Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಾರ್ತಾಭಾರತಿ ವಿಶೇಷ
  3. ಕೃತಿ ಪರಿಚಯ
  4. ಮನಕೆ ತಂಪು ಕೊಡುವ ‘ಹೊರವಲಯದ ಗಾಳಿ’

ಮನಕೆ ತಂಪು ಕೊಡುವ ‘ಹೊರವಲಯದ ಗಾಳಿ’

-ಕಾರುಣ್ಯಾ-ಕಾರುಣ್ಯಾ20 Feb 2016 11:55 PM IST
share

ಕನ್ನಡದ ಮಾನವ್ಯ ಕವಿಯೆಂದೇ ಹೆಸರಾಗಿರುವ ನವೋದಯದ ದಟ್ಟ ಪ್ರಭಾವದ ಜೊತೆ ಜೊತೆಗೇ ಬರೆಯುತ್ತಿರುವ ಬಿ. ಎ. ಸನದಿಯವರ ಅನುವಾದಿತ ಕವನ ಸಂಕಲನ ‘ಹೊರವಲಯದ ಗಾಳಿ’. ಇದು ಸಂಪೂರ್ಣ ಅನುವಾದಿತ ಕವನಗಳಾಗಿದ್ದರೂ, ಈಗಾಗಲೇ ಅವರ ಬೇರೆ ಬೇರೆ ಕವನ ಸಂಕಲನಗಳಲ್ಲಿ ಪ್ರಕಟವಾಗಿವೆ. ಕೆಲವು ಅಪ್ರಕಟಿತ ಕವನಗಳೂ ಇಲ್ಲಿವೆ. ಇಲ್ಲಿ ಸುಮಾರು 55 ಅನುವಾದಿತ ಕವಿತೆಗಳಿವೆ. ಇಂಗ್ಲಿಷ್, ಉರ್ದು, ಅರೇಬಿಕ್, ಚೀನಿ, ಮರಾಠಿ ಹೀಗೆ ಹಲವು ಭಾಷೆಗಳು, ಹಲವು ಭಾವಗಳನ್ನು ಕನ್ನಡ ಭಾಷೆಯ ಲಯಕ್ಕೆ ಪೂರಕವಾಗಿ ಇಳಿಸಿಕೊಟ್ಟಿದ್ದಾರೆ ಕವಿ ಸನದಿ. ಅಮೆರಿಕನ್ ಕವಿ ಹೆನ್ರಿಯ ಬಾಣ ಮತ್ತು ಹಾಡು ಹೇಗೆ ಈ ಭೂಮಿಯ ಮೇಲೆ ಹಾಡು ಗಾಳಿಯ ರೂಪದಲ್ಲಿ ಹರಡುತ್ತಾ ಮನಮನದಲ್ಲಿ ಬೀಡು ಕಟ್ಟಿಕೊಳ್ಳುತ್ತವೆ ಎನ್ನುವುದನ್ನು ಹೇಳುತ್ತದೆ. ಥೋಮಸ್ ಹುಡ್ ಅವರ ‘ರುತ್’ ಸನದಿಯವರ ಲೇಖನಿಯಲ್ಲಿ ‘ಒಂದು ತೆನೆ’ಯಾಗಿ ಹೊಸದಾಗಿ ಹುಟ್ಟಿದೆ. ಖಲೀಲ್ ಗಿಬ್ರಾನ್‌ರ ‘ಲೀವ್ ಮಿ ಮೈ ಬ್ಲೇಮರ್’ ‘ನನ್ನ ಪಾಡಿಗೆನ್ನ ಬಿಡು’ ಎಂದು ನಿಂದಕರಿಗೆ ಮನವಿ ಮಾಡಿಕೊಡುತ್ತದೆ. ‘ಮಮತೆಯ ಮೆರವಣಿಗೆಯ...’ ಕಡೆಗೆ ಕವಿ ಕೈ ತೋರಿಸಿ, ನಿಂದಕನನ್ನು ದೂರ ನಿಲ್ಲು ಎಂದು ಹೇಳುತ್ತಾನೆ. ಗಿಬ್ರಾನ್‌ನನ್ನು ತನ್ನದೇ ಲಯಕ್ಕೆ ಜೋಡಿಸುವ ಪ್ರಯತ್ನವನ್ನು ಮಾಡಿದ್ದಾರೆ ಸನದಿ. ಶೆಲ್ಲಿಯ ‘ಲವ್ಸ್ ಫಿಲೋಸಫಿ’ ಸನದಿಯ ಕೈಯಲ್ಲಿ ‘ಪ್ರೇಮ ಪ್ರಣಾಲಿ’ಯಾಗಿದೆ. ರವೀಂದ್ರನಾಥ ಟಾಗೋರರ ಗೀತಾಂಜಲಿಯನ್ನು ಕನ್ನಡಕ್ಕಿಳಿಸುತ್ತಾ ‘‘ತನ್ನೆಲ್ಲ ಬಲದಿಂದ ಬಿರುಗಾಳಿ, ಶಾಂತಿ/ ಭೇದಿಸುತ ಹುಟ್ಟು, ಕೊನೆಗಪ್ಪುವೊಲು ಶಾಂತಿ/ ನಿನ್ನ ಪ್ರೀತಿಗೆ ನನ್ನ ಸ್ಮತಿ ಅಸಹಕೃತಿಯಾಗಿ/ ನಿಂದರೂನು ಮಿಡಿವುದೆದೆ ಮಧುರ ಶ್ರುತಿಯಾಗಿ/ ನೀನೆನಗೆ ಬೇಕೆಂದು-ನೀನು- ಮಾತ್ರ!/ ನನ್ನೆದೆಗೆ ಈ ಮಂತ್ರ ಅನಂತ ಸೂತ್ರ!!’’ ಎಂದು ತನ್ಮಯಗೊಳ್ಳುತ್ತಾರೆ. ಹಾಗೆಯೇ ಅಬ್ರಹಾಂ ಲಿಂಕನ್ ಅವರ ಮೂರು ಕವಿತೆಗಳು ಸರಳ ಕನ್ನಡದಲ್ಲಿ ಮನ ಮುಟ್ಟುತ್ತದೆ. ಯೆಮೆನ್ ಕವಿ ಮುಹಮ್ಮದ್ ನೌಮಾನ್ ಅವರ ‘ಸೆರೆಮನೆಯಲ್ಲಿ’ ಕವಿತೆ ವರ್ತಮಾನದ ಈ ಸಂದರ್ಭದಲ್ಲಿ ಹೆಚ್ಚು ಆಪ್ತವಾಗಿ ನಮ್ಮನ್ನು ಕಾಡುತ್ತದೆ.
ಸುಂದರ ಪುಸ್ತಕ ಪ್ರಕಾಶನ , ಧಾರವಾಡ ಹೊರತಂದಿರುವ ಈ ಕೃತಿಯ ಮುಖಬೆಲೆ 70 ರೂ. ಆಸಕ್ತರು 9449125172 ದೂರವಾಣಿಯನ್ನು ಸಂಪರ್ಕಿಸಬಹುದು.
 

share
-ಕಾರುಣ್ಯಾ
-ಕಾರುಣ್ಯಾ
Next Story
X