ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಮೆಕಲಮ್ ವಿದಾಯ

ಕ್ರೈಸ್ಟ್‌ಚರ್ಚ್, ಫೆ.22: ನ್ಯೂಝಿಲೆಂಡ್‌ನ ಸ್ಫೋಟಕ ದಾಂಡಿಗ ಬ್ರೆಂಡನ್ ಮೆಕಲಮ್ ಸೋಮವಾರ ಆಸ್ಟ್ರೇಲಿಯ ವಿರುದ್ಧದ ಎರಡನೆ ಟೆಸ್ಟ್‌ನ 2ನೆ ಇನಿಂಗ್ಸ್‌ನಲ್ಲಿ 25 ರನ್‌ಗೆ ಔಟಾಗುವುದರೊಂದಿಗೆ ಅಂತಾರಾಷ್ಟ್ರೀಯ ಕ್ರಿಕೆಟ್ ಜೀವನಕ್ಕೆ ತೆರೆ ಎಳೆದರು.
ನ್ಯೂಝಿಲೆಂಡ್ 72 ರನ್‌ಗೆ 3 ವಿಕೆಟ್ ಕಳೆದುಕೊಂಡಿದ್ದಾಗ ಕ್ರೀಸ್‌ಗೆ ಆಗಮಿಸಿದ ಮೆಕಲಮ್ 27 ಎಸೆತಗಳಲ್ಲಿ 25 ರನ್ ಗಳಿಸಿ ಜೋಶ್ ಹೇಝಲ್‌ವುಡ್ ಎಸೆತದಲ್ಲಿ ಡೇವಿಡ್ ವಾರ್ನರ್‌ಗೆ ಕ್ಯಾಚ್ ನೀಡಿ ನಿರ್ಗಮಿಸಿದರು. ಮೆಕಲಮ್ ಔಟಾಗಿ ಪೆವಿಲಿಯನ್‌ನತ್ತ ಸಾಗುತ್ತಿದ್ದಾಗ ಅವರತ್ತ ಧಾವಿಸಿದ ಆಸ್ಟ್ರೇಲಿಯದ ನಾಯಕ ಸ್ಟೀವ್ ಸ್ಮಿತ್ ಕೈಕುಲುಕಿ ವಿದಾಯ ಹೇಳಿದರು.
ಮೊದಲ ಇನಿಂಗ್ಸ್‌ನಲ್ಲಿ ಟೆಸ್ಟ್ ಕ್ರಿಕೆಟ್‌ನಲ್ಲಿ ಅತ್ಯಂತ ವೇಗದ ಶತಕ (145) ಸಿಡಿಸಿ ಸ್ಮರಣೀಯ ಇನಿಂಗ್ಸ್ ಆಡಿದ್ದ ಮೆಕಲಮ್ ಡಿ.22, 2015ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿಯಾಗುವುದಾಗಿ ಘೋಷಿಸಿದ್ದರು.
ಮೆಕಲಮ್ ಫ್ಯಾಕ್ಟ್‌ಬಾಕ್ಸ್
* ಸೆ.27, 1981, ಡುನೇಡಿನ್‌ನಲ್ಲಿ ಜನನ
*ಸಿಡ್ನಿಯಲ್ಲಿ 2002ರಲ್ಲಿ 20ರ ಹರೆಯದಲ್ಲಿ ಆಸ್ಟ್ರೇಲಿಯದ ವಿರುದ್ಧ ಏಕದಿನ ಅಂತಾರಾಷ್ಟ್ರೀಯ ಪಂದ್ಯ ಆಡುವ ಮೂಲಕ ಕ್ರಿಕೆಟ್‌ಗೆ ಪಾದಾರ್ಪಣೆ. * ಹ್ಯಾಮಿಲ್ಟನ್‌ನಲ್ಲಿ 2004ರಲ್ಲಿ ದಕ್ಷಿಣ ಆಫ್ರಿಕದ ವಿರುದ್ಧ ಮೊದಲ ಟೆಸ್ಟ್ ಪಂದ್ಯ ಆಡಿದರು. ಅದೇ ವರ್ಷ ಬಾಂಗ್ಲಾದೇಶದ ವಿರುದ್ಧ ಚೊಚ್ಚಲ ಶತಕ ಬಾರಿಸಿದರು.
* ಆಸ್ಟ್ರೇಲಿಯದ ವಿರುದ್ಧ ವೆಲ್ಲಿಂಗ್ಟನ್‌ನಲ್ಲಿ 100ನೆ ಟೆಸ್ಟ್ ಆಡಿದರು. ಸತತ 100 ಟೆಸ್ಟ್ ಪಂದ್ಯಗಳನ್ನು ಆಡಿದ ವಿಶ್ವದ ಮೊದಲ ಆಟಗಾರ ಎನಿಸಿಕೊಂಡರು.
