ಎಂ.ಜಿ.ರೋಡ್‌ನಲ್ಲಿ ಜನ ಜಾತ್ರೆ...!
ಪ್ರತಿನಿತ್ಯ ವಾಹನಗಳಿಂದ ಸದಾ ಗಿಜಿಗುಡುತ್ತಿದ್ದ ಬೆಂಗಳೂರಿನ ಮಹಾತ್ಮ ಗಾಂಧಿ (ಎಂ.ಜಿ.ರೋಡ್)ರಸ್ತೆ ರವಿವಾರ ದೇಶಿಯ ಆಟಗಳ ಕಲರವ, ಜಾನಪದ ನೃತ್ಯ, ಕಲೆ, ಸಂಸ್ಕೃತಿ ಗಳ ಸಂಗಮ ಹಾಗೂ ಹಳ್ಳಿಗಾಡಿನ ಜಾನಪದ ಜಾತ್ರೆಯ ಸೊಗಡಿನ ಸಂಭ್ರಮಕ್ಕೆ ಸಾಕ್ಷಿಯಾಗಿತ್ತು. ಸಂಚಾರ ದಟ್ಟಣೆ, ಮಾಲಿನ್ಯ ಕಡಿಮೆಗೊಳಿಸುವ ಉದ್ದೇಶದಿಂದ ನಗರ ಭೂ ಸಾರಿಗೆ ನಿರ್ದೇಶನಾಲಯ ವಿವಿಧ ಇಲಾಖೆ ಸಹಯೋಗದಲ್ಲಿ ಎಂ.ಜಿ.ರಸ್ತೆಯ ಅನಿಲ್ ಕುಂಬ್ಳೆ ವೃತ್ತದಿಂದ ಬ್ರಿಗೇಡ್ ರಸ್ತೆಯ ಜಂಕ್ಷನ್‌ವರೆಗೆ ‘ವಾಹನ ಸಂಚಾರ ಮುಕ್ತ ರಸ್ತೆ ಹಮ್ಮಿಕೊಂಡಿತ್ತು.
Next Story





