ಆಡಂಕುದ್ರು: ನೀರಿನ ಕೊಳವೆ ಜೋಡಣೆ, ತಡೆಗೋಡೆ ಉದ್ಘಾಟನೆ

ಉಳ್ಳಾಲ: ಮೂಲ ಸಮಸ್ಯೆಗಳ ಬಗೆಹರಿಯುವಿಕೆಯೇ ಸರಕಾರದ ಉದ್ದೇಶವಾಗಿದ್ದು, ಈ ನಿಟ್ಟಿನಲ್ಲಿ ಕುಡಿಯುವ ನೀರಿಲ್ಲದೆ ತತ್ತರಿಸಿದ್ದ ಆಡಂಕುದ್ರು ಜನತೆಗೆ ಶಾಶ್ವತ ಪರಿಹಾರವನ್ನುಒದಗಿಸಲಾಗಿದೆ ಎಂದು ಶಾಸಕ ಜೆ.ಆರ್.ಲೋಬೊ ಅಭಿಪ್ರಾಯಪಟ್ಟರು.
ಅವರು 1.ಕೋಟಿ 9 ಲಕ್ಷ ರೂ. ಅನುದಾನದಲ್ಲಿ ನಿರ್ಮಾಣಗೊಂಡ ನೀರಿನ ಕೊಳವೆ ಜೋಡಣೆ, ತಡೆಗೋಡೆ ನಿರ್ಮಾಣದ ಉದ್ಘಾಟನೆ, ರಸ್ತೆ ಅಭಿವೃದ್ಧಿ , ಬೃಹತ್ ಮೋರಿಗಳ ರಚನೆ, ದಾರಿದೀಪಗಳ ಅಳವಡಿಕೆ ಮತ್ತು ಕಾಂಕ್ರೀಟ್ ರಸ್ತೆಕಾಮಗಾರಿಗೆ ಮಂಗಳವಾರ ಆಡಂಕುದ್ರುವಿನಲ್ಲಿ ಚಾಲನೆ ನೀಡಿ ಮಾತನಾಡಿದರು.
ಉಪ್ಪು ನೀರು ಮತ್ತು ಹಳೇಯ ಪೈಪ್ ನಿಂದಾಗಿ ಆಡಂಕುದ್ರು ಭಾಗದ ಜನಕುಡಿಯುವ ನೀರಿಲ್ಲದೆ ತತ್ತರಿಸಿದ್ದು, ಅದಕ್ಕೆ ಸ್ಪಂಧಿಸುವ ಮೂಲಕ ಸರಕಾರ ಈ ಭಾಗದ ಜನರ ಬಹುಮುಖ್ಯ ಬೇಡಿಕೆಯನ್ನು ಈಡೇರಿಸಿದೆ. ಜನಪ್ರತಿನಿಧಿಗಳಲ್ಲಿ ಜನರು ಬೇಡಿಕೆಗಳನ್ನು ಮುಂದಿರಿಸದೇ ಇದ್ದಲ್ಲಿ ಗ್ರಾಮದ ಅಭಿವೃದ್ಧಿಯಾಗಲು ಸಾಧ್ಯವಿಲ್ಲ. ಮುಂದೆಯೂ ಆಡಂಕುದ್ರು ಬಳಿಯ ರಸ್ತೆಗೆ ರೂ.75 ಲಕ್ಷ ಅನುದಾನ ಬಿಡುಗಡೆಯಾಗಲಿದ್ದು, ಅದರ ಜತೆಗೆ ಹೊಯ್ಗೆ ತುಂಬಿದ ರಸ್ತೆಯನ್ನು ಸರಿಪಡಿಸಲಾಗುವುದು ಎಂದ ಅವರು ಈ ಭಾಗದ ನೀರು, ದಾರಿದೀಪ ಹಾಗೂ ರಸ್ತೆಯ ಬಾಕಿ ಇರುವ ಕೆಲಸಗಳನ್ನು ಸಂಪೂರ್ಣವಾಗಿ ಪೂರ್ಣಗೊಳಿಸಲಾಗುವುದು ಎಂದರು.
ಈ ಸಂದರ್ಭ ಮೇಯರ್ ಜೆಸಿಂತಾ ವಿಜಯ ಅಲ್ಫ್ರೆಡ್, ಸಂತ ಸೆಬೆಸ್ಟಿಯನ್ನರ ಇಗರ್ಜಿಯ ಧರ್ಮಗುರು ಜೆ.ಬಿ.ಸಲ್ದಾನ್ಹ, ಮಾಜಿ ಮೇಯರ್‌ಗಳಾದ ಮಹಾಬಲ ಮಾರ್ಲ, ಶಶಿಧರ್ ಹೆಗ್ಡೆ, ಸ್ಥಾಯಿ ಸಮಿತಿ ಅಧ್ಯಕ್ಷ ದೀಪಕ್ ಪೂಜಾರಿ, ಕಾರ್ಪೊರೇಟರ್‌ಗಳಾದ ಜೆ.ಸುರೇಂದ್ರ, ಪ್ರವೀಣ್ ಆಳ್ವ, ಕಾಂಗ್ರೆಸ್ ಮುಖಂಡರಾದ ಉಮೇಶ್‌ಚಂದ್ರ, ಹರ್ಬಟ್‌ಡಿ ಸೋಜಾ, ಡೆನ್ಝಿಲ್ ಡಿಸೋಜಾ, ಕ್ಯಾನುಯೆಟ್ ಪಿರೇರಾ, ಡೆಮ್ಮಿಡಿ ಸೋಜಾ, ಸ್ಟ್ಯಾನಿ ಆಲ್ವರೀಸ್, ಟಿ.ಕೆ.ಸುಧೀರ್, ಸುಧಾಕರ್, ಸದಾಶಿವ ಅಮೀನ್ , ಗುತ್ತಿಗೆದಾರರ ವಿರಾಜ್ ಶೆಟ್ಟಿ, ಉಮೇಶ್ ದೇವಾಡಿಗ ಮೊದಲಾದವರು ಉಪಸ್ಥಿತರಿದ್ದರು.







