ಮಂಗಳೂರು : ಸಾವಯವ ಕೃಷಿಯಿಂದ ಪರಿಸರ ರಕ್ಷಣೆ

ಮಂಗಳೂರು,ಫೆ.21: ನಮ್ಮ ಪರಿಸರವು ಹಲವಾರು ಕಾರಣಗಳಿಂದ ಕಲುಷಿತಗೊಳ್ಳಲು ನಾವು ವಿವಿಧ ರೂಪಗಳಲ್ಲಿ ಬಳಸುವ ರಾಸಾಯನಿಕಗಳು ಪ್ರಮುಖ ಕಾರಣ. ಕೃಷಿಯಲ್ಲಿ ನಾವು ರಾಸಾಯನಿಕ ಗೊಬ್ಬರ ಹಾಗೂ ಕೀಟನಾಶಕಗಳ ಬಳಕೆಯನ್ನು ಕಡಿಮೆ ಮಾಡಬೇಕು. ನಮ್ಮ ಹಿರಿಯರಂತೆ ಸಾವಯವ ಕೃಷಿಯನ್ನು ಕೈಗೆತ್ತಿಕೊಂಡರೆ ಅದರಿಂದ ಪರಿಸರದ ರಕ್ಷಣೆಯನ್ನು ಮಾಡಿದಂತಾಗುತ್ತದೆ ಎಂದು ವಂ. ಫಾ. ಗಿಲ್ಬರ್ಟ್ ಡಿ ಸೋಜ ಹೇಳಿದರು.
ಅವರು ಇತ್ತೀಚೆಗೆ ಎಲಿಯಾರ್ ಪದವಿನ ಚರ್ಚ್ ಹಾಲ್‌ನಲ್ಲಿ ಮಂಗಳೂರಿನ ಸಿ.ಒ.ಡಿ.ಪಿ ಸಂಸ್ಥೆಯ ವತಿಯಿಂದ ಆಯೋಜಿಸಲಾದ ಸಾವಯವ ಗೊಬ್ಬರ ಕೀಟನಾಶಕ ತಯಾರಿ ತರಬೇತಿಯನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ಕಾರ್ಯಕ್ರಮಕ್ಕೆ ಸ್ಥಳೀಯ 36 ಮಂದಿ ಕೃಷಿಕರು ಹಾಜರಿದ್ದು, ಸಿ.ಒ.ಡಿ.ಪಿಯ ಕಾರ್ಯಕರ್ತರಾದ ಡೆನಿಸ್ ಡಿ ಸೋಜ, ಸಾವಯವ ಗೊಬ್ಬರ ಕೀಟನಾಶಕದ ಬಗ್ಗೆ ಪ್ರಾತ್ಯಕ್ಷಿಕೆ ನೀಡುವುದರ ಮೂಲಕ ಸಂಪನ್ಮೂಲ ವ್ಯಕ್ತಿಯಾಗಿ ಕಾರ್ಯಕ್ರಮವನ್ನು ನಿರ್ವಹಿಸಿದರು. ಜೆಸಿಂತಾರವರು ಧನ್ಯವಾದ ಗೈದರು.

Next Story





