ದ.ಕ. ಜಿಲ್ಲಾ ಪಂಚಾಯತ್ ಬಿಜೆಪಿ ತೆಕ್ಕೆಗೆ, * 36 ಕ್ಷೇತ್ರಗಳಲ್ಲಿ 21 ಬಿಜೆಪಿ, 15 ಕಾಂಗ್ರೆಸ್
ಮಂಗಳೂರು, ಫೆ. 23: ದ.ಕ. ಜಿಲ್ಲಾ ಪಂಚಾಯತ್‌ನ 36 ಕ್ಷೇತ್ರಗಳಲ್ಲಿ 21 ಕ್ಷೇತ್ರಗಳನ್ನು ಬಿಜೆಪಿ ಹಾಗೂ ಕಾಂಗ್ರೆಸ್ 15 ಕ್ಷೇತ್ರಗಳಲ್ಲಿ ಜಯಗಳಿಸುವ ಮೂಲಕ ಬಿಜೆಪಿ 3ನೆ ಅವಧಿಗೆ ಅಧಿಕಾರಕ್ಕೇರಲು ಸಿದ್ಧತೆ ನಡೆಸಿದೆ.
ದ.ಕ. ಜಿಲ್ಲಾ ಪಂಚಾಯತ್‌ನಲ್ಲಿ ಗೆಲುವು ಸಾಧಿಸಿದ ಅಭ್ಯರ್ಥಿ ಪಡೆದ ಮತಗಳು, ನಿಕಟ ಸ್ಪರ್ಧಿ ಪಡೆದ ಮತಗಳು ಹಾಗೂ ಗೆಲುವಿನ ಅಂತರವನ್ನು ಈ ಕೆಳಗೆ ನೀಡಲಾಗಿದೆ.
ಕಿನ್ನಿಗೋಳಿ: ವಿನೋದ್ ಕುಮಾರ್ ಬೊಳ್ಳೂರು (ಬಿ.ಜೆ.ಪಿ)- 10879
ನಿಕಟ ಸ್ಪರ್ಧಿ: ಪ್ರಮೋದ್ ಕುಮಾರ್, (ಕಾಂಗ್ರೆಸ್) 9762
ಗೆಲುವಿನ ಅಂತರ- 1117
ಪುತ್ತಿಗೆ : ಸುಚರಿತ ಶೆಟ್ಟಿ-ಬಿಜೆಪಿ- 7164
ಚಂದ್ರಹಾಸ ಸನಿಲ್-ಕಾಂಗ್ರೆಸ್ 7073
ಗೆಲುವಿನ ಅಂತರ- 91
ಕಟೀಲು : ಕಸ್ತೂರಿ ಪಂಜ-ಬಿಜೆಪಿ- 10554
ಶೈಲ ಸಿಕ್ವೇರಾ-ಕಾಂಗ್ರೆಸ್- 9697
ಗೆಲುವಿನ ಅಂತರ- 857
ಶಿರ್ತಾಡಿ: ಸುಜಾತ.ಕೆ.ಪಿ-ಬಿಜೆಪಿ - 9412
3.ಸುಮಿತ್ರ ಎಸ್ ಪಾಂಡ್ರು-ಕಾಂಗ್ರೆಸ್- 7769
ಗೆಲುವಿನ ಅಂತರ-1643
ಬಜಪೆ : ವಸಂತಿ-ಬಿಜೆಪಿ- 7862
ಮೈಮುನ ನಿಸಾರ್-ಕಾಂಗ್ರೆಸ್- 7213
ಗೆಲುವಿನ ಅಂತರ- 649
ಎಡಪದವು: ಜನಾರ್ದನ ಗೌಡ- ಬಿಜೆಪಿ - 8465
ಕೃಷ್ಣ ಅಮೀನ್-ಕಾಂಗ್ರೆಸ್- 8307
ಗೆಲುವಿನ ಅಂತರ-158
ಗುರುಪುರ : ಯು.ಪಿ.ಇಬ್ರಾಹಿಂ-ಕಾಂಗ್ರೆಸ್- 12018
ಕೆ.ಹರೀಶ್ ಮೂಡುಶೆಡ್ಡೆ- ಬಿಜೆಪಿ- 11924
