ಮಂಗಳೂರು : ಹರೇಕಳ ಸುತ್ತಮುತ್ತಲ ಗ್ರಾಮದ ಬಡವರ ಕಷ್ಟ ಕಾರ್ಪಣ್ಯಗಳಿಗೆ ಸ್ಪಂದಿಸುತ್ತಿದ್ದ ರಹೀಮ್ ದೆಬ್ಬೆಲಿ ನಿಧನ
 copy.jpg)
ಕೊಣಾಜೆ: ಡಿವೈಎಫ್‌ಐ ಸಕ್ರೀಯ ಕಾರ್ಯಕರ್ತ, ಸಿಪಿಐಎಂ ಸದಸ್ಯ ಅಬ್ದುಲ್ ರಹೀಂ ದೆಬ್ಬೇಲಿ (35) ಹೃದಯಾಘಾತದಿಂದ ಭಾನುವಾರ ನಿಧನರಾದರು. ಅವರಿಗೆ ಪತ್ನಿ, ಐವರು ಪುಟ್ಟ ಗಂಡು ಮಕ್ಕಳಿದ್ದಾರೆ. ಹರೇಕಳ ಹಾಗೂ ಜಿಲ್ಲೆಯ ವಿವಿಧೆಡೆ ನಡೆದ ಡಿವೈಎಫ್‌ಐ ಹಾಗೂ ಸಿಪಿಐಎಂ ಪ್ರತಿಭಟನೆ, ಹೋರಾಟದಲ್ಲಿ ನಿರಂತರವಾಗಿ ಭಾಗವಹಿಸಿದ್ದರು. ಹರೇಕಳದಲ್ಲಿ ಕುಡಿಯುವ ನೀರಿನ ಸಮಸ್ಯೆ, ಬಡವರ ಹಕ್ಕಿಗಾಗಿ ಧ್ವನಿ ಎತ್ತಿ ಅಹೋರಾತ್ರಿ ನಡೆದ ಪ್ರತಿಭಟನೆಯಲ್ಲಿ ಸಕ್ರೀಯವಾಗಿ ಭಾಗವಹಿಸುವ ಮೂಲಕ ಗ್ರಾಮಸ್ಥರ ವಿಶ್ವಾಸಕ್ಕೆ ಪಾತ್ರರಾಗಿದ್ದರು. ಭಾನುವಾರ ಹಠಾತ್ತನೆ ಎದೆನೋವು ಕಾಣಿಸಿಕೊಂಡಿದ್ದು ಆಸ್ಪತ್ರೆಗೆ ಸಾಗಿಸುವ ಸಂದರ್ಭ ದಾರಿಮಧ್ಯೆ ಮೃತಪಟ್ಟಿದ್ದಾರೆ.

Next Story





