Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಕನ್ಹಯ್ಯಾ, ವೇಮುಲಾ: ಭಾರತೀಯ ಶಿಕ್ಷಣದ...

ಕನ್ಹಯ್ಯಾ, ವೇಮುಲಾ: ಭಾರತೀಯ ಶಿಕ್ಷಣದ ‘ಅಮೃತ ಫಲ’

ಗೌರಿ ಚಟರ್ಜಿಗೌರಿ ಚಟರ್ಜಿ22 Feb 2016 11:01 PM IST
share
ಕನ್ಹಯ್ಯಾ, ವೇಮುಲಾ: ಭಾರತೀಯ ಶಿಕ್ಷಣದ ‘ಅಮೃತ ಫಲ’

ಭಾರತೀಯ ಶಿಕ್ಷಣ ಕ್ಷೇತ್ರದಲ್ಲಿ ಒಂದಷ್ಟು ಒಳ್ಳೆಯ ಬೆಳವಣಿಗೆ ಕಾಣುತ್ತಿದೆ. ರೋಹಿತ್ ವೇಮುಲಾ ಹಾಗೂ ಕನ್ಹಯ್ಯಿ ಕುಮಾರ್ ಇದಕ್ಕೆ ಒಳ್ಳೆಯ ನಿದರ್ಶನ. ಖಂಡಿತವಾಗಿಯೂ ಒಳ್ಳೆಯ ಬೆಳವಣಿಗೆ. ಭಾರತದ ಶಿಕ್ಷಣ ಕೊನೆಗೂ ಕೆಲಸ ಮಾಡುತ್ತಿದೆ. ಕೇವಲ ಮೆಟ್ರೊಗಳ ಅತ್ಯುನ್ನತ ಸಂಸ್ಥೆಗಳಲ್ಲಷ್ಟೇ ಅಲ್ಲ; ಭಾರತದ ಹಳ್ಳಿ ಹಾಗೂ ಸಣ್ಣ ಪಟ್ಟಣಗಳ ಸಾಮಾನ್ಯ, ಸೌಲಭ್ಯ ವಂಚಿತ, ಸಿಬ್ಬಂದಿ ಕೊರತೆಯ, ಪೂರ್ವಾ ಗ್ರಹಪೀಡಿತ ಶಾಲೆ ಹಾಗೂ ಕಾಲೇಜುಗಳಲ್ಲಿ ಕೂಡಾ.


ಶಿಕ್ಷಣದ ಉದ್ದೇಶ ಕೇವಲ ಜೀವನಾಧಾರ ಉದ್ಯೋಗಕ್ಕೆನೆರವಾಗುವುದಷ್ಟೇ ಅಲ್ಲ; ಭಾಷಾ ಕೌಶಲ್ಯ ಹರಿತಗೊಳಿಸುವ, ವಿಮರ್ಶಾತ್ಮಕ ಚಿಂತನೆ ಬೆಳೆಸುವ, ಸೃಜನಶೀಲತೆ ಹಾಗೂ ಹೋಲಿಕೆ ಇಲ್ಲದ ಘಟನೆ-ಯೋಚನೆಗಳ ನಡುವೆಸಂಬಂಧ ಕಲ್ಪಿಸುವ ಸಾಮರ್ಥ್ಯವನ್ನು ಬೆಳೆಸುವ, ಸಾಮಾ ಜಿಕ ಹೊಣೆಗಾರಿಕೆಯ ಮನೋಭಾವ ಬೆಳೆಸುವ ಮತ್ತು ಉತ್ತಮ ನಾಗರಿಕರನ್ನಾಗಿ ಮಾಡುವುದು ಎಂದಾದರೆ, ರೋಹಿತ್ ಹಾಗೂ ಕನ್ಹಯ್ಯಾ ನಮ್ಮ ಸರಕಾರಿ ಪೋಷಿತ, ಅಪಹಾಸ್ಯಕ್ಕೀಡಾದ ಶಾಲೆ-ಕಾಲೇಜುಗಳು ಹೇಗೆ ಮುನ್ನಡೆಯಬೇಕು ಎನ್ನುವುದನ್ನು ತೋರಿಸಿಕೊಟ್ಟಿದ್ದಾರೆ.
 
