ಉಪ್ಪಿನಂಗಡಿ : ಅಡೇಕಲ್ ಎಸ್‌ಕೆಎಸ್‌ಎಸ್‌ಎಫ್ ವತಿಯಿಂದ ಸೌಹಾರ್ದ ರಕ್ತದಾನ ಶಿಬಿರ, ಮಧುಮೇಹ ವೈದ್ಯಕೀಯ ತಪಾಸಣಾ ಶಿಬಿರ

ಉಪ್ಪಿನಂಗಡಿ: ಅಡೇಕಲ್ ಎಸ್.ಕೆ.ಎಸ್.ಎಸ್.ಎಫ್. ಶಾಖೆ ಹಾಗೂ ರೋಟರಿ ಕ್ಯಾಂಪ್ಕೋ ಬ್ಲಡ್ ಬ್ಯಾಂಕ್ ಪುತ್ತೂರು ಮತ್ತು ವೆನ್ಲಾಕ್ ಆಸ್ಪತ್ರೆ ಬ್ಲಡ್ ಬ್ಯಾಂಕ್ ಮಂಗಳೂರು ಇದರ ಸಹಯೋಗದಲ್ಲಿ ಸೌಹಾರ್ದ ರಕ್ತದಾನ ಮತ್ತು ಮಧುಮೇಹ ವೈದ್ಯಕೀಯ ತಪಾಸಣಾ ಶಿಬಿರ ಕಾರ್ಯಕ್ರಮ ಅಡೇಕಲ್ ಮಸೀದಿ ವಠಾರದಲ್ಲಿ ಜರಗಿತು.
ಕಾರ್ಯಕ್ರಮವನ್ನು ಅಡೇಕಲ್ ಮಸ್ಜಿದುಲ್ ಬದ್ರಿಯಾ ಮಸೀದಿ ಗೌರವಾಧ್ಯಕ್ಷ ಹಾದಿ ಸೈಯ್ಯದ್ ಶರಫುದ್ದೀನ್ ತಂಙಳ್ ದುವಾಃ ನೆರವೇರಿಸಿದರು. ಹೈದರ್ ದಾರಿಮಿ ಕಲ್ಲಡ್ಕ ಕಾರ್ಯಕ್ರಮ ಉದ್ಘಾಟಿಸಿ "ಇಸ್ಲಾಮಿನಲ್ಲಿ ಸೌಹಾರ್ದತೆ" ವಿಷಯದಲ್ಲಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಡಾ ನಝೀರ್ ಅಹಮದ್ ಮಧುಮೇಹದ ಬಗ್ಗೆ ಹಾಗೂ ಡಾ ರಾಮಚಂದ್ರ ಭಟ್‌ರವರು ರಕ್ತದಾನದ ಮಹತ್ವದ ಬಗ್ಗೆ ಮಾಹಿತಿ ನೀಡಿದರು.
ಸಮಾರಂಭದಲ್ಲಿ ಪುತ್ತೂರು ರೋಟರಿ ಕ್ಯಾಂಪ್ಕೋ ಬ್ಲಡ್ ಬ್ಯಾಂಕ್ ಅಧ್ಯಕ್ಷ ಎಂ.ಜಿ. ರಫೀಕ್, ಅಡೇಕಲ್ ಮಸೀದಿ ಖತೀಬ್ ಎಂ.ಹೆಚ್. ಹಂಝ ಮುಸ್ಲಿಯಾರ್, ಭಜನಾ ಮಂದಿರದ ಅಧ್ಯಕ್ಷ ಪ್ರಸಾದ್ ಶೆಟ್ಟಿ, ಅಡೇಕ್ಕಲ್ ಶಾಲಾ ಮುಖ್ಯ ಶಿಕ್ಷಕ ಮಹಮ್ಮದ್ ಶರೀಫ್, ಸ್ವಾದಿಕ್ ಕೋಲ್ಪೆ, ಯಂಗ್‌ಮೆನ್ಸ್ ಅಧ್ಯಕ್ಷ ಅಬ್ಬಾಸ್ ಬಿ.ಟಿ., ಸುಂದರೇಶ್ ಅತ್ತಾಜೆ, ಎಸ್.ಕೆ.ಎಸ್.ಎಸ್.ಎಫ್. ಅಡೇಕ್ಕಲ್ ಶಾಖೆ ಅಧ್ಯಕ್ಷ ಯು.ಪಿ. ಅಬ್ದುಲ್ ರಹಿಮಾನ್ ಅಡೇಕ್ಕಲ್ ಸಂದರ್ಭೋಚಿತವಾಗಿ ಮಾತನಾಡಿ ಶುಭ ಹಾರೈಸಿದರು.
ಹಿರೇಬಂಡಾಡಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಶೌಕತ್ ಆಲಿ, ಮಾಜಿ ಅಧ್ಯಕ್ಷೆ ಶ್ರೀಮತಿ ಗೀತಾ ದಾಸರಮೂಲೆ, ಸದಸ್ಯರಾದ ಸದಾನಂದ ಶೆಟ್ಟಿ, ಪ್ರಕಾಶ್ ರೈ ಬೆಳ್ಳಿಪ್ಪಾಡಿ, ಮಸೀದಿ ಅಧ್ಯಕ್ಷ ಬಿ.ಟಿ.ಎಸ್. ಇಬ್ರಾಹಿಂ, ಗುತ್ತಿಗೆದಾರ ಹಮೀದ್ ಬಂಡಾಡಿ, ಇ.ಕೆ. ಅಬ್ದುಲ್ ರಹಿಮಾನ್ ಮುಸ್ಲಿಯಾರ್ ಉಪಸ್ಥಿತರಿದ್ದರು.
ಎಸ್.ಕೆ.ಎಸ್.ಎಸ್.ಎಫ್. ಅಡೇಕ್ಕಲ್ ಶಾಖೆ ಕಾರ್ಯದರ್ಶಿ ಬಿ.ಎನ್. ಸುಲೈಮಾನ್ ಸ್ವಾಗತಿಸಿ, ಝಕರಿಯಾ ನಾಗನಕೋಡಿ ವಂದಿಸಿದರು





