ಏಷ್ಯನ್ ಇಂಡೋರ್ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್
ಲಾಂಗ್‌ಜಂಪ್: ಪ್ರೇಮ್ ಕುಮಾರ್‌ಗೆ ಚಿನ್ನ
ದೋಹಾ, ಫೆ.22: ಏಷ್ಯನ್ ಇಂಡೋರ್ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಭಾರತದ ಕೆ. ಪ್ರೇಮ್‌ಕುಮಾರ್ ಲಾಂಗ್‌ಜಂಪ್‌ನಲ್ಲಿ ಬೆಳ್ಳಿ ಪದಕವನ್ನು ಗೆದ್ದುಕೊಂಡಿದ್ದಾರೆ.
ಲಾಂಗ್‌ಜಂಪ್‌ನ ಫೈನಲ್‌ನಲ್ಲಿ 7.92 ಮೀ. ದೂರ ಜಿಗಿದ ಪ್ರೇಮ್‌ಕುಮಾರ್ ಬೆಳ್ಳಿ ಪದಕ ಪಡೆದರು. 7.99 ಮೀ. ದೂರ ಜಿಗಿದ ಚೀನಾದ ಝಾಂಗ್ ಯಾವೊಗ್ವಾಂಗ್ ಚಿನ್ನದ ಪದಕವನ್ನು ಗೆದ್ದುಕೊಂಡಿದ್ದಾರೆ.
ಓಂಪ್ರಕಾಶ್ ಸಿಂಗ್ ಶಾಟ್‌ಪುಟ್ ಸ್ಪರ್ಧೆಯ ಐದನೆ ಪ್ರಯತ್ನದಲ್ಲಿ 18.77 ಮೀ. ದೂರ ಎಸೆದು ಕಂಚಿನ ಪದಕಕ್ಕೆ ತೃಪ್ತಿಪಟ್ಟುಕೊಂಡರು. ಅಂತಿಮ ದಿನ ತಲಾ 1 ಬೆಳ್ಳಿ, ಕಂಚಿನ ಪದಕವನ್ನು ಜಯಿಸಿದ ಭಾರತ ಟೂರ್ನಿಯಲ್ಲಿ ಒಟ್ಟು 1 ಚಿನ್ನ, 3 ಬೆಳ್ಳಿ ಹಾಗೂ 3 ಕಂಚಿನ ಪದಕವನ್ನು ಜಯಿಸುವ ಮೂಲಕ ತನ್ನ ಅಭಿಯಾನವನ್ನು ಕೊನೆಗೊಳಿಸಿತು.
ಇದೇ ವೇಳೆ, ಜಾರ್ಖಂಡ್‌ನ ರಾಜಧಾನಿ ರಾಂಚಿ 2017ರ ಆವೃತ್ತಿಯ ಏಷ್ಯನ್ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನ ಆತಿಥ್ಯದ ಹಕ್ಕನ್ನು ಪಡೆದುಕೊಂಡಿದೆ
Next Story