ಭಾಷಾಪ್ರಭುತ್ವ ರೋಹಿತ್ ಅವರ ಆತ್ಮಹತ್ಯೆ ಟಿಪ್ಪಣಿ ಯಲ್ಲಿ ಪ್ರದರ್ಶನಗೊಂಡರೆ, ಕನ್ಹಯ್ಯೆ ಅವರ ಮಾತಿನ ಓಘ ಅಮೋಘ. ಕನ್ಹಯ್ಯೆ ಅವರ ವಾಕ್ ಪಟುತ್ವ ಅವರನ್ನು ಜವಾಹರಲಾಲ್ ನೆಹರೂ ವಿಶ್ವವಿದ್ಯಾನಿಲ ಯದ ವಿದ್ಯಾರ್ಥಿ ಸಂಘದ ನಾಯಕನನ್ನಾಗಿ ಮಾಡಿತು. ಡಿಎನ್‌ಎ ವರದಿಯೊಂದರ ಪ್ರಕಾರ, ಕನ್ಹಯ್ಯಾ ಅವರ ಉತ್ತೇಜಕ ಭಾಷಣ ಎಐಎಸ್‌ಎಫ್‌ಗೆ ಪ್ರಬಲ ಎಐಎಸ್‌ಎ ವಿರುದ್ಧ ಮುನ್ನಡೆ ಗಳಿಸಿಕೊಟ್ಟಿತು. ಈ ಮೂಲಕ ಅವರನ್ನು ಸಿಪಿಐ ವಿದ್ಯಾರ್ಥಿ ಘಟಕದ ಮೊಟ್ಟಮೊದಲ ಜೆಎನ್‌ಯು ವಿದ್ಯಾರ್ಥಿ ನಾಯಕನನ್ನಾಗಿ ಮಾಡಿತು. ಕನ್ಹಯ್ಯಾ ಅವರ ಹಲವು ಮಂದಿ ಸ್ನೇಹಿತರ ಪ್ರಕಾರ, ಕನ್ಹಯ್ಯಾ ಅವರ ಭಾಷಣದ ಮೊದಲ ವಾಕ್ಯಕ್ಕೇ ಎಬಿವಿಪಿ ಗದ್ದುಗೆ ರೇಸ್‌ನಿಂದ ಹೊರಬಿತ್ತು. ಅನ್ಯಾಯದ ವಿರುದ್ಧ ಸಿಟ್ಟಿನ ಜತೆಗೆ ಹಾಸ್ಯಮಿಶ್ರಿತ ವಾಗ್ಝರಿ ಹರಿಸಿದರು. ಕಾಲೇಜು ದಿನಗಳಿಂದಲೇ ಚರ್ಚಾಸ್ಪರ್ಧೆಯಲ್ಲೂ ಆತನ ದ್ದು ಎತ್ತಿದ ಕೈ ಎಂದು ಸ್ನೇಹಿತರು ಹೇಳುತ್ತಾರೆ.
ಬರೂನಿಯ ಆರ್‌ಕೆಸಿ ಪ್ರೌಢಶಾಲೆಯಿಂದ ಕನ್ಹಯ್ಯೌ, ಮಗಧ ವಿಶ್ವವಿದ್ಯಾನಿಲಯದ ಸಂಲಗ್ನತ್ವ ಹೊಂದಿದ್ದ ವಾಣಿಜ್ಯ ಕಾಲೇಜಿನಲ್ಲಿ ಪದವಿ ಪಡೆದವರು. ಅವರ ಮಾತಿನ ಕೌಶಲ ಹಾಗೂ ತಮ್ಮ ಯೋಚನೆಯನ್ನು ಸ್ಫುಟವಾಗಿ ಬಿಂಬಿಸುವ ಕಲೆ ಹಾಗೂ ವಾದ ಮಂಡಿಸುವ ಪ್ರಭುತ್ವವನ್ನು ಜೆಎನ್‌ಯುನಲ್ಲಿ ಫೆಬ್ರವರಿ 10ರಂದು ಅವರು ಮಾಡಿದ ಭಾಷಣ ಬಿಂಬಿಸುತ್ತದೆ. ಅವರ ಭಾಷ ಣದ ಮೂಲ ವೀಡಿಯೊ (ರಾಷ್ಟ್ರವಿರೋಧಿ ಘೋಷಣೆ ಕೂಗಿದ್ದಾಗಿ ತಿರುಚಿದ ವೀಡಿಯೊ ಅಲ್ಲ) ಅವರ ಶಬ್ದ ಸಂಪತ್ತನ್ನು, ಯಾವುದರ ಬಗ್ಗೆ ಮಾತನಾಡುತ್ತಿದ್ದೇನೆ ಎಂಬ ನಿಖರ ಸ್ಪಷ್ಟತೆಯನ್ನು ವ್ಯಕ್ತಪಡಿಸುತ್ತದೆ.

