಾನ ನಿಲ್ದಾಣದಲ್ಲಿ ಸಾಮಾನ್ಯ ಕಾರ್ಯಾಚರಣೆ ವೇಳೆಯನ್ನು ಮೀರಿದ ಬಳಿಕ ಇಳಿದುದನ್ನು ಪತ್ತೆ ಮಾಡಿದರು. ಅವರೊಳಗಿನ ಪತ್ತೇದಾರ ಕೆಲಸ ಮಾಡಲಾರಂಭಿಸಿದ. ಶ್ರೀನಗರದಲ್ಲಿ ಏನೋ ನಡೆಯುತ್ತಿದೆ ಎನ್ನುವ ಗುಮಾನಿ ಹುಟ್ಟಿತು. ತಕ್ಷಣ ಅವರು ಪಿಡಿಪಿ- ಬಿಜೆಪಿ ಸರಕಾರ ರಚನೆ ಕಸರತ್ತು ನಡೆಯುತ್ತಿದೆ ಎಂದು ಟ್ವೀಟ್ ಮಾಡಿದರು. ಅಬ್ದುಲ್ಲಾ ಆಗ ದಿಲ್ಲಿಯಲ್ಲಿದ್ದರು. ಆದರೆ ಶ್ರೀನಗರದ ಮಾಧ್ಯಮ ದಂಡು ತಕ್ಷಣ ಮುಫ್ತಿಯವರ ಅಧಿಕೃತ ನಿವಾಸ ಪೇರ್‌ವ್ಯೆ ಕಾಟೇಜ್‌ಗೆ ಧಾವಿಸಿತು. ಸಹಜವಾಗಿಯೇ ಅಲ್ಲಿ ಮಾಧವ್ ಮತ್ತು ಮುಫ್ತಿ ನಡುವಿನ ಮಾತುಕತೆ ನಡೆಯುತ್ತಿತ್ತು. ಡಿಶ್ ಟಿವಿ ಹಾಗೂ ಝೀಟಿವಿ ಮಾಲಕತ್ವದ ಸುಭಾಶ್ಚಂದ್ರ ಅವರ ಖಾಸಗಿ ವಿಮಾನ ಕಾರ್ಯಾಚರಣೆ ನಡೆಸಿತ್ತು ಎನ್ನುವುದು ನಂತರ ವರದಿಯಾಯಿತು. ಅವರು ಹೇಳುವಂತೆ ರಾಜಕೀಯದಲ್ಲಿ ಚಕ್ರಗಳ ಒಳಗೆ ಒಳಚಕ್ರಗಳಿರುತ್ತವೆ!

ದಿಗ್ಗಿರಾಜನ ಮನೆ ದೋಸೆಯೂ ತೂತು
ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ಹಾಗೂ ಹಿರಿಯ ಕಾಂಗ್ರೆಸ್ಸಿಗ ದಿಗ್ವಿಜಯ್ ಸಿಂಗ್ ಅವರಿಗೆ ಇದೀಗ ಮನೆಸಮಸ್ಯೆ ತೀವ್ರವಾಗಿ ಕಾಡುತ್ತಿದೆ. ಅವರ ಯುವಪತ್ನಿ, ಟಿವಿ ನಿರೂಪಕಿಯಿಂದಲ್ಲ; ಬದಲಾಗಿ ಅವರ ಇನ್ನೊಂದು ಕುಟುಂಬದ ಸದಸ್ಯರಿಂದ. ಸಹಜವಾಗಿಯೇ ಅವರ ಮಗ ಹಾಗೂ ಕುಟುಂಬದ ಇತರರು ಸಿಂಗ್ ಹಾಗೂ ಅವರ ಪತ್ನಿಯ ಹಲವು ವಿಷಯಗಳಿಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಪರಿಸ್ಥಿತಿ ಕೈ ಮೀರಿ ಹೋಗುತ್ತಿದೆ ಎಂದು ಗೊತ್ತಾದ ತಕ್ಷಣ ಅವರು