ಈ ಸಿಲೆಬ್ರಿಟಿ ಜಾಟರು ಹರಿಯಾಣದಲ್ಲಿ ಮೀಸಲಾತಿಗಿಂತ ಮೊದಲು ಶಾಂತಿಗಾಗಿ ಮನವಿ ಮಾಡುತ್ತಿದ್ದಾರೆ!

ಹೊಸದಿಲ್ಲಿ,ಫೆ.22: ಮೀಸಲಾತಿ ಆಂದೋಲನಕ್ಕಿಳಿದ ಹರಿಯಾಣದಲ್ಲಿ ಶಾಂತಿ ಸ್ಥಾಪಿಸಲಿಕ್ಕಾಗಿ ಅಂತರಾಷ್ಟ್ರೀಯ ಖ್ಯಾತಿಯ ಆಟಗಾರರು, ನಟರು ಮುಂದೆ ಬಂದು ಮನವಿಮಾಡಿದ್ದಾರೆ. ’ನನ್ನೆಲ್ಲ ಸಹೋದರರೇ ನಿಮ್ಮಲ್ಲಿ ವಿನಂತಿಸುವುದೇನಂದರೆ- ನೀವು ಹಿಂಸೆ ತೊರೆಯಿರಿ ಸಾಂವಿಧಾನಿಕ ರೀತಿಯಲ್ಲಿ ನಿಮ್ಮ ಬೇಡಿಕೆ ಮುಂದಿರಿಸಿರಿ. ನಾವು ರಕ್ಷಕರಾಗಿದ್ದೇವೆ ಹಿಂಸಕರಲ್ಲ. ದೇಶದ ಸೇನೆ, ಕ್ರೀಡಾಕ್ಷೇತ್ರ ಹೀಗೆ ಅವೆಷ್ಟೋ ವಿಷಯದಲ್ಲಿ ನಾವು ದೇಶದ ಹೆಸರನ್ನು ಎತ್ತರಿಸಿದ್ದೇವೆ. ನಮ್ಮ ಆವೇಶ ದೇಶದ ಒಳಿತಿಗಾಗಿ ಬಳಸಲ್ಪಡಬೇಕಾಗಿದೆ-ವೀರೇಂದ್ರ ಸೆಹ್ವಾಗ್.
ಎಲ್ಲ ಹರಿಯಾಣ ನಿವಾಸಿಗಳೊಂದಿಗೆ ವಿನಂತಿಯೇನೆಂದರೆ ಶಾಂತಿ ಸೌಹಾರ್ದವನ್ನು ಉಳಿಸಿರಿ. ಹರಿಯಾಣದ ಶಾಂತಿ ನಮಗೆ ನಮ್ಮ ಕುಟುಂಬಕ್ಕೆ, ಪ್ರದೇಶಕ್ಕೆಮತ್ತು ಸಂಪೂರ್ಣ ದೇಶಕ್ಕೆ ಅತೀ ಅಗತ್ಯವಾಗಿದೆ-ವಿಜೇಂದ್ರ್ ಸಿಂಗ್, ಬಾಕ್ಸರ್.
ದಯವಿಟ್ಟುಶಾಂತಿ ಕಾಪಾಡಿರಿ. ವಿಷಯ ರಾಜಕೀಕರಣಗೊಳ್ಳದಂತೆ ನೋಡಿಕೊಳ್ಳಿರಿ. ಸಮಸ್ಯೆ ಮಾತುಕತೆಯಿಂದ ಪರಿಹಾರವಾಗಬಹುದು. ತಮ್ಮದೆ ಮನೆಗೆ ಕೊಳ್ಳಿಯಿಡಬೇಡಿರಿ. ಮಾತುಕತೆಯಿಂದಲೇ ಮಾತು ಮುಂದೆ ಸಾಗುತ್ತದೆ. ಸಹೋದರರೇ ಧ್ವಂಸ ಗೊಳಿಸುವುದನ್ನು ನಿಲ್ಲಿಸಿರಿ- ರಣದೀಪ್ ಹೂಡ, ಫಿಲ್ಮ್ ಸ್ಟಾರ್.
ಹರಿಯಾಣದಲ್ಲಿಯಾವ ರೀತಿ ತೊಂದರೆ ಆಗುತ್ತಿದೆ ಇದರಿಂದ ಪ್ರತಿಯೊಬ್ಬರಿಗೂ ತೊಂದರೆ ಆಗುತ್ತದೆ. ಪರಸ್ಪರ ಸಹೋದರರೇ ಹೊಡೆದಾಡಿಕೊಳ್ಳುತ್ತಿದ್ದಾರೆ. ಇದು ಸರಿಯಲ್ಲ. ನಾನು ಎಲ್ಲರಲ್ಲೂ ವಿನಂತಿಸುತ್ತೇನೆ- ಪ್ರದೇಶದಲ್ಲಿ ಶಾಂತಿ ಕಾಪಾಡಿರಿ. ಪರಿಸ್ಥಿತಿಕೆಡದಂತೆ ನೋಡಿಕೊಳ್ಳಿರಿ-ಸಂಗ್ರಾಮ್ ಸಿಂಗ್ ನಟ ಹಾಗೂ ಕುಸ್ತಿ ಪಟು.
ಇದು ಯಾರೊಬ್ಬರದೂ ಅಲ್ಲ. ಎಲ್ಲರಿಗೂಸೇರಿದ ಪ್ರದೇಶವಾಗಿದೆ. ಇಲ್ಲಿ ಎಲ್ಲರೂ ಸಹೋದರರಂತೆ ಜೀವಿಸಬೇಕಾಗಿದೆ. ಪ್ರತಿಯೊಂದೂ ಸಮಸ್ಯೆಗೆ ಮಾತುಕತೆ ಮೂಲಕ ಪರಿಹಾರ ಕಂಡುಕೊಳ್ಳಬೇಕಾಗಿದೆ. ಕಾನೂನು ವ್ಯವಸ್ಥೆ ಕೆಡಬಾರದು. ಅದಕ್ಕಾಗಿ ಪ್ರತಿಯೊಬ್ಬರೂ ಶಾಂತಿ ಕಾಪಾಡಿಕೊಳ್ಳಬೇಕು- ಅಖಿಲ್ ಕುಮಾರ್ ಬಾಕ್ಸರ್