ಗುಂಟೂರು ಜಿಲ್ಲೆಯ ರೋಹಿತ್ ಅವರು ಕಾಲ್ ಸಾಗನ್ ಅವರಂತೆ ಕವಿ, ವಿಜ್ಞಾನ ಲೇಖಕರಾಗ ಬಯಸಿದ್ದರು. ಅದು ಕೇವಲ ಕನಸಷ್ಟೇ ಅಲ್ಲ. ಅವರ ಆತ್ಮಹತ್ಯೆ ಟಿಪ್ಪಣಿ ಅವರ ಅದ್ಭುತ ಕಾವ್ಯಾತ್ಮಕ ಶೈಲಿಯನ್ನು ಬಿಂಬಿಸಿದೆ. ದಿಲ್ಲಿ ಐಐಟಿ ಪ್ರಾಧ್ಯಾಪಕಿ ಹಾಗೂ ಸೈದ್ಧಾಂತಿಕ ವಿಮರ್ಶಕಿ ರುಕ್ಮಿಣಿ ಬಾಯಿ ನಾಯರ್ ಹೇಳುವಂತೆ, ರೋಹಿತ್ ವೇಮುಲಾ ಅವರ ಆತ್ಮಹತ್ಯೆ ಟಿಪ್ಪಣಿ ಏಕೆ ಗಮನಾರ್ಹ ವೆಂದರೆ, ಆ ಸಾವಿನ ಕುಣಿಕೆಯ ಕ್ಷಣದಿಂದಲೇ ಅದು ಅಮರತ್ವ ಪಡೆಯಿತು. ಅದರಲ್ಲಿ ಅಸಾಧಾರಣ ಚೆಲುವು ಹಾಗೂ ಸಾರ್ವತ್ರಿಕ ಬಾಳಿಕೆಯ ಅಂಶಗಳಿವೆ. ಇದು ಜಾ ತೀಯ ತುಳಿತ ಹಾಗೂ ಹಿಂಸೆಯ ಶಾಸ್ತ್ರೀಯ ಸಾಹಿತ್ಯ ವಾಗಿ ಮೂಡಿಬಂದಿದೆ. ಆದರೆ ತೀರಾ ವಿಚಿತ್ರ ಕಾರಣ ದಿಂದ ಇದು ಜಾತೀಯ ಅಂಶವನ್ನು ಮೀರಿ ಹೋಗಿದೆ

