Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಕರಾವಳಿ
  3. ಬೆಳ್ತಂಗಡಿ: 4 ಕ್ಷೇತ್ರಗಳಲ್ಲಿ...

ಬೆಳ್ತಂಗಡಿ: 4 ಕ್ಷೇತ್ರಗಳಲ್ಲಿ ಕಾಂಗ್ರೇಸ್ ಪಕ್ಷ ಜಯಭೇರಿ, ಮೂರು ಕ್ಷೇತ್ರಗಳು ಬಿಜೆಪಿ ಪಾಲು

ವಾರ್ತಾಭಾರತಿವಾರ್ತಾಭಾರತಿ23 Feb 2016 6:27 PM IST
share
ಬೆಳ್ತಂಗಡಿ: 4 ಕ್ಷೇತ್ರಗಳಲ್ಲಿ ಕಾಂಗ್ರೇಸ್ ಪಕ್ಷ ಜಯಭೇರಿ, ಮೂರು ಕ್ಷೇತ್ರಗಳು ಬಿಜೆಪಿ ಪಾಲು

ಬೆಳ್ತಂಗಡಿ: ತಾಲೂಕಿನ 7 ಜಿಲ್ಲಾ ಪಂಚಾಯತ್ ಕ್ಷೇತ್ರಗಳಲ್ಲಿ 4 ಕ್ಷೇತ್ರಗಳಲ್ಲಿ ಕಾಂಗ್ರೇಸ್ ಪಕ್ಷಜಯಭೇರಿ ಬಾರಿಸಿದೆ. ಮೂರು ಕ್ಷೇತ್ರಗಳು ಬಿಜೆಪಿ ಪಾಲಾಗಿದೆ. ಈ ಬಾರಿಯಜಿ.ಪಂ. ಚುನಾವಣೆಯಲ್ಲಿ ಕಳೆದ ಫಲಿತಾಂಶಕ್ಕೆ ಹೋಲಿಸಿದರೆ ಬಿಜೆಪಿ 3 ಸ್ಥಾನಗಳನ್ನು ಕಳೆದುಕೊಂಡಿದ್ದು ಕಾಂಗ್ರೇಸ್ 3 ಸ್ಥಾನಗಳನ್ನು ಗಳಿಸಿಕೊಂಡಿದೆ. ಕಳೆದ ಚುನಾವಣೆಯಲ್ಲಿ ತಾಲೂಕಿನಲ್ಲಿ 6 ಜಿ.ಪಂ. ಕ್ಷೇತ್ರಗಳಿದ್ದವು. ಹೊಸ ಕ್ಷೇತ್ರವನ್ನು ಬಿಜೆಪಿ ತನ್ನದಾಗಿಸಿಕೊಂಡಿದೆ.
ನಾರಾವಿ ಕ್ಷೇತ್ರವು ಹಿಂದುಳಿದ ಅ ವರ್ಗಕ್ಕೆ ಸೇರಿದ್ದು ಇಲ್ಲಿಕಾಂಗ್ರೇಸ್ ಅಭ್ಯರ್ಥಿ ಪಿ.ಧರಣೇಂದ್ರಕುಮಾರ್ ಅವರು 11620 ಮತಗಳನ್ನು ಪಡೆದು ಜಯಗಳಿಸಿದ್ದಾರೆ. ಪ್ರತಿಸ್ಪರ್ಧಿ ತಾ.ಪಂ. ಸದಸ್ಯರಾಗಿದ್ದ ಬಿಜೆಪಿಯ ಜಯಂತ್‌ಕೋಟ್ಯಾನ್ ಅವರು 11168 ಮತಗಳನ್ನು ಪಡೆದರು. ಗೆಲುವಿನ ಅಂತರ 452 ಮತಗಳು.ಇಲ್ಲಿ ನೇರ ಸ್ಪರ್ಧೆ ನಡೆದಿತ್ತು. ಧರಣೇಂದ್ರಅವರು ಈ ಹಿಂದೆಜಿ.ಪಂ. ಉಪಾಧ್ಯಕ್ಷರಾಗಿದ್ದು ಪ್ರಸ್ತುತ ಬೆಳ್ತಂಗಡಿ ಎಪಿಎಂಸಿಯ ಅಧ್ಯಕ್ಷರಾಗಿದ್ದಾರೆ.414 ನೋಟಾ ಮತಗಳು ಚಲಾವಣೆಯಾಗಿವೆ.