ವೌನಕ್ಕೆ ಶರಣಾದರು. ಒಳಗೊಳಗೇ ಈ ಬಗ್ಗೆ ಏನು ಮಾಡಬೇಕೋ ಅದನ್ನು ಮಾಡಲು ಆರಂಭಿಸಿದರು. ಸದ್ದುಗದ್ದಲವಿಲ್ಲದೆ ಹೊಸದಿಲ್ಲಿಯಲ್ಲಿನ ತಮ್ಮ ಅಧಿಕೃತ ಬಂಗ್ಲೆಯಿಂದ ಶಿಫ್ಟ್ ಆಗಿ ದಿಲ್ಲಿಯ ಇನ್ನೊಂದು ಮನೆಯಲ್ಲಿ ವಾಸ್ತವ್ಯ ಇದ್ದಾರೆ. ಈ ಬಗ್ಗೆ ದಿಗ್ಗಿರಾಜ ಏನೂ ಹೇಳಿಲ್ಲವಾದರೂ, ಕೌಟುಂಬಿಕವಾಗಿ ಏನೋ ನಡೆದಿದೆ ಎನ್ನುವ ಮಾತು ದಿಲ್ಲಿ ರಾಜಕೀಯ ವರ್ತುಲದಲ್ಲಿ ಕೇಳಿಬರುತ್ತಿದೆ. ಬಹುಶಃ ಈ ಕಾರಣದಿಂದ ದಿಗ್ವಿಜಯ್ ಸಿಂಗ್ ಮಾಧ್ಯಮದಲ್ಲಿ ಅಷ್ಟಾಗಿ ಕಾಣಿಸಿಕೊಳ್ಳುತ್ತಿಲ್ಲ. ಅವರ ಟ್ವಿಟರ್ ಹ್ಯಾಂಡಲ್ ಕೂಡಾ ಹಿಂದಿನಂತೆ ಬೆಂಕಿ ಉಗುಳುತ್ತಿಲ್ಲ.

ತಮಿಳುನೆಲ ಸಾಹಸ
ಕೇಂದ್ರದ ಆಡಳಿತಾರೂಢ ಬಿಜೆಪಿಯ ಅಧ್ಯಕ್ಷ ಹುದ್ದೆಯನ್ನು ಅವಿರೋಧ ಹಾಗೂ ಅನಾಯಾಸವಾಗಿ ಗೆದ್ದ ಅಮಿತ್ ಶಾ ಅವರಿಗೆ ಇದೀಗ ಏನಾದರೂ ಸಾಧಿಸಲೇಬೇಕು ಇಲ್ಲದಿದ್ದರೆ ಪರಿಸ್ಥಿತಿ ಎದುರಿಸಲೇಬೇಕಾಗುತ್ತದೆ ಎನ್ನುವುದು ಮನವರಿಕೆಯಾಗಿದೆ. ಹಲವು ರಾಜ್ಯಗಳಲ್ಲಿ ವಿಧಾನಸಭಾ ಚುನಾವಣೆಗಳು ಸದ್ಯೋಭವಿಷ್ಯದಲ್ಲಿದ್ದು, ಇದು ಬಿಜೆಪಿ ಚಾಣಕ್ಯನಿಗೆ ದೊಡ್ಡ ಹೊರೆಯಾಗಿ ಪರಿಣಮಿಸಿದೆ. ಉದಾಹರಣೆಗೆ ತಮಿಳುನಾಡಿನಲ್ಲಿ ಏನು ನಡೆಯುತ್ತಿದೆ ಎನ್ನುವುದನ್ನು ಗಮನಿಸಿ. 2014ರ ಚುನಾವಣೆಯ ಕಾಮನಬಿಲ್ಲು ಮೈತ್ರಿಯ ಬಣ್ಣಗುಂದಿದ್ದು, ರಾಜ್ಯದಲ್ಲಿ ತಳ ಊರಲು ಶತಾಯ ಗತಾಯ ಮೈತ್ರಿ ಮಾಡಿಕೊಳ್ಳಲೇಬೇಕು ಎಂಬ ಅನಿವಾರ್ಯತೆಗೆ ಬಿಜೆಪಿ ಸಿಲುಕಿದೆ. ಈ ಹಿನ್ನೆಲೆಯಲ್ಲೇ ಪಕ್ಷದ ರಾಜ್ಯ ಉಸ್ತುವಾರಿ ಹೊಣೆ ಹೊತ್ತಿರುವ ಪ್ರಧಾನ ಕಾರ್ಯದರ್ಶಿ ಮುರಳೀಧರ ರಾವ್ ಅವರನ್ನು ಜಯಲಲಿತಾ ಭೇಟಿಗೆ ಕಳುಹಿಸಿಕೊಟ್ಟಿದ್ದಾರೆ. ಆದರೆ ‘ಅಮ್ಮ’ನ ಕೃಪಾಕಟಾಕ್ಷ ಇವರತ್ತ ಹರಿಯಲೇ ಇಲ್ಲ. ಹಲವು ಗಂಟೆಗಳ ಕಾಲ ಕಾಯಿಸಿ ಕೊನೆಗೆ ದರ್ಶನಭಾಗ್ಯ ಕರುಣಿಸಿದರು. ಶಾ ದೃಷ್ಟಿ ತಕ್ಷಣ ಡಿಎಂಡಿಕೆ ಹಾಗೂ ಡಿಎಂಕೆ ಕಡೆ ಹೊರಳಿತು. ಈಗಾಗಲೇ ಕಾಂಗ್ರೆಸ್ ಜತೆ ಕೈಜೋಡಿಸಿರುವ ಹಿನ್ನೆಲೆಯಲ್ಲಿ ಡಿಎಂಕೆ ಕೂಡಾ ಬೆನ್ನು ತೋರಿಸಿತು. ಇದೀಗ ಡಿಎಂಡಿಕೆ ಕೊನೆಯ ಆಸೆ. ಆದರೆ ತಮ್ಮ ತಲೆನೋವು ನಿಧಾನವಾಗಿ ಆರಂಭವಾಗುತ್ತಿದೆ ಎನ್ನುವ ವಾಸ್ತವ ಅವರಿಗೆ ಇದೀಗ ಮನವರಿಕೆಯಾಗಿದೆ.

ಪ್ರಚಾರಕ್ಕೆ ಗೋಗರೆದ ಸಚಿವ
ಮೋದಿಯವರ ಗಮನ ಸೆಳೆಯುವುದು ಇದೀಗ ಎಲ್ಲರ ಏಕೈಕ ಗುರಿ. ಇದೀಗ ಸಂಪುಟ ಪುನರ್ರಚನೆ ಪುಕಾರು ಹುಟ್ಟಿಕೊಂಡಿದೆ. ತಮ್ಮ ಕಾರ್ಯಶೈಲಿ ಹಾಗೂ ದಕ್ಷತೆ ಅಷ್ಟೊಂದು ಪ್ರಭಾವಶಾಲಿಯಾಗಿಲ್ಲ ಎಂಬ ಕಸಿವಿಸಿ ಇರುವ ಸಚಿವರು ತಮ್ಮನ್ನು ಸಮರ್ಥ ಎಂದು ಬಿಂಬಿಸಿಕೊಳ್ಳಲು ಇನ್ನಿಲ್ಲದ ಕಸರತ್ತು ನಡೆಸುತ್ತಿದ್ದಾರೆ. ಇದಕ್ಕೆ ಸುಲಭ ಮತ್ತು ಏಕೈಕ ಮಾರ್ಗವೆಂದರೆ, ತಮ್ಮ ಪರವಾಗಿ ಮಾಧ್ಯಮಗಳಲ್ಲಿ ಪ್ರಚಾರ ಪಡೆಯುವುದು. ಹಿಂದಿ ಪತ್ರಿಕೆಗಳತ್ತ ಮತ್ತು ಹಿಂದಿ ಸುದ್ದಿವಾಹಿನಿಗಳತ್ತ ಮೋದಿ ನೋಟ ಹರಿದಿದೆ ಎಂದು ಇವರ ಮಾಧ್ಯಮ ಸಲಹೆಗಾರರು ತಲೆಗೆ ತುಂಬಿದ್ದಾರೆ. ಇದರಿಂದಾಗಿ ದಿಢೀರನೆ ಹಿಂದಿ ಪತ್ರಿಕೆ ಹಾಗೂ ಚಾನೆಲ್‌ಗಳಿಗೆ ದೂರವಾಣಿ ಪ್ರವಾಹ ಹರಿದಿದೆ. ಮಾಧ್ಯಮಗಳಿಂದ ಮಾರುದೂರ ಇರುತ್ತಿದ್ದ ಸಚಿವರೊಬ್ಬರು ಕೂಡಾ ಹಿಂದಿ ಪತ್ರಿಕೆಗಳಲ್ಲಿ ತಮ್ಮ ವಿಶೇಷ ಸಂದರ್ಶನಕ್ಕೆ ದುಂಬಾಲು ಬಿದ್ದಿದ್ದಾರೆ.

