ಬೆಳ್ತಂಗಡಿ : ಕರಾಟೆ ಚಾಂಫಿಯನ್‌ಶಿಪ್-2016

ಬೆಳ್ತಂಗಡಿ: ದ.ಕ. ಆರ್ಟ್ ಆಂಡ್ ಸ್ಪೋರ್ಟ್ ಕರಾಟೆ ಎಸೋಸಿಯೇಶನ್ ನೆಹರು ನಗರ ಪುತ್ತೂರು ಇದರ ವತಿಯಿಂದ ಪುತ್ತೂರು ಸುಭದ್ರ ಸಭಾ ಮಂದಿರದಲ್ಲಿ ನಡೆದ ರಾಜ್ಯ ಮಟ್ಟದ ಕರಾಟೆ ಚಾಂಫಿಯನ್‌ಶಿಪ್-2016 ಇದರಲ್ಲಿ ಉಜಿರೆ ಎಸ್‌ಡಿಎಂ ಕಾಲೇಜಿನ ವಿದ್ಯಾರ್ಥಿಗಳಾದ ಅನುಶ್ಚಿತ್ ಎಂ. ಮೆದಿನ ಅವರು ಯೆಲ್ಲೋ ಬೆಲ್ಟ್‌ನಲ್ಲಿ ಕುಮಿಟೆಯಲ್ಲಿ ಪ್ರಥಮ, ಕಟದಲ್ಲಿ ದ್ವಿತೀಯ ಸ್ಥಾನ ಪಡೆದಿದ್ದಾರೆ.
ಇನ್ನೋರ್ವ ವಿದ್ಯಾರ್ಥಿ ದೀಪಕ್ ಪೂಜಾರಿ ಅವರು ಬ್ಲೂ ಬೆಲ್ಟ್‌ನಲ್ಲಿ ಕಟದಲ್ಲಿ ಪ್ರಥಮ, ಕುಮಿಟೆಯಲ್ಲಿ ತೃಯೀಯ ಸ್ಥಾನ ಪಡೆದಿದ್ದಾರೆ. ದುರ್ಗೇಶ್ ಪರಪ್ಪಾಡಿ ತರಬೇತು ನೀಡಿದ್ದರು.
Next Story





