ಬ್ರಾಡ್ ಪಿಟ್ ಜತೆ ನಟಿಸಲಿರುವ ಬಾಲಿವುಡ್ ಬೆಡಗಿ ದೀಪಿಕಾ?

ಮುಂಬೈ : ಬಾಲಿವುಡ್ ಅಭಿನೇತ್ರಿ ದೀಪಿಕಾ ಪಡುಕೋಣೆ ಹಾಲಿವುಡ್‌ನ ಮೋಸ್ಟ್ ಹ್ಯಾಂಡ್‌ಸಮ್ ನಟ ಬ್ರಾಡ್ ಪಿಟ್ ಜತೆ ನಟಿಸಿದರೆ ಹೇಗಿರಬಹುದೆಂದು ಊಹಿಸಬಲ್ಲಿರಾ? ದೀಪಿಕಾ ಹಾಗೂ ಆಕೆಯ ಅಭಿಮಾನಿಗಳ ಇಂತಹ ಒಂದು ಕನಸು ಸದ್ಯದಲ್ಲಿಯೇ ನನಸಾಗಬಹುದು.
ವಿನ್ ಡೀಸಿಲ್ ಅಭಿನಯದ ‘ಎಕ್ಸ್‌ಎಕ್ಸ್‌ಎಕ್ಸ್ : ರಿಟರ್ನ್ ಆಫ್ ಕ್ಸೇಂಡರ್ ಕೇಜ್’ನಲ್ಲಿ ಮುಖ್ಯ ಭೂಮಿಕೆಯಲ್ಲಿ ನಟಿಸುವ ಅವಕಾಶ ಪಡೆದ ಕೆಲವೇ ತಿಂಗಳುಗಳಲ್ಲಿ ಈ ಪ್ರತಿಭಾವಂತ ನಟಿ ಬ್ರಾಡ್ ಪಿಟ್ ಜತೆ ದಿ ಫೈಟ್‌ಕ್ಲಬ್ ಸ್ಟಾರ್ ಎಂಬ ಚಿತ್ರದಲ್ಲಿ ನಟಿಸಲು ಸಹಿ ಹಾಕಿದ್ದಾರೆಂದು ಮನರಂಜನಾ ವೆಬ್‌ಸೈಟ್ ಪಿಂಕ್‌ವಿಲ್ಲಾ ಹೇಳಿಕೊಂಡಿದೆ.
ಈ ಸುದ್ದಿ ನಿಜವಾಗಿದ್ದೇ ಆಗಿದ್ದಲ್ಲಿ ದೀಪಿಕಾಗಿಂತ ಅದೃಷ್ವಂತ ನಟಿ ಬೇರೆ ಯಾರಿದ್ದಾರೆ ಹೇಳಿ?
Next Story





