ಶಾಲೆಯಲ್ಲಿ ಮತಾಂತರ ಯತ್ನ ಖಂಡನೆ:SKSSF ಅಮ್ಮುಂಜೆ ಕ್ಲಸ್ಟರ್
ಮಂಗಳೂರು:ಮಲ್ಲೂರು ಗ್ರಾಮದ ಬದ್ರಿಯಾ ನಗರ ಎಂಬಲ್ಲಿರುವ ಸಂತ ಅಂಥೋನಿ ಇಂಗ್ಲೀಷ್ ಮೀಡಿಯಂ ಶಾಲೆಯಲ್ಲಿ ಪ್ರಕರಣ ಬಯಲಾಗಿದೆ.ಇಲ್ಲಿ ಕಂಪ್ಯೂಟರ್ ಶಿಕ್ಷಕಿ ಯಾಗಿರುವ ರೇಷ್ಮಾ ಡಿಸೋಜ ಎನ್ನುವವಳು ತರಗತಿಯಲ್ಲಿ ಪಾಠ ಮಾಡುವುದು ಬಿಟ್ಟು ಮಕ್ಕಳ ಮನಸ್ಸಿಗೆ ಒಂದು ದರ್ಮದ ಬಗ್ಗೆ ನಿಂದಿಸಿರುತ್ತಾರೆ ನೀವು ಅಲ್ಲಾಹನನ್ನು ಆರಾಧಿಸಬೇಡಿ ಅವನು ನಿಮ್ಮ ಕಣ್ಣಿಗೆ ಕಾಣುವುದಿಲ್ಲ ಅವನಿಗೆ ಜೀವ ಕೂಡ ಇಲ್ಲ ನೀವು ನಿಮ್ಮ ಕಣ್ಣೆದುರಿಗೆ ಕಾಣುವ ಯೇಸುವನ್ನು ಆರಾಧಿಸಿ ಅವನು ವಿಶ್ವ ಪ್ರಭು ಎಂದೆಲ್ಲಾ ಹೇಳಿ ಮತಾಂತರ ಮಾಡಲು ಯತ್ನಿಸುತ್ತಿದ್ದಾರೆ ಇದರಿಂದ ರೊಚ್ಚಿಗೆದ್ದ ಮುಸ್ಲಿಮ್ ಐಕ್ಯತಾ ವೇದಿಕೆಯ ಕಾರ್ಯಕರ್ತರು ಪ್ರಾಂಶುಪಾಲರನ್ನು ತೀವ್ರ ತರಾಟೆಗೆ ತೆಗೆದು ಶಿಕ್ಷಕಿಯನ್ನು ವಜಾ ಮಾಡಲು ಆಗ್ರಹಿಸದಿದ್ದಾರೆ.ಶಿಕ್ಷಕಿಯನ್ನು ವಜಾ ಮಾಡದಿದ್ದಲ್ಲಿ ಶಾಲೆಗೆ ಮುತ್ತಿಗೆ ಹಾಕುತ್ತೇವೆ ಎಂದು SKSSF ವಲಯ ಕಾರ್ಯದರ್ಶಿ ಆರೀಫ್ ಕಮ್ಮಾಜೆ ರವರು ತಿಳಿಸಿದ್ದಾರೆ ಅದಲ್ಲದೆ SKSSF ಅಮ್ಮುಂಜೆ ಕ್ಲಸ್ಟರ್ ಇದನ್ನು ತೀವ್ರವಾಗಿ ಖಂಡಿಸಿದೆ.
Next Story