    ಅನುಸೂಚಿತಜಾತಿಗೆ ಮೀಸಲಿರಿಸಿದ ಕ್ಷೇತ್ರವಾದ ಅಳದಂಗಡಿಯಲ್ಲಿ ಕಾಂಗ್ರೇಸ್‌ಅಭ್ಯರ್ಥಿ ಶೇಖರಕುಕ್ಕೇಡಿ ಅವರು 8102 ಮತಗಳನ್ನು ಪಡೆದು ವಿಜಯಿಯಾಗಿದ್ದಾರೆ. ಪ್ರತಿಸ್ಪರ್ಧಿ ಬಿಜೆಪಿಯ ಸದಾಶಿವ ಕುಮಾರ್‌ಅವರು 7187 ಮತಗಳನ್ನು ಪಡೆದಿದ್ದಾರೆ. ಗೆಲುವಿನ ಅಂತರ 915 ಮತಗಳು.ಇಲ್ಲಿ ಜೆಡಿಎಸ್‌ನ ವೆಂಕಪ್ಪ ಮೊಗೇರ 279 ಮತಗಳು, ಪಕ್ಷೇತರರಾದ ಈಶ್ವರ ಬೈರ 898 ಮತಗಳು, ಶಿವಾನಂದ 100 ಮತಗಳು, ಚೆನ್ನಕೇಶವ 63 ಮತಗಳನ್ನು ಪಡೆದಿದ್ದಾರೆ. 193 ನೋಟಾಚಲಾವಣೆಯಾಗಿವೆ
     
    ಮಹಿಳೆಯರಿಗಾಗಿ ಮೀಸಲಿರಿಸಿದ ಲಾಯಿಲ ಕ್ಷೇತ್ರದಲ್ಲಿ ಬಿಜೆಪಿಯ ಸೌಮ್ಯಲತಾಜಯಂತಗೌಡಅವರು 7734 ಮತಗಳನ್ನು ಗಳಿಸಿ ಆಯ್ಕೆಯಾಗಿದ್ದಾರೆ. ಪ್ರತಿಸ್ಪರ್ಧಿ ಕಾಂಗ್ರೇಸ್‌ನ ಶೋಭಾ ನಾರಾಯಣಗೌಡ ಅವರಿಗೆ 6885 ಮತಗಳು ದೊರೆತಿವೆ. ಗೆಲುವಿನ ಅಂತರ 849 ಮತಗಳು.ಇಲ್ಲಿ ಜೆಡಿಎಸ್‌ನ ಸಿಂಧುದೇವಿಗೆ 222, ಸಿಪಿಐಎಂನ ರೋಹಿಣಿಅವರಿಗೆ 352, ಹಾಗೂ ಜೆಡಿಯುನ ರೂಪಲತಾಅವರಿಗೆ 101 ಮತಗಳು ಲಭಿಸಿವೆ. ಇಲ್ಲಿ 270 ನೋಟಾಚಲಾವಣೆಯಾಗಿವೆ. ಮಹಿಳೆಯರಿಗಾಗಿ ಮೀಸಲಿರಿಸಿದ ತಾಲೂಕಿನ ಇನ್ನೊಂದು ಕ್ಷೇತ್ರಉಜಿರೆಯಲ್ಲಿ ಕಾಂಗ್ರೇಸ್‌ನ ನಮಿತಾ ಕೆ. 9516 ಮತಗಳನ್ನು ಗಳಿಸಿ ಜಿ.ಪಂ.ಪ್ರವೇಶಿಸಿದ್ದಾರೆ. ಪ್ರತಿಸ್ಪರ್ಧಿ ಉಜಿರೆಗ್ರಾ.ಪಂ. ಮಾಜಿ ಉಪಾಧ್ಯಕ್ಷೆ ಬಿಜೆಪಿಯ ಮಂಜುಳಾ ಉಮೇಶ್ ಅವರಿಗೆ 9328 ಮತಗಳು ಸಿಕ್ಕಿವೆ. ಗೆಲುವಿನ ಅಂತರ 188 ಮತಗಳು.ಇಲ್ಲಿ ನೇರ ಸ್ಪರ್ಧೆ ನಡೆದಿತ್ತು.1034 ನೋಟಾ ಮತಗಳು ಚಲಾವಣೆಯಾಗಿದ್ದು ಇದುದಾಖಲೆಯಾಗಿವೆ.
