ಮಂಗಳೂರು : ಮತ ಎಣಿಕೆ ಕೇಂದ್ರಗಳ ಸುತ್ತ ನಿಷೇದಾಜ್ಞೆ
.jpg)
ಮಂಗಳೂರು,ಫೆ.22: ದ.ಕ ಜಿಲ್ಲೆಯಲ್ಲಿ ಮತ ಎಣಿಕೆ ನಡೆಯಲಿರುವ ಎಲ್ಲಾ ಕೇಂದ್ರಗಳ ಸುತ್ತ 200 ಮೀಟರ್ ವ್ಯಾಪ್ತಿಯಲ್ಲಿ ಭಾರತ ದಂಡ ಸಂಹಿತೆ 1973 ಕಲಂ 144 ರಂತೆ ನಿಷೇಧಾಜ್ಞೆ ವಿಧಿಸಲಾಗಿದೆ ಎಂದು ದ.ಕ ಜಿಲ್ಲಾಧಿಕಾರಿ ಎ.ಬಿ ಇಬ್ರಾಹೀಂ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ವಿಜಯೋತ್ಸವ ಮತ್ತು ಸಭೆ , ಸಮಾರಂಭ, ಪ್ರತಿಭಟನೆಗಳನ್ನು ನಿರ್ಬಂಧಿಸಲಾಗಿದೆ. ನಿಷೇದಾಜ್ಞೆ ಸಂದರ್ಭದಲ್ಲಿ ಸಾರ್ವಜನಿಕವಾಗಿ ಯಾವುದೆ ಘೋಷಣೆ ಕೂಗುವುದು, ಉಚ್ಚರಿಸುವುದು ಅಥವಾ ಹಾಡುವುದು , ಚೇಷ್ಟೇ ಮಾಡುವುದು ನಿಷೇಧಿಸಲಾಗಿದೆ. ಶಸ್ತ್ರ , ಬಡಿಗೆ, ಬಂದೂಕು ಇನ್ನಿತರ ಯಾವುದೆ ಮಾರಾಕಾಸ್ತ್ರಗಳನ್ನು ಕೊಂಡೊಯ್ಯುವುದು ನಿಷೇಧಿಸಲಾಗಿದೆ.ಯಾವುದೆ ರೀತಿಯ ಸಾರ್ವಜನಿಕ ಮೆರವಣಿಗೆ , ವಿಜಯೋತ್ಸವ, ಕರಾಳೋತ್ಸವ ಮತ್ತು ಪ್ರತಿಭಟನಾ ಮೆರವಣಿಗೆ ಹಾಗೂ ಸಭೆ ಸಮಾರಂಭಗಳನ್ನು ನಿಷೇಧಿಸಿದೆ. ಬಹಿರಂಗವಾಗಿ ಘೋಷಣೆ ಮಾಡುವುದು, ವಾದ್ಯ ಬಾರಿಸುವುದು ಮತ್ತು ಪದ ಹಾಡುವುದು ಇನ್ನಿತರ ಯಾವುದೆ ಸಾರ್ವಜನಿಕರಿಗೆ ತೊಂದರೆಯಾಗುವ ಮತ್ತು ಪ್ರೇರೆಪಿಸುವುದನ್ನು ನಿಷೇಧಿಸಲಾಗಿದೆ. ಯಾವುದೆ ಆಕೃತಿ, ಪ್ರತಿಮೆಗಳನ್ನು ಪ್ರದರ್ಶನ ಮಾಡುವುದನ್ನು ನಿಷೇಧಿಸಲಾಗಿದೆ ಎಂದು ಪ್ರಕಟನೆಯಲ್ಲಿ ತಿಳಿಸಿದ್ದಾರೆ.





