ವಾರೆವಾ... ವಾರ್ನರ್... ಎಂಥಾ.. ಕ್ಯಾಚ್.
ತನ್ನ ಕೊನೆಯ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್ ನಲ್ಲಿ ಅತ್ಯಂತ ವೇಗದ ಶತಕ ಬಾರಿಸಿದ ನ್ಯೂಜ್ಹಿಲ್ಯಾಂಡ್ ನ ಬ್ರೆಂಡನ್ ಮೆಕಲಂ ಅವರು ಸೋಮವಾರ ತಮ್ಮ ಎರಡನೇ ಇನ್ನಿಂಗ್ಸ್ ನಲ್ಲೂ ಭರ್ಜರಿಯಾಗಿಯೇ ಬ್ಯಾಟಿಂಗ್ ಪ್ರಾರಂಭಿಸಿದರು. ಆದರೆ ೨೭ ಎಸೆತಗಳಲ್ಲಿ ೨೫ ರನ್ ಬಾರಿಸಿದ್ದ ಮೆಕಲಂ ರನ್ನು ಅತ್ಯದ್ಭುತ ಕ್ಯಾಚೊಂದರ ಮೂಲಕ ಆಸಿಸ್ ನ ಸ್ಪೋಟಕ ಬ್ಯಾಟ್ಸ್ ಮ್ಯಾನ್ ಡೇವಿಡ್ ವಾರ್ನರ್ ಪೆವಿಲಿಯನ್ ಗೆ ಕಳಿಸಿಬಿಟ್ಟರು. ಇದು ಕ್ರಿಕೆಟ್ ನ ಅತ್ಯುತ್ತಮ ಕ್ಯಾಚ್ ಗಳಲ್ಲಿ ಒಂದು ಎಂದು ನಿಸ್ಸಂಶಯವಾಗಿ ಹೇಳಬಹುದು. ನೀವೇ ನೋಡಿ.
Next Story





