ಬಾಗಲಕೋಟೆ: ಪಾಕ್‌ಗೆ ಜೈಕಾರ ಕೂಗಿದ ಆಟೊ ಚಾಲಕನ ಬಂಧನ

ಬಾಗಲಕೋಟೆ, ಫೆ.22: ದಿಲ್ಲಿಯ ಜೆಎನ್‌ಯುನಲ್ಲಿ ಪಾಕ್ ಪರ ಘೋಷಣೆಗಳನ್ನು ಕೂಗಿದ ಘಟನೆ ದೇಶಾದ್ಯಂತ ಕೋಲಾಹಲ ಸೃಷ್ಠಿಸಿರುವಂತೆಯೇ ಬಾಗಲಕೋಟೆಯಲ್ಲಿ ಆಟೊ ಚಾಲಕನೋರ್ವ ಪಾಕಿಸ್ತಾನಕ್ಕೆ ಜೈ ಕಾರ ಹಾಕಿದ ಆರೋಪದಲ್ಲಿ ಬಂಧಿತನಾಗಿದ್ದಾನೆ.
ಬಾಗಲಕೋಟೆ ತಾಲೂಕಿನ ಮುಚಖಂಡಿ ತಾಂಡ ನಿವಾಸಿ ದೇವೇಂದ್ರ ಲಮಾಣಿ ಎಂಬಾತ ದೇಶವಿರೋಧಿ ಘೋಷಣೆ ಕೂಗಿರುವ ಆರೋಪಿ. ನಗರದ ಬಸವೇಶ್ವರ ಸರ್ಕಲ್ ಬಳಿ ಮೋಟಗಿ ಬಸವೇಶ್ವರರ ಜಾತ್ರೆಯ ಪ್ರಯುಕ್ತ ಇಲ್ಲಿನ ಬಸವೇಶ್ವರ ಪುತ್ಥಳಿಗೆ ಮಾಲಾರ್ಪಣೆ ಮಾಡಲಾಯಿತು. ಆ ಸಮಯದಲ್ಲಿ ಅಲ್ಲಿ ಸೇರಿದ್ದ ಜನ ಭಾರತ್ ಮಾತಾ ಕೀ ಜೈ ಎಂಬ ಘೋಷಣೆಗಳನ್ನ ಕೂಗುತ್ತಿದ್ದರು, ಆ ಗುಂಪಿನಲ್ಲೇ ಇದ್ದ ದೇವೆಂದ್ರ ಲಮಾಣಿ, ‘ಪಾಕಿಸ್ತಾನ್ ಕೀ ಜೈ’ ಎಂದು ಘೊಷಣೆ ಕೂಗಿ ಎಲ್ಲರನ್ನೂ ಗಾಬರಿಗೊಳಿಸಿದ.
ತಕ್ಷಣ ಅಲ್ಲೇ ಇದ್ದ ಪೊಲೀಸರು ದೇವೇಂದ್ರನನ್ನು ಬಂಧಿಸಿ, ದೇಶ ವಿರೋಧಿ ಘೋಷಣೆ ಕಾಯ್ದೆಯಡಿ ದೂರು ದಾಖಲಿಸಿದ್ದಾರೆ. ಆರೋಪಿ ದೇವೆಂದ್ರ, ನಾನು ಬಡವ, ತಮಾಷೆಗಾಗಿ ಈ ರೀತಿ ಘೋಷಣೆ ಕೂಗಿದ್ದು ತಪ್ಪಾಯಿತು ಎಂದು ಸಮಜಾಯಿಸಿ ನೀಡಿದ್ದಾನೆ.
Next Story





