ಸದಭಿರುಚಿಯ ಓದಿನಿಂದ ಜೀವನದಲ್ಲಿ ಮುನ್ನಡೆ, ಯಶಸ್ಸು ಸಾಧ್ಯ. ಕೆಸಿಎಫ್ ಡೇ ಯಲ್ಲಿ ಬೈತಾರ್ ಸಖಾಫಿ

ರಿಯಾದ್: ಬದುಕಿನ ಗುರಿ,ಜೀವನ ಮೌಲ್ಯಗಳು, ಸಂಸ್ಕಾರ, ಸದಾಚಾರ ನೀತಿ ಇತ್ಯಾದಿಗಳನ್ನು ಪ್ರತಿಪಾದಿಸುವ ಕೃತಿಗಳು, ಪತ್ರಿಕೆಗಳು ಹಾಗೂ ನಿಯತಕಾಲಿಗಳನ್ನು ಓದುವ ಹವ್ಯಾಸ ಬೆಳೆಸಿಕೊಂಡರೆ ಜೀವನದಲ್ಲಿ ಯಶಸ್ಸು ಗಳಿಸಲು ಸಾಧ್ಯ. ಶುದ್ಧ ಸಾಹಿತ್ಯವು ಮಾನವನನ್ನು ಎತ್ತರಕ್ಕೇರಿಸುವ ಸಾಮರ್ಥ್ಯ ಹೊಂದಿದೆ. ಸೃಜನಶೀಲತೆ ಬೆಳೆಸುವದರ ಜತೆಗೆ ಆದು ನೈತಿಕ ಬದುಕನ್ನು ರೂಢಿಸಿಕೊಳ್ಳುವುದರಲ್ಲೂ ನೆರವು ನೀಡುತ್ತದೆ. ಐಹಿಕ ಬದುಕಿನಲ್ಲಿ ಗಳಿಸುವ ಯಾವುದೇ ಮುನ್ನ ಡೆ, ಯಶಸ್ಸುಗಳಿದ್ದರೂ ಅದು ಮುಸ್ಲಿಮನೊಬ್ಬನ ಪಾಲಿಗೆ ಆತನ ಪಾರತ್ರಿಕ ಮೋಕ್ಷಕ್ಕೆ ಹೇತುವಾಗಬೇಕು. ಈ ನಿಟ್ಟಿನಲ್ಲಿ ಆತನ ಉತ್ತರಾಯಿತ್ವದ ಕಲ್ಪನೆಗಳನ್ನು ಸುಂದರಗೊಳಿಸುವ ಆಯ್ಕೆಗೆ ಕೆಸಿಎಫ್ ಪ್ರಥಮ ಆದ್ಯತೆ ನೀಡಿದೆ ಎಂದು ಕೆಸಿಎಫ್ ಸೌದಿ ರಾಷ್ಟ್ರೀಯ ಸಮಿತಿ ಅಧ್ಯಕ್ಷ ಯೂಸುಫ್ ಸಖಾಫಿ ಬೈತಾರ್ ನುಡಿದರು.
'ಓದು, ಮುುನ್ನಡೆಸು, ಯಶಸ್ವಿಯಾಗು' ಎಂಬ ಘೋಷಣೆಯೊಂದಿಗೆ ಕರ್ನಾಟಕ ಕಲ್ಚರಲ್ ಫೌಂಡೇಶನ್ ಅಂತಾರಾಷ್ಟ್ರೀಯ ಮಟ್ಟದಲ್ಲಿ ನಡೆಸಿದ 'ಕೆಸಿಎಫ್ ಡೇ' ಪ್ರಯುಕ್ತ ರಿಯಾದ್ ಝೋನಲ್ ವತಿಯಿಂದ ಇಲ್ಲಿನ ಝೋನಲ್ ಕಚೇರಿಯಲ್ಲಿ ಆಯೋಜಿಸಿದ ಸಭಾ ಕಾರ್ಯಕ್ರಮದಲ್ಲಿ ಅವರು ವಿಷಯ ಮಂಡಿಸಿ ಮಾತನಾಡುತ್ತಿದ್ದರು.
