ಕಪುಚಿನ್ ಸೇವಾ ಕೇಂದ್ರದಿಂದ ಕ್ರೀಡೋತ್ಸವ

ಬೆಳ್ತಂಗಡಿ, ೆ.22: ಕಪುಚಿನ್ ಕೃಷಿಕ್ ಸೇವಾ ಕೇಂದ್ರ ವಿಮುಕ್ತಿ ವತಿಯಿಂದ ಚೈಲ್ಡ್ ಂಡ್‌ನ ಸಹಯೋಗದಲ್ಲಿ ವಾರ್ಷಿಕ ಯುವ ಕ್ರೀಡೋತ್ಸವ ಅನುಗ್ರಹ ಶಾಲಾ ಮೈದಾನದಲ್ಲಿ ನಡೆಯಿತು. ಈ ಸಂದರ್ಭ ಯುವ ಕೂಟದ ಸದಸ್ಯರಿಗೆ ವರದಿ ಪುಸ್ತಕ, ಟಿ-ಶರ್ಟ್, ಕ್ಯಾಪ್, ಗುರುತು ಚೀಟಿಗಳನ್ನು ವಿತರಿಸಲಾಯಿತು.
ಕ್ರೀಡೋತ್ಸವ ಉದ್ಘಾಟಿಸಿ ಮಾತನಾಡಿದ ಯುವಜನ ಸೇವೆ ಮತ್ತು ಕ್ರೀಡಾಕಾರಿ ಪ್ರಭಾಕರ್, ಕ್ರೀಡೆಯು ದೈಹಿಕ ಹಾಗೂ ಮಾನಸಿಕ ಆರೋಗ್ಯವನ್ನು ಕಾಪಾಡುತ್ತದೆ. ಸಂಸ್ಥೆಯು ಕೇವಲ ಶಿಕ್ಷಣಕ್ಕೆ ಒತ್ತು ಕೊಡದೆ ಈ ರೀತಿಯ ಕ್ರೀಡಾ ಚಟುವಟಿಕೆಯನ್ನು ನಡೆಸುತ್ತಿರುವುದು ಶ್ಲಾಘನೀಯ ಎಂದರು. ಸಂಸ್ಥೆಯ ನಿರ್ದೆಶಕ ವಂ. ವಿನೋದ್ ಮಸ್ಕರೆನ್ಹಸ್ ಶುಭ ಹಾರೈಸಿದರು. ವಂ.ಾ.ಅಮರ್ ಲೋಬೊ ಹಾಗೂ ವಿಮುಕ್ತಿ ಒಕ್ಕೂಟದ ಅಧ್ಯಕ್ಷೆ ವಿಮಲಾ ಉಪಸ್ಥಿತರಿದ್ದರು. ಸಮಾರೋಪ ಸಮಾರಂಭದಲ್ಲಿ ಸೈಂಟ್ ಅಂಟೋನಿ ಚರ್ಚ್ ಉಜಿರೆಯ ಧರ್ಮಗುರು ವಂ.ಾ. ಜೋಸೆಪ್ ಮಸ್ಕರೆನ್ಹಸ್, ಕಪುಚಿನ್ ಕೃಷಿಕ್ ಸೇವಾ ಕೇಂದ್ರ ವಿಮುಕ್ತಿಯ ಕಾರ್ಯದರ್ಶಿ ವಂ.ಾ.ನವೀನ್ ಡಿಸೋಜ, ವಿಮುಕ್ತಿ ಬಣಕಲ್ ಸಂಸ್ಥೆಯ ನಿರ್ದೇಶಕ ವಂ.ಾ.ವಿನ್ಸಿ ಡಿಸೋಜ, ವಿಮುಕ್ತಿ ಮಕ್ಕಳ ಕೂಟದ ಸಂಯೋಜಕ ಸುನೀಲ್ ಕುಮಾರ್ ಉಪಸ್ಥಿತರಿದ್ದರು.
ವಿವೇಕಾನಂದ ಯುವ ಕೂಟದ ಸದಸ್ಯೆ ದಿವ್ಯಾಶ್ರೀ ಸ್ವಾಗತಿಸಿದರು. ವಿಮುಕ್ತಿ ಯುವಕೂಟದ ಸಂಯೋಜಕಿ ಅಕ್ಷಿತಾ ಹಾಗೂ ಮೇಲ್ವಿಚಾರಕ ್ರಾನ್ಸಿಸ್ ಕಾರ್ಯಕ್ರಮ ನಿರೂಪಿಸಿದರು.