*2014ರಲ್ಲಿ ತ್ರಿಶತಕ ಸಿಡಿಸಿದ (ಭಾರತ ವಿರುದ್ಧ 302)ನ್ಯೂಝಿಲೆಂಡ್‌ನ ಮೊದಲ ದಾಂಡಿಗ ಎನಿಸಿಕೊಂಡರು. ಕ್ಯಾಲೆಂಡರ್ ವರ್ಷದಲ್ಲಿ ಸಾವಿರ ಟೆಸ್ಟ್ ರನ್(1,164) ಪೂರೈಸಿದರು. 2014ರಲ್ಲಿ ತ್ರಿಶತಕವಲ್ಲದೆ 224, 202 ಹಾಗೂ 195 ರನ್ ಗಳಿಸಿದರು.
* ಮೆಕಲಮ್ 101 ಟೆಸ್ಟ್‌ನಲ್ಲಿ 6,283 ರನ್ ಗಳಿಸಿದರು. ಇದರಲ್ಲಿ 11 ಶತಕ, 31 ಅರ್ಧಶತಕಗಳಿವೆ. ಸರಾಸರಿ 38.07.
* ಟೆಸ್ಟ್‌ನಲ್ಲಿ 100 ಸಿಕ್ಸರ್‌ಗಳನ್ನು ಬಾರಿಸಿದ ಮೆಕಲಮ್ ಆಸ್ಟ್ರೇಲಿಯದ ಆ್ಯಡಂ ಗಿಲ್‌ಕ್ರಿಸ್ಟ್ ವಿಶ್ವ ದಾಖಲೆಯನ್ನು ಮುರಿದರು. ಏಕದಿನದಲ್ಲಿ 200 ಸಿಕ್ಸರ್‌ಗಳನ್ನು ಸಿಡಿಸಿರುವ ಮೆಕಲಮ್ ಎರಡು ಮೈಲುಗಲ್ಲು ತಲುಪಿದ ವಿಶ್ವದ ಮೊದಲ ದಾಂಡಿಗ. * ಟ್ವೆಂಟಿ-20 ಕ್ರಿಕೆಟ್‌ನಲ್ಲಿ ಎರಡು ಶತಕ ಬಾರಿಸಿದ ಏಕೈಕ ಬಲಗೈ ದಾಂಡಿಗ ಮೆಕಲಮ್.
*ಮೊದಲ ಆವೃತ್ತಿಯ ಐಪಿಎಲ್ ಟ್ವೆಂಟಿ-20 ಟೂರ್ನಿಯಲ್ಲಿ ಮೆಕಲಮ್ ಶತಕ ಸಿಡಿಸಿ ಗಮನ ಸೆಳೆದಿದ್ದರು.
* ಟ್ವೆಂಟಿ-20 ಕ್ರಿಕೆಟ್‌ನಲ್ಲಿ 136ಕ್ಕೂ ಅಧಿಕ ಸ್ಟ್ರೈಕ್‌ರೇಟ್‌ನಲ್ಲಿ ಸ್ಕೋರ್ ದಾಖಲಿಸಿದ್ದಾರೆ. * 2013ರಲ್ಲಿ ನ್ಯೂಝಿಲೆಂಡ್‌ನ ಎಲ್ಲ ಮೂರು ಮಾದರಿಯ ಕ್ರಿಕೆಟ್‌ಗೆ ನಾಯಕನಾಗಿ ಆಯ್ಕೆಯಾದರು. * ನ್ಯೂಝಿಲೆಂಡ್ ಮೆಕಲಮ್ ನಾಯಕತ್ವದಲ್ಲಿ ಸತತ ಏಳು ಟೆಸ್ಟ್ ಸರಣಿಯನ್ನು ಜಯಿಸಿತ್ತು. ಆಸ್ಟ್ರೇಲಿಯ ತಂಡ ಕಿವೀಸ್‌ನ ಗೆಲುವಿನ ಓಟಕ್ಕೆ ಬ್ರೇಕ್ ಹಾಕಿತ್ತು.
*ಕಳೆದ ವರ್ಷ ಮೊದಲ ಬಾರಿ ಮೆಕಲಮ್ ನೇತೃತ್ವದಲ್ಲಿ ಕಿವೀಸ್ 50 ಓವರ್ ವಿಶ್ವಕಪ್‌ನಲ್ಲಿ ಫೈನಲ್‌ಗೆ ತಲುಪಿತ್ತು. ಆದರೆ, ಆಸ್ಟ್ರೇಲಿಯದ ವಿರುದ್ಧ ಶರಣಾಗಿತ್ತು.
* ಆಸ್ಟ್ರೇಲಿಯ ವಿರುದ್ಧ ಕ್ರೈಸ್ಟ್‌ಚರ್ಚ್‌ನಲ್ಲಿ ಎರಡನೆ ಟೆಸ್ಟ್ ಆಡುವ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿಯಾಗುವುದಾಗಿ ಡಿ.22, 2015ರಲ್ಲಿ ಮೆಕಲಮ್ ಘೋಷಿಸಿದ್ದರು.