ಝೋನಲ್ ಸಮಿತಿ ಅಧ್ಯಕ್ಷ ನಝೀರ್ ಕಾಶಿಪಟ್ಣ ಸಮಾರಂಭದ ಅಧ್ಯಕ್ಷ ತೆ ವಹಿಸಿದರು. ಸೌದಿ ರಾಷ್ಟ್ರೀಯ ಸಮಿತಿ ಸಂಘಟನಾ ವಿಭಾಗದ ಸಿದ್ದೀಖ್ ಸಖಾಫಿ ಪೆರುವಾಯಿ ಕಾರ್ಯಕ್ರಮ ಉದ್ಘಾಟಿಸಿದರು.
ಹಿರಿಯ ಮುಂದಾಳುಗಳಾದ ಇಸ್ಮಾಯೀಲ್ ಶಾಫಿ ವಿಟ್ಲ, ಮುಹಮ್ಮದ್ ಸಿತಾರ್, ಕೆಸಿಎಫ್ ಬದೀಯ ಸೆಕ್ಟರ್ ಅಧ್ಯಕ್ಷ ಉಮರ್ ಕುಂಞಿ ಕಬಕ, ಹಳೆ ಸನಯ್ಯ ಸೆಕ್ಟರ್ ಕಾರ್ಯದರ್ಷಿ ಇಸ್ಮಾಈಲ್ ಕಣ್ಣಂಗಾರ್, ಗೊರ್ನಾಥ ಘಟಕ ಆಧ್ಯಕ್ಷ ನವಾಝ್ ಚಿಕ್ಕಮಗಳೂರು, ಶಿಫಾ ಸೆಕ್ಟರ್ ಅಧ್ಯಕ್ಷ ಯೂಸುಫ್ ಚೆನ್ನಾರ್, ಬತ್ತ ಘಟಕದ ಕಾರ್ಯದರ್ಶಿ ಬಶೀರ್ ತಲಪ್ಪಾಡಿ, ಹುಸೈನ್ ಕೃಷ್ಣಾಪುರ, ಹಾರ ಸೆಕ್ಟರ್ ನ ಮುಹಮ್ಮದ್ ತಸ್ಲೀಂ, ರಿಯಾದ್ ಝೋನಲ್ ಶಿಕ್ಷಣ ವಿಭಾಗದ ಚೆಯರ್ಮ್ಯಾನ್ ಅಬ್ದುಲ್ಲ ಸಖಾಫಿ ನಿಂತಿಕಲ್ಲು, ಉಲಯ್ಯ ಸೆಕ್ಟ ರ್ ಅಧ್ಯಕ್ಷ ಇಸ್ಮಾಯೀಲ್ ಜೋಗಿಬೆಟ್ಟು, ಇಖ್ಬಾಲ್ ಬಾಷ ಕಾರವಾರ ಮುಂತಾದವರು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು.
ಆರಂಭದಲ್ಲಿ ಪ್ರಾಂತೀಯ ಕೋಶಾಧಿಕಾರಿ ಹನೀಫ್ ಬೆಳ್ಳಾರೆ ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು.
ಬತ್ತ ಘಟಕದ ಅಧ್ಯಕ್ಷ ಇಲ್ಯಾಸ್ ಲತೀಫಿ ಕೊನೆಯಲ್ಲಿ ವಂದಿಸಿದರು. ಕಾರ್ಯ ಕ್ರಮದ ಅಂಗವಾಗಿ ಸಿಹಿ ವಿತರಣೆ ಮಾಡಲಾಯಿತು. ಕಾರ್ಯದರ್ಶಿ ಫಾರೂಕ್ ಉಳ್ಳಾಲ್ ನಿರೂಪಿಸಿದರು





