ಇಷ್ಟವಿರುವ ಗಂಡು-ಹೆಣ್ಣು ಜೊತೆಯಾಗಿರಬಹುದು, ಇಲ್ಲಿ ಯಾರೂ ವಿರೋಧಿಸುವುದಿಲ್ಲ !
ಜೈಪುರದಲ್ಲಿ ಹೀಗೊಂದು ಗೋತ್ರ ಸಂಪ್ರದಾಯ !
.jpg)
ಜೈಪುರ: ಇಲ್ಲಿ ಇಷ್ಟಾನಿಷ್ಟಗಳನ್ನು ನಿರ್ಧರಿಸುವುದು ಆಯಾಜನರೇ. ಇದನ್ನು ಈ ಸಮುದಾಯ ಬೆಂಬಲಿಸುತ್ತದೆ. ಮದುವೆಯಾಗದೆಯೇ ಇಷ್ಟವಿರುವವರು ಜೊತೆಯಾಗಿ ಬಾಳಬಹುದು. ರಾಜಸ್ಥಾನದ ಗರೇಷ್ಯ ಗೋತ್ರದ ಪದ್ಧತಿ ಇದು. ಸಾವಿರ ವರ್ಷಗಳಿಂದ ಲಿವಿಂಗ್ ಟುಗೆದರ್ ಆಚರಿಸಿಕೊಂಡು ಬರುತ್ತಿರುವ ಭಾರತೀಯ ಗ್ರಾಮ ಇದೊಂದೆ. ಭಾರತದಲ್ಲಿ ಲಿವಿಂಗ್ ಟುಗೆದರ್‌ಗೆ ಮಾನ್ಯತೆಯಿಲ್ಲ.
ಇವರಿಗೆ ಇದು ಯಾವುದೂ ಬೇಕಿಲ್ಲ. ಈ ಗ್ರಾಮದಲ್ಲಿ ಮದುವೆಗೆ ಮುಂಚೆಯೇ ವರ್ಷಗಳ ಕಾಲ ಗಂಡು ಹೆಣ್ಣು ಜೊತೆಯಾಗಿ ವಾಸಿಸುತ್ತಾರೆ. ಗ್ರಾಮದ ಎಪ್ಪತ್ತುವರ್ಷದ ವ್ಯಕ್ತಿ ಹಾಗೂಅರುವತ್ತುವರ್ಷದ ಮಹಿಳೆ ಮಕ್ಕಳ ಮದುವೆ ವೇಳೆ ತಾವೂ ಮದುವೆಯಾಗಿದ್ದಾರೆ. ಗರೇಷ್ಯ ಗೋತ್ರದ ಪರಂಪರಾಗತ ರೀತಿಗಳ ಪ್ರಕಾರ ಇಷ್ಟವಿರುವ ಮಹಿಳೆ ಪುರುಷ ಜೊತೆಯಾಗಿ ಬಾಳಬಹುದು. ರಾಜಸ್ಥಾನವಲ್ಲದೆ ಗುಜರಾತ್‌ನಲ್ಲಿ ಕೆಲವು ಕಡೆ ಈ ಆಚಾರ ಇವೆ. ಹದಿಹರೆಯದ ಹುಡುಗ ಹುಡುಗಿ ಇಷ್ಟಪಟ್ಟು ಓಡಿಹೋಗುವುದಕ್ಕೂ ಇಲ್ಲಿ ವಿರೋಧವಿಲ್ಲ.
ಓಡಿ ಹೋಗಿ ಮರಳಿ ಬರಲು ಗಂಡಿನ ಕಡೆಯವರು ಹೆಣ್ಣಿನ ಮನೆಯವರಿಗೆ ಹಣ ನೀಡಬೇಕು. ಆಮೇಲೆಯೇ ಅವರಿಬ್ಬರೂ ಜೊತೆಯಾಗಿ ವಾಸಿಸಲು ಅವಕಾಶವಿದೆ. ಇನ್ನು ಹಣ ಮತ್ತಿತರ ಸೌಕರ್ಯಗಳು ಆದಾಗ ಮದುವೆಯಾದರೆ ಸಾಲುತ್ತದೆ. ಸ್ವತಂತ್ರವಾಗಿ ಬದುಕುವ ರೀತಿಯಿಂದಾಗಿ ಅವರಲ್ಲಿ ವರದಕ್ಷಿಣೆಗಳಿಲ್ಲ. ಅತ್ಯಾಚಾರ ಘಟನೆಗಳೂ ನಡೆಯುವುದು ಕಡಿಮೆಯೇ.
ಭಾರತದ ವೈವಾಹಿಕ ಸಂಕಲ್ಪವನ್ನೇ ಬುಡಮೇಲು ಗೊಳಿಸಿವೆ ಇಲ್ಲಿನ ಗೋತ್ರಾಚಾರಗಳು. ಇನ್ನೂ ವಿಶೇಷವೆಂದರೆ ಮದುವೆ ಚರ್ಚೆಗಳಲ್ಲಿ ತಂದೆ ತಾಯಿಯರು ಭಾಗವಹಿಸುವುದಿಲ್ಲ. ಆದರೆ ಈಗ ಇದರಲ್ಲಿ ಸುಧಾರಣೆಯಾಗಿ ವಿವಾಹವೊಪ್ಪಂದ ಇತ್ಯಾದಿಗಳು ನಡೆಯಲಾರಂಭಿಸಿವೆ.ಆದರೆ ಲಿವಿಂಗ್ ಟುಗೆದರ್‌ನ್ನು ಯಾರೂ ವಿರೋಧಿಸುವುದಿಲ್ಲ.







