ಪತ್ನಿಯ ಒಂದು ನಗುವಿಗಾಗಿ ಆತ ಎಕ್ರೆಗಟ್ಟಲೆ ಜಾಗದಲ್ಲಿ ಹೂದೋಟ ಮಾಡಿದ! ಹೀಗೊಂದು ಆದರ್ಶ ಪ್ರೇಮ ಕಥೆ!

ಜಪಾನ್‌ನ ಕರೊಕಿಯ ಮನೆಗೆ ವಸಂತ ಕಾಲದಲ್ಲಿಬರುವವರ ಸಂಖ್ಯೆಯೆಷ್ಟುಗೊತ್ತೇ? ಪ್ರತಿ ದಿವಸ ಸುಮಾರು ಏಳುಸಾವಿರ ಮಂದಿ ಕರೋಕಿಯ ಮನೆಯನ್ನು ಹುಡುಕಿಕೊಂಡು ಬರುತ್ತಾರೆ. ವಾಸ್ತವದಲ್ಲಿ ಮನೆ ನೋಡಲಿಕ್ಕೆ ಅವರು ಬರುವುದಲ್ಲ. ಬದಲಾಗಿ ಹೂದೋೀಟ ನೋಡಲಿಕ್ಕೆ ಅವರು ಬರುತ್ತಾರೆ. ಹೂತೋಟ ಎಂದರೆ ವಿವಿಧ ಹೂಗಳಿಂದ ತುಂಬಿದ ಹೂದೋಟವಲ್ಲ. ಗುಲಾಬಿ ಬಣ್ಣದ ಶಿಬಸಕುರ ಎಂಬ ಹೂಗಳು ಅಲ್ಲಿ ಅರಳುತ್ತವೆ. ಅಂದರೆ ಎಕರೆಗಟ್ಟೆಲೆ ವಿಸ್ತಾರದಲ್ಲಿರುವ ಹೂದೋಟದಲ್ಲಿ ಶಿಬಸಕುರ ಹೂಗಳು ಅರಳುವುದು.
ಶಿಬಸುರ ಹೂಗಳ ಕಮ್ಮನೆ ಆ ಹೂದೋಟದಿಂದಾಗಿ ಬಹಳ ದೂರದವರೆಗೂ ಹರಡುತ್ತವೆ. ಆ ಪ್ರದೇಶದಲ್ಲಿ ಆ ಹೂ ಅರಳುವ ಸಮಯದಲ್ಲಿ ಹೂವಿನ ಸುವಾಸನೆಯೇ ತುಂಬಿರುತ್ತದೆ. ವಸಂತಕಾಲದಲ್ಲಿ ಅದು ಅರಳುವುದರಿಂದ ಅದನ್ನು ನೋಡಿ ಆಸ್ವಾದಿಸಲು ವೀಕ್ಷರು ಬರುತ್ತಾರೆ. ಕುರೋಕಿ ಪತ್ನಿಗೆ ತನ್ನ ಐವತ್ತೆರಡವೆ ವಯಸ್ಸಿನಲ್ಲಿ ಕಣ್ಣಿನ ದೃಷ್ಟಿ ಹೋಗಿತ್ತು. ಅದರೊಂದಿಗೆ ಕುರೋಕಿಯ ಜೀವನದ ನಗು ಮಾಸಿಹೋಯಿತು. ಪತ್ನಿ ತೀರಾ ವಿಷಾದ ಪಡುವುದನ್ನು ಕಂಡು ತನ್ನ ಪತ್ನಿಯ ಜೀವನಕ್ಕೆ ನಗುವನ್ನು ಮರಳಿ ತರುವುದಕ್ಕಾಗಿ ತನ್ನ ಮನೆ ಪರಿಸರದಲ್ಲಿ ಜೀವನಸೌಂದರ್ಯ ಸೂಸುವ ಒಂದು ಹೂವನ್ನು ಆಯ್ಕೆ ಮಾಡಿಕೊಂಡರು. ಹೀಗೆ ಅವರು ತನ್ನ ಜಾಗದಲ್ಲಿದ್ದ ಮರಗಳನ್ನೆಲ್ಲ ತೆಗೆದು ಹೂದೋಟ ಮಾಡಿದರು. ಆ ಹೂ ಅರಳಿದಾಗ ಪತ್ನಿಯನ್ನು ಅಲ್ಲಿಗೆ ಕರೆತರುತ್ತಾರೆ. ಅಲ್ಲಿ ಪತ್ನಿ ಉಲ್ಲಸಿತರಾಗುವುದನ್ನು ಕಂಡು ಸಂತೋಷ ಪಡುತ್ತಾರೆ. ತನ್ನ ಹೂನಗುವನ್ನು ನೋಡಲು ಬಯಸುವ ಪತಿಯ ಬಯಕೆಯನ್ನು ಆಕೆ ತಿಳಿದುಕೊಂಡು ಮನಸಾರೆ ನಗುತ್ತಾರೆ. ಆನಂತರ ಆ ನಗು ಮಾಯವಾಗಿಲ್ಲ. ಈಗ ಹತ್ತುವರ್ಷಗಳಿಂದ ದೂರದೂರದ ಪ್ರದೇಶದಿಂದ ಹೂದೋಟ ನೋಡಲು ಸಂದರ್ಶಕರೂ ಬರುತ್ತಿದ್ದಾರೆ. ಅದೂಕೂಡಾ ಭಾರೀ ಸಂಖ್ಯೆಯಲ್ಲಿ.