    ಅನುಸೂಚಿತ ಪಂಗಡಕ್ಕೆ ಮೀಸಲಾಗಿದ್ದ ಧರ್ಮಸ್ಥಳ ಕ್ಷೇತ್ರದಲ್ಲಿ ಜಿ.ಪಂ. ಮಾಜಿಅಧ್ಯಕ್ಷ ಕೊರಗಪ್ಪ ನಾಯ್ಕ ಅವರು9137 ಮತಗಳನ್ನು ಪಡೆದು ಈ ಬಾರಿಯೂ ಜಿ.ಪಂ.ನ್ನು ಪ್ರವೇಶಿಸಲು ಸಿದ್ದರಾಗಿದ್ದಾರೆ. ಪ್ರತಿಸ್ಪರ್ಧಿ ಕಾಂಗ್ರೇಸ್‌ನ ರಮೇಶ್ ಬಿ.ಅವರು 7309 ಮತಗಳನ್ನು ಪಡೆದಿದ್ದಾರೆ. ಗೆಲುವಿನ ಅಂತರ 1828.ಇಲ್ಲಿ ಸಿಪಿಐ(ಎಂ)ನ ವಿಠಲ ಮಲೆಕುಡಿಯ 2202 ಮತಗಳನ್ನು ಗಳಿಸಿ ಗಮನ ಸೆಳೆದಿದ್ದಾರೆ ಕ್ಷೇತರ ನಾರಾಯಣ ಮಲೆಕುಡಿಯ 290 ಮತಗಳನ್ನು ಗಳಸಿದ್ದಾರೆ.497 ನೋಟಾಚಲಾವಣೆಯಾಗಿವೆ.
    ಸಾಮಾನ್ಯ ಕ್ಷೇತ್ರವಾದ ಕಣಿಯೂರು ಜಿ.ಪಂ. ಮಾಜಿ ಸದಸ್ಯ ಕಾಂಗ್ರೇಸ್‌ನ ಶಾಹುಲ್ ಹಮೀದ್ ಕೆ.ಕೆ.ಅವರು 9910 ಮತಗಳನ್ನು ಗಳಿಸಿ ಈ ಬಾರಿ ಮತ್ತೆ ಜಿ.ಪಂ.ನ್ನು ಪ್ರವೇಶಿಸಿದ್ದಾರೆ ಪ್ರತಿಸ್ಪರ್ಧಿ ಬಿಜೆಪಿಯ ಸುಬ್ರಹ್ಮಣ್ಯಕುಮಾರ್‌ಅಗರ್ತ ಅವರಿಗೆ 9789 ಮತಗಳು ದೊರೆತಿವೆ. ಗೆಲುವಿನ ಅಂತರ 121 ಮತಗಳು. ಇಲ್ಲಿಜೆಡಿಯು ಅಭ್ಯರ್ಥಿ ವೆಂಕಟೇಶ್ ಬೆಂಡೆ 212 ಮತಗಳನ್ನು ಪಡೆದಿದ್ದಾರೆ.322 ನೋಟಾದಾಖಲಾಗಿದೆ.
     ಮಹಿಳೆಯರಿಗೆ ಮೀಸಲಾಗಿದ್ದ ಕುವೆಟ್ಟುನಲ್ಲಿ ತಾ.ಪಂ. ಮಾಜಿ ಅಧ್ಯಕ್ಷೆ ಬಿಜಿಪಿಯ ಮಮತಾ ಎಂ. ಶೆಟ್ಟಿ 10501 ಮತಗಳನ್ನು ಪಡೆದು ಗೆಲುವನ್ನು ಪಡೆದಿದ್ದಾರೆ. ಪ್ರತಿಸ್ಪರ್ಧಿ ಕಾಂಗ್ರೇಸ್‌ನ ಶರಲ್ ನೊರೋನ್ನಾಅವರಿಗೆ 9278 ಮತಗಳು ಲಭಿಸಿವೆ. ಗೆಲುವಿನ ಅಂತರ 1223.ಇಲ್ಲಿ ಜೆಡಿಯುನ ಲಕ್ಷ್ಮೀರಾವ್ 161 ಮತಗಳನ್ನು ಪಕ್ಷೇತರ ಅಭ್ಯರ್ಥಿತುಳಸೀ ಹಾರಬೆ 461 ಮತಗಳನ್ನು ಪಡೆದಿದ್ದಾರೆ.346 ಮತಗಳು ನೋಟಾದಾಖಲಾಗಿವೆ.
    ಜಿ.ಪಂ.ಗೆ ನಡೆದಚುನಾವಣೆಯಲ್ಲಿ 93 ಮತಗಳು ಅಸಿಂಧುವಾಗಿದ್ದರೆ 3076 ನೋಟಾಗೆ ಮತಗಳು ದಾಖಲಾಗಿದೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X