ಗೆಲುವಿನ ಅಂತರ- 94
ನೀರುಮಾರ್ಗ: ಸೀಮಾ ಮೆಲ್ವಿನ್ ಡಿಸೋಜ- ಕಾಂಗ್ರೆಸ್ - 11997
ಶಶಿಕಲಾ- ಬಿಜೆಪಿ- 9502
ಗೆಲುವಿನ ಅಂತರ- 2495
ಕೊಣಾಜೆ: ರಶೀದಬಾನು- ಕಾಂಗ್ರೆಸ್- 10996
ಪೂರ್ಣಿಮಾ ಶೆಟ್ಟಿ- ಬಿಜೆಪಿ- 6516
ಗೆಲುವಿನ ಅಂತರ- 4480
ಸೋಮೆಶ್ವರ: ಧನಲಕ್ಷ್ಮಿ- ಬಿಜೆಪಿ - 9846
ಲಕ್ಷ್ಮಿ ಬಿ ಪೂಜಾರಿ- ಕಾಂಗ್ರೆಸ್- 9331
ಗೆಲುವಿನ ಅಂತರ- 515
ಸಂಗಬೆಟ್ಟು : ಎಂ.ತುಂಗಪ್ಪ ಬಂಗೇರ-ಬಿಜೆಪಿ- 11961
ಮಾಯಿಲಪ್ಪ ಸಾಲಿಯಾನ್-ಕಾಂಗ್ರೆಸ್ - 11948
ಗೆಲುವಿನ ಅಂತರ- 13
ಸರಪಾಡಿ: ಪದ್ಮಶೇಖರ ಜೈನ್- ಕಾಂಗ್ರೆಸ್- 12810
ಪ್ರಮೋದ್ ಕುಮಾರ್ ರೈ ಕಾಡಬೆಟ್ಟು- ಬಿಜೆಪಿ-8458
ಗೆಲುವಿನ ಅಂತರ- 4352
ಪುದು : ಕೆ.ರವೀಂದ್ರ ಕಂಬಳಿ- ಬಿಜೆಪಿ -- 7062
ಎಫ್.ಉಮ್ಮರ್ ಫಾರೂಕ್- ಕಾಂಗ್ರೆಸ್- 6927
ಗೆಲುವಿನ ಅಂತರ- 135
ಗೋಳ್ತಮಜಲು: ಕಮಲಾಕ್ಷಿ ಕೆ ಪೂಜಾರಿ- ಬಿಜೆಪಿ- 11655
ಭಾರತಿ ರಮಾನಂದ ಪೂಜಾರಿ- ಕಾಂಗ್ರೆಸ್- 9559
ಗೆಲುವಿನ ಅಂತರ- 2096
ಮಾಣಿ: ಮಂಜುಳ ಮಾಧವ ಮಾವೆ- ಕಾಂಗ್ರೆಸ್- 10650
ಕೆ.ಟಿ.ಶೈಲಜ ಭಟ್- ಬಿಜೆಪಿ- 8737
ಗೆಲುವಿನ ಅಂತರ- 1913
ಕೊಳ್ನಾಡು: ಎಂ.ಎಸ್.ಮಹಮ್ಮದ್-ಕಾಂಗ್ರೆಸ್ - 11129
ಕೆ.ಮಹಮ್ಮದ್ ಮುಸ್ತಾಫ- ಬಿಜೆಪಿ- 9864
ಗೆಲುವಿನ ಅಂತರ- 1265
ಕುರ್ನಾಡು: ಮಮತಾ ಡಿ ಎಸ್ ಗಟ್ಟಿ-ಕಾಂಗ್ರೆಸ್- 10235
ಶಕೀಲಾ ಕುಲಾಲ್- ಬಿಜೆಪಿ- 7380
ಗೆಲುವಿನ ಅಂತರ- 2855
ಸಜಿಪಮುನ್ನೂರು: ಚಂದ್ರಪ್ರಕಾಶ್ ಶೆಟ್ಟಿ- ಕಾಂಗ್ರೆಸ್- 12730
