ಪಾರ್ಲಿಮೆಂಟ್, ರಾಷ್ಟ್ರಪತಿಭವನ, ತಾಜ್‌ಮಹಲ್ ಎಲ್ಲವನ್ನು ಕೆಡವಿ ಹಾಕಿ:ಆಝಂಖಾನ್

ರಾಂಪುರ್: ಉತ್ತರಪ್ರದೇಶದ ಸಚಿವ ಸಮಾಜವಾದಿ ಪಾರ್ಟಿ ನಾಯಕ ಆಝಂಖಾನ್ ಮತ್ತೆ ಸುದ್ದಿಯಲ್ಲಿದ್ದಾರೆ. ರಾಷ್ಟ್ರಪತಿಭವನ, ಪಾರ್ಲಿಮೆಂಟ್‌ಕಟ್ಟಡ ಹಾಗೂ ತಾಜ್‌ಮಹಲ್‌ನ್ನು ಧ್ವಂಸಗೊಳಿಸಬೇಕೆಂದು ಅವರು ಆಗ್ರಹಿಸಿದ್ದಾರೆ. ಆಝಂ ಖಾನ್‌ರನ್ನು ಬಾಯಿಮುಚ್ಚಿಸುವ ಪ್ರಯತ್ನಕ್ಕೆ ಮುಲಾಯಂ ಸಿಂಗ್‌ಆಗಲಿ ಅಖಿಲೇಶ್ ಯಾದವ್ ಆಗಲಿ ಮುಂದೆ ಬಂದಿಲ್ಲ. ಆಝಂ ಖಾನ್ ತನ್ನ ರಂಗು ರಂಗಿನ ಹೇಳಿಕೆಗಳನ್ನು ನಿಲ್ಲಿಸುವುದೂ ಇಲ್ಲ. ರಝ ಡಿಗ್ರಿ ಕಾಲೇಜ್‌ನಲ್ಲಿ ನಡೆದ ಸಮಾರಂಬದಲ್ಲಿ ್ಲ ಆಝಂ ಖಾನ್ ಹೊಸ ವಿವಾದಿತ ಹೇಳಿಕೆ ನೀಡಿದ್ದಾರೆ. ದೇಶದಲ್ಲಿ ಹಲವು ಗುಲಾಮತನದ ಸಂಕೇತಗಳಿವೆ ಎಂದ ಖಾನ್ ಅವು ಗುಲಾಮತ್ವವನ್ನು ಸೂಚಿಸುವ ಸ್ಮಾರಕಗಳಾಗಿ ಉಳಿದುಕೊಂಡಿವೆ . ಗುಲಾಮತ್ವದ ಗುರುತುಗಳನ್ನು ಅರಿತುಕೊಳ್ಳಲು ನಮ್ಮಿಂದ ಸಾಧ್ಯವಾದರೆ ಮೊದಲನೆಯದು ತಾಜ್ ಮಹಲಾಗಿದೆ. ಬ್ರಿಟಿಷ್ ಇಂಡಿಯದ ರಾಷ್ಟ್ರಪತಿಭವನ, ಪಾರ್ಲಿಮೆಂಟ್ ಕಟ್ಟಡಗಳೆಲ್ಲವೂ ಗುಲಾಮತ್ವಕ್ಕೇ ಉದಾಹರಣೆಗಳಾಗಿವೆ. ಇವೆಲ್ಲವೂ ಉಳಿಯಬೇಕಾದ ಸ್ಮಾರಕಗಳಲ್ಲ ಕೆಡವಬೇಕಾದವು ಎಂದು ಅವರುಅಭಿಪ್ರಾಯ ಮಂಡಿಸಿದ್ಧಾರೆ.
ಈಸುದ್ದಿಯನ್ನು ಝೀ ನ್ಯೂಸ್ ಪ್ರಕಟಿಸಿದೆ. ಪ್ರಧಾನಿ ಮೋದಿ ಪಾಕ್‌ಗೆ ಭೇಟಿ ನೀಡಿದ್ದು ದಾವೂದ್ ಇಬ್ರಾಹೀಂನನ್ನು ಭೇಟಿಯಾಗಲಿಕ್ಕಾಗಿತ್ತು ಎಂದು ಈ ಹಿಂದೆ ಖಾನ್ ಗುಡುಗಿದ್ದರು. ಜೊತೆಗೆ ಹಲವಾರು ವಿವಾದಿತ ಹೇಳಿಕೆಗಳೊಂದಿಗೆ ಸದಾ ಸುದ್ದಿಯಲ್ಲಿರುತ್ತಾರೆ. ಈಗ ಅವರು ತಾಜ್‌ಮಹಲ್ ಪಾರ್ಲಿಮೆಂಟ್ ಭವನ, ರಾಷ್ಟ್ರಪತಿ ಭವನ ಪರಕೀಯ ಗುಲಾಮತ್ವದ ಪ್ರತೀಕಗಳೆಂದು ವಾದಿಸಿ ಅದನ್ನು ಧ್ವಂಸಮಾಡಲು ಆಗ್ರಹಿಸಿದ್ದಾರೆ.





