ನೋಡಿ,ಈ ಅರ್ನಬ್ ಗೋಸ್ವಾಮಿ ಇರೋದೇ ಹೀಗೆ !
ಯಾರು ಬದಲಾದರೂ ಅರ್ನಬ್ ಬದಲಾಗುವುದಿಲ್ಲ . ಜೆ. ಎನ್. ಯು ಪ್ರಕರಣವನ್ನು ನಿಭಾಯಿಸಿದ ರೀತಿಗೆ ವ್ಯಾಪಕ ಟೀಕೆ ಹಾಗು ಆಕ್ರೋಶಕ್ಕೆ ಗುರಿಯಾಗಿರುವ ಅರ್ನಬ್ ಅಡಿಗೆ ಬಿದ್ದರೂ ನನ್ನ ಮೂಗು ಮೇಲೆ ಎಂದು ಮತ್ತೆ ವಾದಿಸಿದ್ದಾರೆ. ಸೋಮವಾರ ರಾತ್ರಿ ತಮ್ಮ ' ನ್ಯೂಸ್ ಹವರ್ ' ಕಾರ್ಯಕ್ರಮದಲ್ಲಿ ಜಮ್ಮು ಕಾಶ್ಮೀರದಲ್ಲಿ ಉಗ್ರರೊಂದಿಗೆ ಕದನದಲ್ಲಿ ಬಲಿಯಾದ ಭಾರತೀಯ ಯೋಧರ ಹೆಸರಲ್ಲಿ ತಮ್ಮನ್ನು ಹಾಗು ಹಾಗು ತಮ್ಮ ಟಿವಿ ವಾಹಿನಿಯನ್ನು ಬಲವಾಗಿ ಸಮರ್ಥಿಸಿಕೊಂಡಿದ್ದಾರೆ. ಮಾತ್ರವಲ್ಲ ತಮ್ಮನ್ನು ಪ್ರಶ್ನಿಸುವುದು ದೇಶವನ್ನೇ ಪ್ರಶ್ನಿಸಿದಂತೆ, ದೇಶಕ್ಕೆ ದ್ರೋಹ ಬಗೆದಂತೆ ಎಂದೇ ವಾದಿಸಿದ್ದಾರೆ. ತಮ್ಮ 'ಉಗ್ರ ' ಪತ್ರಿಕೋದ್ಯಮವನ್ನು ಪ್ರಶ್ನಿಸಿದವರನ್ನು ಕೆಲಸಕ್ಕೆ ಬಾರದ, ದೇಶಕ್ಕೆ ನಿಷ್ಠೆ ಇಲ್ಲದ ಜನರು ಎಂದು ಜರೆದಿರುವ ಅವರು , ಇಂತಹವರು ನಮ್ಮನ್ನು ಪ್ರಶ್ನಿಸಿದರೆ ಅದು ನಮಗೆ ಪ್ರಶಸ್ತಿ ಎಂದು ಪರಿಗಣಿಸುತ್ತೇನೆ ಎಂದು ಅಕ್ಷರಶ: ಅಬ್ಬರಿಸಿದ್ದಾರೆ . ನೋಡಿ
Next Story