ಕೆ. ಪದ್ಮನಾಭ ಕೊಟ್ಟಾರಿ-ಬಿಜೆಪಿ- 10558
ಗೆಲುವಿನ ಅಂತರ- 2172
ಪುಣಚ : ಜಯಶ್ರೀ ಕೊಡಂದೂರು-ಬಿಜೆಪಿ- 10508
ಚೇತನ ಗೋಪಾಲ ಕೃಷ್ಣ ನಾಯಕ್- ಕಾಂಗ್ರೆಸ್- 9325
ಗೆಲುವಿನ ಅಂತರ- 1183
ನಾರಾವಿ: ಪಿ.ಧರಣೇಂದ್ರ ಕುಮಾರ್-ಕಾಂಗ್ರೆಸ್- 11620
ಜಯಂತ್ ಕೊಟ್ಯಾನ್-ಬಿಜೆಪಿ- 11168
ಗೆಲುವಿನ ಅಂತರ- 452
ಅಳದಂಗಡಿ: ಶೇಖರ ಕುಕ್ಕೇಡಿ- ಕಾಂಗ್ರೆಸ್- 8102
ಸದಾಶಿವ ಕುಮಾರ್- ಬಿಜೆಪಿ- 7187
ಗೆಲುವಿನ ಅಂತರ- 452
ಲಾಯಿಲಾ: ಸೌಮ್ಯಲತ ಜಯಂತ ಗೌಡ- ಬಿಜೆಪಿ- 7734
ಶೋಬಾ ನಾರಾಯಣ ಗೌಡ- ಕಾಂಗ್ರೆಸ್- 6885
ಗೆಲುವಿನ ಅಂತರ- 849
ಉಜಿರೆ : ನಮಿತಾ ಕೆ-ಕಾಂಗ್ರೇಸ್- 9516
ಮಂಜುಳಾ ಉಮೇಶ್- ಬಿಜೆಪಿ- 9328
ಗೆಲುವಿನ ಅಂತರ: 188
ಕಣಿಯೂರು : ಶಾಹುಲ್ ಹಮೀದ್ ಕೆ. ಕಾಂಗ್ರೆಸ್- 9910
2.ಸುಬ್ರಹ್ಮಣ್ಯ ಕುಮಾರ್ ಅಗರ್ತ- ಬಿಜೆಪಿ- 9789
ಗೆಲುವಿನ ಅಂತರ- 121
ಧರ್ಮಸ್ಥಳ: ಕೆ. ಕೊರಗಪ್ಪ ನಾಯಕ- ಬಿಜೆಪಿ- 9137
ರಮೇಶ ಬಿ.- ಕಾಂಗ್ರೆಸ್- 7309
ಗೆಲುವಿನ ಅಂತರ- 1828
ಕುವೆಟ್ಟು : ಮಮತಾ ಎಂ ಶೆಟ್ಟಿ- ಬಿಜೆಪಿ-10501
2.ಶರಲ್ ನರೋನ್ಹಾ - ಕಾಂಗ್ರೆಸ್ - 9278
ಗೆಲುವಿನ ಅಂತರ- 1223
ಉಪ್ಪಿನಂಗಡಿ: ಶಯನ ಜಯಾನಂದ- ಬಿಜೆಪಿ- 12893
ಅನಿತಾ ಕೇಶವ ಗೌಡ- ಕಾಂಗ್ರೆಸ್- 10 168
ಗೆಲುವಿನ ಅಂತರ- 2725
ನೆಲ್ಯಾಡಿ: ಸರ್ವೋತ್ತಮ ಗೌಡ ಕೆ. - ಕಾಂಗ್ರೆಸ್- 7411
ಬಾಲಕೃಷ್ಣ ಬಾನಜಾಲು- ಬಿಜೆಪಿ- 7387
ಗೆಲುವಿನ ಅಂತರ- 24
ಕಡಬ: ಪಿ.ಪಿ.ವರ್ಗೀಸ್- ಕಾಂಗ್ರೆಸ್-10001