ಕ್ರೂರ ಸಾಮಾಜಿಕ ತಾರತಮ್ಯವನ್ನು ಅವರು ಎದುರಿಸಿದ್ದರು; ತೀವ್ರ ಆರ್ಥಿಕ ಸಂಕಷ್ಟದಿಂದ ಬಳಲಿದ್ದರು; ಆದರೂ ಆ ಆಳವಾದ ಯಾತನೆ ಹಾಗೂ ಭ್ರಮನಿರಸನವನ್ನು ಓದುಗರನ್ನು ಸೆಳೆದಿಡುವ ಶಬ್ದಗಳಲ್ಲಿ ಬಣ್ಣಿಸುವಕಲೆಯನ್ನು ಕಲಿತಿದ್ದರು. ನಾನು ವಿಜ್ಞಾನ, ನಕ್ಷತ್ರ, ಪ್ರಕೃತಿ ಪ್ರೇಮಿ. ಅದಾಗ್ಯೂ ಜನ ಪ್ರಕೃತಿಯಿಂದ ವಿಚ್ಛೇದನ ಪಡೆದಿದ್ದಾರೆ ಎಂದು ತಿಳಿಯದೇ ಜನರನ್ನು ಪ್ರೀತಿಸುತ್ತಿದ್ದೇನೆ. ನಮ್ಮ ಭಾವನೆಗಳು ಬಳಸಿ ಬಿಟ್ಟವುಗಳು. ನಮ್ಮ ಪ್ರೀತಿ ನಿರ್ಮಾ ಣಗೊಂಡದ್ದು. ನಮ್ಮ ನಂಬಿಕೆಗಳು ನಿರ್ದಿಷ್ಟ ಬಣ್ಣ ಹೊಂದಿರುವಂಥವು. ನಮ್ಮ ಸಹಜತೆ ಕೃತಕ ಕಲೆಯ ಮೂಲಕ ದೃಢೀಕರಣಗೊಂಡದ್ದು. ಇದರಿಂದ ನೋವು ಉಂಟುಮಾಡದೇ ಪ್ರೀತಿಸುವುದು ನಿಜಕ್ಕೂ ಕಷ್ಟಕರವಾಗಿ ಪರಿಣಮಿಸಿದೆ. ಇಂತಹ ಹಲವು ಪ್ಯಾರಾಗಳು ಗಂಟಲು ಬಿಗಿಯುವಂತೆ ಮಾಡಬಹುದು. ಆದರೆ ತೀರಾ ಕಡಿಮೆ ವೇತನ ಪಡೆಯುವ ಶಿಕ್ಷಕರು, ಪ್ರೊಫೆೆಸರ್‌ಗಳನ್ನು ಅದ್ಭುತ ಎಂದು ಬಿಂಬಿಸುತ್ತದೆ. ಯಾವ ಪ್ರತಿಫಲಾಪೇಕ್ಷೆ ಅಥವಾ ಗೌರವವೂ ಇಲ್ಲದೆ ಈ ಜ್ಞಾನದ ಕಿಡಿಯನ್ನು ನೀವು ಹಚ್ಚುತ್ತಿದ್ದೀರಿ.


ವಿಶ್ವದಲ್ಲೇ ಅತ್ಯಧಿಕ ಅಂದರೆ 287 ದಶಲಕ್ಷ ಅನಕ್ಷರಸ್ಥರನ್ನು ಹೊಂದಿರುವುದರಿಂದ ನಮ್ಮ ಶಿಕ್ಷಣ ವ್ಯವಸ್ಥೆಯನ್ನು ಹೊಗಳುವುದು ಹಾಸ್ಯಾಸ್ಪದವಾಗಬಹುದು. ಯಾರು ಕೂಡಾ ಪರಿಪೂರ್ಣ ಎಂದು ಹೇಳಿಕೊಳ್ಳುವಂತಿಲ್ಲ. ರಾಷ್ಟ್ರಪತಿಯಾದಿಯಾಗಿ ನಾವೆಲ್ಲರೂ, ಶಿಕ್ಷಣದ ಗುಣಮಟ್ಟ ಕುಸಿಯುತ್ತಿದೆ ಎಂದು ಹಲುಬುವವರೇ. ರಾಷ್ಟ್ರಪತಿ ಪ್ರಣವ್ ಮುಖರ್ಜಿಯವರು ದಿಲ್ಲಿಯ ಖಾಸಗಿ ವಿಶ್ವವಿದ್ಯಾನಿಲಯವೊಂದರ ಸಮಾರಂಭದಲ್ಲಿ ಖಾಸಗಿ ವಲಯ ಶಿಕ್ಷಣವನ್ನು ಹೊಸ ಎತ್ತರಕ್ಕೆ ಒಯ್ದಿದೆ. ಶಿಕ್ಷಣದ ಗುಣಮಟ್ಟ ಕುಸಿತವನ್ನು ತಡೆಯದಿದ್ದರೆ, ಮುಂದೊಂದು ದಿನ ದೊಡ್ಡ ಸಂಖ್ಯೆಯ ಪದವೀಧರರಿದ್ದರೂ, ಕೈಗಾರಿಕೆ ಹಾಗೂ ಇತರ ವಲಯಗಳ ಅಗತ್ಯತೆ ಪೂರೈಸಲಾಗದ ಮಾನವ ಸಂಪನ್ಮೂಲದ ಕೊರತೆಯನ್ನು ಎದುರಿಸಬೇಕಾಗುತ್ತದೆ ಎಂದು ಹೇಳಿದ್ದರು.
ಬಹುಶಃ ಅವರು ಹೇಳಬೇಕಾದ್ದು ಇದನ್ನು. ಸ್ಮತಿ ಇರಾನಿ ಮಾನವ ಸಂಪನ್ಮೂಲ ಖಾತೆ ಸಚಿವೆಯಾಗಿ ಅಧಿಕಾರ ವಹಿಸಿಕೊಂಡ ದಿನದಿಂದಲೂ, ಅವರ ಬಾಸ್‌ಗಳು ಹಾಗೂ ಹೊಗಳುಭಟ್ಟರು ಹಣ ಸಂಪಾದನೆಯೇ ಶಿಕ್ಷಣದ ಮೂಲ ಉದ್ದೇಶ ಎಂದು ಪರಿಗಣಿಸಿದಂತಿದೆ. ಜೆಎನ್‌ಯು ವಿದ್ಯಾರ್ಥಿಗಳು ಬಾಯಿ ಮುಚ್ಚಿಕೊಂಡು, ಓದಿನ ಬಗ್ಗೆ ಗಮನ ಹರಿಸಬೇಕು. ಏಕೆಂದರೆ ಅವರ ಅಧ್ಯಯನಕ್ಕೆ ಹಣ ನೀಡುತ್ತಿರುವವರು ನಾವು; ಅಂದರೆ ತೆರಿಗೆದಾರರು ಎಂದು ಹೇಳುವುದರಲ್ಲಿ ಯಾವ ಆಶ್ಚರ್ಯವೂ ಇಲ್ಲ. ಅಂದರೆ ಸರಕಾರದ ಪ್ರಕಾರ, ಜೆಎನ್‌ಯು ಕೋಲಾಹಲವನ್ನು ನಿಗ್ರಹಿಸುವ ಅತ್ಯಂತ ಸೂಕ್ತ ಮಾರ್ಗವೆಂದರೆ, ಅದಕ್ಕೆ ಅಗತ್ಯ ನೆರವು ನೀಡದೇ, ಹಣಕಾಸು ತೊಂದರೆಯಿಂದ ಬಳಲುವಂತೆ ಮಾಡುವುದು ಎನ್ನುವುದು ಸ್ಪಷ್ಟ.


