ರಾಹುಲ್‌ಗಾಂಧಿಗೆ ಹೆಚ್ಚಿದ ಜನಪ್ರಿಯತೆ, ಮೋದಿಗೆ ಪ್ರಬಲ ಎದುರಾಳಿ: ಇಂಡಿಯ ಟುಡೆ ಸಮೀಕ್ಷೆ

ಹೊಸದಿಲ್ಲಿ: ನರೇಂದ್ರ ಮೋದಿಯವರ ಜನಪ್ರಿಯತೆ ಕುಗ್ಗುತ್ತಿದೆ ಮತ್ತು ಕಾಂಗ್ರೆಸ್ ಪ್ರಬಲ ಪ್ರತಿಸ್ಪರ್ಧಿಯಾಗಿ ರೂಪುಗೊಂಡಿದೆ ಎಂದು ಇಂಡಿಯ ಟುಡೆ ಸಮೀಕ್ಷೆ ತಿಳಿಸಿದೆ. ಮೋದಿ ಸರಕಾರದ ಎರಡು ವರ್ಷಗಳ ಆಡಳಿತದಲ್ಲಿ ಪ್ರಯೋಜನ ಕಾಂಗ್ರೆಸ್ಸಿಗೆ ಆಗಿದ್ದು ಇಂಡಿಯ ಟುಡೆ ಸರ್ವೇ ಪ್ರಕಾರ ರಾಹುಲ್‌ಗಾಂದಿಯ ಜನಪ್ರಿಯತೆ ಪಾತಾಳದಿಂದ ಮೇಲಕ್ಕೇರಿದೆ. ಶೆ.8ರಷ್ಟೇ ಜನಪ್ರಿಯತೆ ದರವಿದ್ದ ರಾಹುಲ್‌ಗೆ ಕಳೆದೆರಡು ವರ್ಷಗಳಲ್ಲಿ ಶೆ. 22ರಷ್ಟಕ್ಕೆ ಜನಪ್ರಿಯತೆಯನ್ನು ಹೆಚ್ಚಿಸಿಕೊಂಡಿದ್ದಾರೆ.
2019ನೆ ಲೋಕಸಭಾ ಚುನಾವಣೆ ವೇಳೆಗೆ ಮೋದಿಯನ್ನು ಎದುರಿಸಲು ಅತಿ ಸೂಕ್ತವ್ಯಕ್ತಿಯಾಗಿ ರಾಹುಲ್ ಬೆಳೆಯುತ್ತಿದ್ದಾರೆ ಎಂದು ಇಂಡಿಯ ಟುಡೆ ಸಮೀಕ್ಷೆ ತಿಳಿಸಿದೆ. ಇದೇ ವೇಳೆ ಮೋದಿ ಮತ್ತು ಎನ್ಡಿಯೆಯ ಜನಬೆಂಬಲದಲ್ಲಿ ಇಳಿಮುಖವಾಗಿದೆ ಎಂದು ಸರ್ವೇ ತಿಳಿಸುತ್ತಿದೆ. ಈವರ್ಷ ಲೋಕಸಭಾ ಚುನಾವಣೆ ನಡೆಯುವುದಾದರೆ ಕಾಂಗ್ರೆಸ್ ನೇತೃತ್ವದ ಯುಪಿಎಯ ಸೀಟುಗಳು 110ಕ್ಕೇರುವುದು ಗ್ಯಾರಂಟಿ ಎಂದು ಸಮೀಕ್ಷೆಯ ಅಭಿಮತವಾಗಿದೆ.
ಈಗ ಯುಪಿಎಗೆ ಕೇವಲ 88 ಪಾರ್ಲಿಮೆಂಟ್ ಸದಸ್ಯರಿದ್ದಾರೆ. ಎನ್ಡಿಯೆಎ 337 ಸೀಟುಗಳಲ್ಲಿ ಸುಮಾರು 50 ಸೀಟುಗಳನ್ನು ಕಳಕೊಳ್ಳಬೇಕಾಗುವುದು. ಹೀಗೆಯೇ ವಾತಾವರಣ ಇದ್ದರೆ 2019ಕ್ಕಾಗುವಾಗ ರಾಹುಲ್ ಮೋದಿಗೆ ಬಲಿಷ್ಠ ಎದುರಾಳಿಯಾಗಿ ರೂಪುಗೊಳ್ಳಲಿದ್ದಾರೆ. 2014ರಲ್ಲಿ ಮೋದಿ ಅಲೆಯಲ್ಲಿ ಧರಾಶಾಯಿಯಾಗಿದ್ದ ಕಾಂಗ್ರೆಸ್ ಚೇತರಿಸಿಕೊಳ್ಳಲು ಈಗ ರಾಹುಲ್ ಉಪಯುಕ್ತವಾಗಿದ್ದಾರೆ ಹಾಗೂ ಹಿಂದೂಗಳ ನಡುವೆ ರಾಹುಲ್‌ಗಾಂಧಿಗೆ ಶೆ. 20ರಷ್ಟು ಅನಮೋದನೆ ಲಭಿಸಿದೆಯೆಂದು ಇಂಡಿಯ ಟುಡೆ ತನ್ನ ಸಮೀಕ್ಷೆಯಲ್ಲಿ ತಿಳಿದುಕೊಂಡಿದೆ.