ಕೃಷ್ಣಶೆಟ್ಟಿ- ಬಿಜೆಪಿ- 9785
ಗೆಲುವಿನ ಅಂತರ- 216
ಬೆಳಂದೂರು: ಪ್ರಮೀಳ ಜನಾರ್ದನ- ಬಿಜೆಪಿ- 9305
ಸತೀಶ್ ಕುಮಾರ್ ಕೆಡಂಜಿ- ಕಾಂಗ್ರೆಸ್- 6816
ಗೆಲುವಿನ ಅಂತರ- 2489
ಪಾಣಾಜೆ : ಮೀನಾಕ್ಷಿ ಶಾಂತಿಗೋಡು- ಬಿಜೆಪಿ- 13933
ಪವಿತ್ರ ಬಾಬು ಆರ್ಯಾಪು- ಕಾಂಗ್ರೆಸ್- 11367
ಗೆಲುವಿನ ಅಂತರ- 2566
ನೆಟ್ಟಣಿಗೆ ಮೂಡ್ನೂರು: ಅನಿತಾ ಹೇಮನಾಥ ಶೆಟ್ಟಿ- ಕಾಂಗ್ರೆಸ್- 11260
ವೀಣಾ ಆರ್. ರೈ ಬೆದ್ರಮಾರ್- ಬಿಜೆಪಿ- 10240
ಗೆಲುವಿನ ಅಂತರ- 1020
ಬೆಳ್ಳಾರೆ : ಎಸ್.ಎನ್.ಮನ್ಮಥ- ಬಿಜೆಪಿ- 10322
ರಾಜೀವಿ ಆರ್. ರೈ- ಕಾಂಗ್ರೆಸ್- 8952
ಗೆಲುವಿನ ಅಂತರ- 1370
ಗುತ್ತಿಗಾರು- ಆಶಾ ತಿಮ್ಮಪ್ಪ ಗೌಡ- ಬಿಜೆಪಿ- 10722
ವಿಮಲ ರಂಗಯ್ಯ- ಕಾಂಗ್ರೆಸ್- 6712
ಗೆಲುವಿನ ಅಂತರ- 4010
ಜಾಲ್ಸೂರು: ಪುಷ್ಪಾವತಿ ಬಾಳಿಲ- ಬಿಜೆಪಿ- 9899
ಸರಸ್ವತಿ ಕಾಮತ್- ಕಾಂಗ್ರೆಸ್- 8441
ಗೆಲುವಿನ ಅಂತರ- 1458
ಅರಂತೋಡು : ಹರೀಶ್ ಕಂಜಿಪಿಲಿ-ಬಿಜೆಪಿ- 10419
ಮಾಧವ ಗೌಡ ಕಾಮದೇನು- ಕಾಂಗ್ರೆಸ್- 5928
ಗೆಲುವಿನ ಅಂತರ- 4491
ಅತ್ಯಧಿಕ ಮತಗಳ ಗೆಲುವು!
ದ.ಕ. ಜಿಲ್ಲಾ ಪಂಚಾಯತ್‌ನ ಸುಳ್ಯ ತಾಲೂಕಿನ ಅರಂತೋಡು ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಹರೀಶ್ ಕಂಜಿಪಿಲಿಯವರು ಕಾಂಗ್ರೆಸ್ ಅಭ್ಯರ್ಥಿ ಮಾಧವ ಗೌಡ ಕಾಮಧೇನು ಅವರಿಂದ 4491 ಮತಗಳ ಅಂತರದಿಂದ ಗೆಲುವು ಸಾಧಿಸುವ ಮೂಲಕ ಜಿಲ್ಲೆಯಲ್ಲಿ ಅತ್ಯಧಿಕ ಮತಗಳಿಂದ ಗೆಲವು ಪಡೆದ ಅಭ್ಯರ್ಥಿಯಾಗಿ ಹೊರಹೊಮ್ಮಿದ್ದಾರೆ.