ಹೂ ರಾಜಕಾರಣ
ನಟನೆಯಿಂದ ರಾಜಕಾರಣಕ್ಕೆ ಬಂದ ನಗ್ಮಾ ಅಂದುಕೊಂಡಷ್ಟು ವೇಗವಾಗಿ ಕಾರ್ಯಗಳು ಕೈಗೂಡುತ್ತಿಲ್ಲ. ಅಖಿಲ ಭಾರತ ಮಹಿಳಾ ಕಾಂಗ್ರೆಸ್‌ನ ಪ್ರಧಾನ ಕಾರ್ಯದರ್ಶಿಯಾಗಿ ಅವರು ಕಳೆದ ವರ್ಷ ನಿಯುಕ್ತಿಗೊಂಡರು. ಇದೀಗ ನಗ್ಮಾ ಚಿತ್ತ ರಾಜ್ಯಸಭಾ ಸೀಟಿನತ್ತ ಹೊರಳಿದೆ ಎನ್ನಲಾಗುತ್ತಿದೆ. ಇದರಿಂದಾಗಿ ಬಿಹಾರ ವಿಧಾನಸಭೆಯಲ್ಲಿ ತಮ್ಮ ಪಕ್ಷದ ಸ್ವಂತ ಬಲದಿಂದ ಗೆಲ್ಲಲು ಸಾಧ್ಯವಿಲ್ಲ ಎಂಬ ವಾಸ್ತವದ ಹಿನ್ನೆಲೆಯಲ್ಲಿ ಅಧಿಕಾರರೂಢ ಸಂಯುಕ್ತ ಜನತಾದಳದ ಹೆಚ್ಚುವರಿ ಮತಗಳಿಗೆ ಗಾಳ ಹಾಕಿದ್ದಾರೆ ಎನ್ನಲಾಗಿದೆ. ಪದೇ ಪದೇ ಪಾಟ್ನಾಗೆ ಭೇಟಿ ನೀಡುತ್ತಿರುವ ನಗ್ಮಾ ಇದೀಗ ಹೂಗುಚ್ಛಗಳೊಂದಿಗೆ ಜೆಡಿಯು ಮುಖಂಡರನ್ನು ಭೇಟಿಯಾಗುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ ತಮ್ಮದೇ ಪಕ್ಷದ ಮುಖಂಡರನ್ನು ರಾಜ್ಯಸಭೆೆಗೆ ಕಳುಹಿಸುವಲ್ಲೇ ನಿತೀಶ್ ಸಮಸ್ಯೆ ಎದುರಿಸುತ್ತಿರುವ ಹಿನ್ನೆಲೆಯಲ್ಲಿ ಈ ಹೂ ರಾಜಕಾರಣ ಫಲ ನೀಡುವ ಸಾಧ್ಯತೆ ಕಡಿಮೆ ಎಂದು ವಿಶ್ಲೇಷಿಸಲಾಗುತ್ತಿದೆ. ಬಹುಶಃ ನಗ್ಮಾ ನೀಡುವ ಹೂಗುಚ್ಛಗಳಂತೆ ಅವರ ರಾಜಕೀಯ ಮಹತ್ವಾಕಾಂಕ್ಷೆ ಕೂಡಾ ನಿಶ್ಶಬ್ದವಾಗಿ ಬಾಡಿದರೆ ಆಶ್ಚರ್ಯವಿಲ್ಲ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X