ಈ ಕಾರ್ಯವನ್ನು ಸಂತೋಷದಿಂದ ಖಾಸಗಿ ವಲಯಕ್ಕೆ ನೀಡಲು ಅವರು ಸಿದ್ಧರಿರಬಹುದು. ಬಿಜೆಪಿಯ ದೀರ್ಘಾವಧಿ ಗುರಿ ಕೂಡಾ ಯುವ ಮನಸ್ಸುಗಳ ತಲೆ ಕೆಡಿಸುವುದು; ತಮ್ಮ ಮೂಗಿನ ನೇರಕ್ಕೆ ಭವಿಷ್ಯದ ನಾಗರಿಕರನ್ನು ರೂಪಿಸುವುದು. ಇದರಿಂದ ಸರಕಾರ ನಮ್ಮ ಕಲಿಕಾ ಕೇಂದ್ರಗಳನ್ನು ಮುಕ್ತವಾಗಿ ಬಿಡದೇ ನಿಯಂತ್ರಿಸಲು ಪ್ರಯತ್ನಿಸುವುದು ಸ್ಪಷ್ಟ. ಇಷ್ಟಾಗಿಯೂ ಈ ಕೇಸರೀಕೃತ ಸಂಸ್ಥೆಗಳಿಂದ ನೇರವಾಗಿ, ದೇಶಕ್ಕೆ ಗಣನೀಯ ಕೊಡುಗೆ ಎನಿಸಿದ ವ್ಯಾಪಾರ ಅಥವಾ ಸಂಪತ್ತು ಸೃಷ್ಟಿಸುವ ಕ್ಷೇತ್ರಕ್ಕೆ ಹೋಗದೆ ವಿದ್ಯಾರ್ಥಿಗಳು ಹೊರಹೋಗುತ್ತಿದ್ದಾರೆ. 2013ರಿಂದಲೂ ಪಾರ್ಶ್ವವಾಯುವಿನಿಂದಾಗಿ ಹಾಸಿಗೆ ಹಿಡಿದಿರುವ 65 ವರ್ಷದ ಕನ್ಹಯ್ಯಾ ತಂದೆ ಜೈಶಂಕರ್ ಸಿಂಗ್ ಕೂಡಾ ಶಿಕ್ಷಣದ ಶಕ್ತಿಯ ಬಗ್ಗೆ ನಂಬಿಕೆ ಹೊಂದಿದ್ದಾರೆ. ನಾನು 10ನೆ ತರಗತಿವರೆಗೆ ಮಾತ್ರ ಓದಲುಸಾಧ್ಯವಾಗಿದೆ. ಆದರೆ ನನ್ನ ಮಕ್ಕಳು ಉತ್ತಮ ಶಿಕ್ಷಣ ಪಡೆಯುವಂತೆ ನೋಡಿಕೊಂಡೆ. ಶಿಕ್ಷಣ ಎನ್ನುವುದು ನಮ್ಮಂತಹ ಬಡವರ ದೊಡ್ಡ ಬಂಡವಾಳ ಎಂದು ಅವರು ಇಂಡಿಯನ್ ಎಕ್ಸ್‌ಪ್ರೆಸ್ ಜತೆ ಮಾತನಾಡುತ್ತಾ ಹೇಳಿ ದ್ದರು. ಎಲ್ಲ ವೈಫಲ್ಯಗಳ ನಡುವೆಯೂ ಅದು ಒಳ್ಳೆಯ ಶಿಕ್ಷಣ. ಅದು ಮಗನಿಗೆ ವೌಲ್ಯಗಳನ್ನು ಬೋಧಿಸಿದೆ. ಅನುಕಂಪವನ್ನು ಕಲಿಸಿಕೊಟ್ಟಿದೆ. ಸುಸಂಗತವಾಗಿ ಯೋಚಿಸಲು ಮತ್ತು ಭಾವನೆಗಳನ್ನು ಪರಿಣಾಮಕಾ ರಿಯಾಗಿ ಅಭಿವ್ಯಕ್ತಗೊಳಿಸಲು ಕಲಿಸಿಕೊಟ್ಟಿದೆ. ಮಾತ್ರವಲ್ಲದೇ, ಶಬ್ದಗಳ ಶಕ್ತಿಯ ಬಗ್ಗೆ ಮನವರಿಕೆ ಮಾಡಿದೆ.