ಸ್ನಾತಕೋತ್ತರ ಪದವೀಧರೆ, ಉಪನ್ಯಾಸಕಿ ಜಿಪಂ ಸದಸ್ಯೆ
ಪ್ರಸ್ತುತ ಉಳ್ಳಾಲದ ಹಝ್ರತ್ ಸಯ್ಯದ್ ಮದನಿ ಕಾಲೇಜಿನಲ್ಲಿ ಉಪನ್ಯಾಸಕಿಯಾಗಿರುವ ರಾಜಕೀಯ ವಿಜ್ಞಾನದಲ್ಲಿ ಸ್ನಾತಕೋತ್ತರ ಪದವೀಧರೆ, ಕಾಂಗ್ರೆಸ್ ಅಭ್ಯರ್ಥಿ ರಶೀದಾ ಬಾನು 4480 ದ.ಕ. ಜಿಲ್ಲಾ ಪಂಚಾಯತ್‌ನ ಮಂಗಳೂರು ತಾಲೂಕಿನ ದ್ವಿತೀಯ ಅತ್ಯಧಿಕ ಮತಗಳಿಂದ ಗೆಲುವು ಪಡೆದ ಅಭ್ಯರ್ಥಿಯಾಗಿದ್ದಾರೆ. ಇವರು ನಿಕಟ ಸ್ಪರ್ಧಿ ಬಿಜೆಪಿಯ ಪೂರ್ಣಿಮಾ ಶೆಟ್ಟಿ ವಿರುದ್ಧ 4480 ಮತಗಳ ಅಂತರದಿಂದ ಜಯಗಳಿಸಿದ್ದಾರೆ.
ಅತಿ ಕಡಿಮೆ ಮತಗಳ ಗೆಲವು
ದ.ಕ. ಜಿಲ್ಲಾ ಪಂಚಾಯತ್‌ನ ಬಂಟ್ವಾಳದ ಸಂಗಬೆಟ್ಟು ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಂ. ತುಂಗಪ್ಪ ಬಂಗೇರ, ಕಾಂಗ್ರೆಸ್‌ನ ಮಾಯಿಲಪ್ಪ ಸಾಲಿಯಾನ್ ವಿರುದ್ಧ 13 ಮತಗಳ ಅಂತರದಿಂದ ಜಯಗಳಿಸಿದ್ದಾರೆ.
ಪುತ್ತೂರಿನ ನೆಲ್ಯಾಡಿ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಸರ್ವೋತ್ತಮ ಗೌಡ ಕೆ.ಯವರು ಬಿಜೆಪಿ ಬಾಲಕೃಷ್ಣ ಬಾನಜಾಲು ಅವರಿಂದ 24 ಮತಗಳ ಅಂತರದಿಂದ ಜಯಗಳಿಸಿದ್ದಾರೆ.
ಖಾತೆ ತೆರೆಯದ ಜೆಡಿಎಸ್, ಎಸ್‌ಡಿಪಿಐ, ಸಿಪಿಎಂ, ಸಿಪಿಐ!
ದ.ಕ. ಜಿಲ್ಲಾ ಪಂಚಾಯತ್‌ನ 36ರಲ್ಲಿ 11 ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದ ಜೆಡಿಎಸ್ ಪಕ್ಷ ಖಾತೆ ತೆರೆಯುವುವಲ್ಲಿ ವಿಫಲವಾಗಿರುವುದು ಮಾತ್ರವಲ್ಲದೆ, ಪ್ರಬಲ ಸ್ಪರ್ಧೆಯನ್ನು ನೀಡುವಲ್ಲಿಯೂ ವಿಫಲವಾಗಿದೆ.
ಸಿಪಿಐಎಂ ಕೂಡಾ 7 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದರೆ, ಸಿಪಿಐನ ಅಭ್ಯರ್ಥಿ ಕಟೀಲು ಕ್ಷೇತ್ರದಲ್ಲಿ ಸ್ಪರ್ಧಿಸಿದ್ದರು.
ಬಿಜೆಪಿಯ ಮಾಜಿ ಶಾಸಕ, ಜಿಲ್ಲಾಧ್ಯಕ್ಷರಿಗೆ ಸೋಲು
ಬಂಟ್ವಾಳದ ಪ್ರತಿಷ್ಠೆಯ ಕಣವೆಂದೇ ಪರಿಗಣಿಸಲ್ಪಟ್ಟಿದ್ದ, ಬಿಜೆಪಿಯ ಮಾಜಿ ಶಾಸಕ ಹಾಗೂ ಮಾಜಿ ಜಿಲ್ಲಾಧ್ಯಕ್ಷ ಕೆ. ಪದ್ಮನಾಭ ಕೊಟ್ಟಾರಿ 2169 ಮತಗಳ ಅಂತರದಿಂದ ಸೋಲುವ ಮೂಲಕ ಬಿಜೆಪಿಗೆ ಹಿನ್ನಡೆಯಾಗಿದೆ.
ಇದೇ ವೇಳೆ ಜಿಲ್ಲಾ ಪಂಚಾಯತ್‌ನ ಮಾಜಿ ಅಧ್ಯಕ್ಷೆ ಕೆ.ಟಿ. ಶೈಲಜಾ ಭಟ್ ಮಾಣಿ ಕ್ಷೇತ್ರದಲ್ಲಿ ಕಾಂಗ್ರೆಸ್‌ನ ಮಂಜುಳಾ ಮಾಧವ ಮಾವೆ ಎದುರು 1920 ಮತಗಳ ಅಂತರದಿಂದ ಸೋತಿದ್ದಾರೆ.
ಕಳೆದ ಸಾಲಿನಲ್ಲಿ ಜಿಲ್ಲಾ ಪಂಚಾಯತ್ ಸಭೆಗಳಲ್ಲಿ 'ಫಯರ್ ಬಾಂಡ್' ಆಗಿ ಗುರುತಿಸಿಕೊಂಡಿದ್ದ ಕಾಂಗ್ರೆಸ್ ಸದಸ್ಯೆ ಸರಸ್ವತಿ ಕಾಮತ್ ಜಾಲ್ಸೂರು ಕ್ಷೇತ್ರದಲ್ಲಿ ಬಿಜೆಪಿಯ ಪುಷ್ಪಾವತಿ ಬಾಳಿಲ ಎದುರು 1458 ಮತಗಳ ಅಂತದರಿಂದ ಸೋಲು ಕಂಡಿದ್ದಾರೆ.
ವಿಠಲ ಮಲೆಕುಡಿಯಗೆ 2300 ಮತಗಳು
ದ.ಕ. ಜಿಲ್ಲಾಪಂಚಾಯತ್‌ನ ಮಾಜಿ ಅಧ್ಯಕ್ಷ ಹಾಗೂ ಬಿಜೆಪಿಯ ಹಿರಿಯ ಸದಸ್ಯರೂ ಆಗಿರುವ ಕೆ. ಕೊರಗಪ್ಪ ನಾಕ ಹಾಗೂ ಕಾಂಗ್ರೆಸ್‌ನ ರಮೇಶ್ ಬಿ. ಅವರ ಎದುರು ಸಿಪಿಎಂನಿಂದ ಸ್ಪರ್ಧಿಸಿದ್ದ ವಿಠಲ ಮಲೆಕುಡಿಯ 2300 ಮತಗಳನ್ನು ಪಡೆದ್ದಾರೆ.