ರೋಹಿತ್ ಹಾಗೂ ಕನ್ಹಯ್ಯ ಸಮರ್ಪಕವಲ್ಲದ, ದುರಂತ ಕಾರಣ ಗಳಿಗೆ ಸುದ್ದಿಯಾಗಿದ್ದಾರೆ. ಆದರೆ ಇದರಿಂದ ನಾವು ಪಡೆಯಬಹುದಾದ ಸಾಂತ್ವನವೆಂದರೆ, ಅವರಂಥ ಇಂತಹ ಅನೇಕ ಮಂದಿ ಹೀಗೆ ಹೊರ ಹೊಮ್ಮಿದ್ದಾರೆ. ತಾಯ್ನೆಲದ ಬಗ್ಗೆ ಆಳವಾದ ಪ್ರೀತಿ ಹೊಂದಿದ ಗಣ್ಯ ವ್ಯಕ್ತಿಗಳ ನ್ನು ಸುಧಾರಣೆಗೆ ಸಾಕಷ್ಟು ಅವಕಾಶವಿರುವ ಈ ದೋಷಪೂರಿತ ಶಿಕ್ಷಣ ವ್ಯವಸ್ಥೆ ರೂಪಿಸಿದೆ. ಕನಸು ಕಾಣಬಲ್ಲ ಎಲ್ಲ ಮಂದಿ ಇನ್ನಷ್ಟು ಹೆಚ್ಚಿನದನ್ನು ಅಪೇಕ್ಷಿಸಬಹುದು. ಇದನ್ನು ಬಿಜೆಪಿಗೆ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಆದ್ದರಿಂದ ಬಿಜೆಪಿ, ಈ ವ್ಯವಸ್ಥೆಯನ್ನು ಶಿಥಿಲಗೊಳಿಸಿ, ಮತ್ತೆ ತಲೆಎತ್ತುವ ಭಾರತಕ್ಕಾಗಿ ಹಿಂದುತ್ವ ರೋಬೋಟ್‌ಗಳನ್ನು ಉತ್ಪಾದಿಸಲು ಮುಂದಾಗಿದೆ. ಅದು ಸಂಭವಿಸಲು ನಾವು ಅವಕಾಶ ನೀಡಬಾರದು.

share
ಗೌರಿ ಚಟರ್ಜಿ
ಗೌರಿ ಚಟರ್ಜಿ
Next Story
X