ಮತದಾರರ ತೀರ್ಪನ್ನು ಒಪ್ಪಿಕೊಳ್ಳುತ್ತೇವೆ: ಮುಖ್ಯಮಂತ್ರಿ ಸಿದ್ದರಾಮಯ್ಯ
ಗೃಹ ಕಚೇರಿ ಕೃಷ್ಣಾದಲ್ಲಿ ಸುದ್ದಿಗೋಷ್ಠಿ

ಬೆಂಗಳೂರು, ಫೆ.23: ರಾಜ್ಯ ಸರಕಾರಕ್ಕೆ ಜಲ್ಲಾ ಪಂಚಾಯತ್ ಮತ್ತು ತಾಲೂಕು ಪಂಚಾಯತ್ ಫಲಿತಾಂಶ ಮಾನದಂಡವಲ್ಲ. ಜನರ ತೀರ್ಪನ್ನು ಒಪ್ಪಿಕೊಳ್ಳುತ್ತೇವೆ ಎಂದು ಕನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಅಭಿಪ್ರಾಯಪಟ್ಟರು.
ಗೃಹಕಚೇರಿ ಕೃಷ್ಣಾದಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿ ಚುನಾವಣಾ ಫಲಿತಾಂಶ ತೃಪ್ತಿ ತಂದಿದೆ. ಫಲಿತಾಂಶ ಜನಾದೇಶವೂ ಅಲ್ಲ. ದಿಕ್ಸೂಚಿಯೂ ಅಲ್ಲ. ರಾಜ್ಯ ಸರಕಾರಕ್ಕೆ ಮಾನದಂಡವೂ ಅಲ್ಲ ಎಂದು ಸ್ಪಷ್ಟಪಡಿಸಿದರು.
"ಕಳೆದ ಚುನಾವಣೆಗಿಂತ ಹೆಚ್ಚು ಸ್ಥಾನಗಳು ಕಾಂಗ್ರೆಸ್‌ಗೆ ಸಿಕ್ಕಿವೆ.10 ಜಿಲ್ಲಾ ಪಂಚಾಯತ್‌ಗಳಲ್ಲಿ ಬಹುಮತ ಲಭಿಸಿದೆ.ಬಹುಮತ ಕೊರತೆ ಇರುವ ಕಡೆ ಬಿಜೆಪಿಯೊಂದಿಗೆ ಹೊಂದಾಣಿಕೆ ಮಾಡುವುದಿಲ್ಲಎಂದರು..
ಜನರ ವಿಶ್ವಾಸ ಉಳಿಸಿಕೊಂಡಿದ್ದೇವೆ. ಇನ್ನೂ ಹೆಚ್ಚಿನ ಕ್ಷೇತ್ರಗಳಲ್ಲಿ ಗೆಲ್ಲುವ ನಿರೀಕ್ಷೆ ಇತ್ತು. ನಿರೀಕ್ಷಿಸಿದಷ್ಟು ಸ್ಥಾನ ಸಿಕ್ಕಿಲ್ಲ. ಆದರೆ ಕಳೆದ ಚುನಾವಣೆಗಿಂತ ಹೆಚ್ಚುಸ್ಥಾನಗಳು ಲಭಿಸಿವೆ. ಜನರ ವಿಶ್ವಾಸ ಉಳಿಸಿಕೊಂಡಿದ್ದೇವೆ.ಹೆಚ್ಚು ಅಭಿವೃದ್ಧಿ ಮಾಡಬೇಕೆಂದು ಜನರ ತೀರ್ಪು ನೀಡಿದ್ದಾರೆ" ೆಂದರು.
"ತಾಪಂ ಚುನಾವಣೆಯಲ್ಲಿ ಬಿಜೆಪಿಗಿಂತ ಹೆಚ್ಚು ಸ್ಥಾನಗಳು ಸಿಕ್ಕಿವೆ. 1700ಕ್ಕೂ ಅಧಿಕ ಸ್ಥಾನಗಳನ್ನು ಕಾಂಗ್ರೆಸ್ ಜಯಿಸಿದೆ. ಹೆಚ್ಚು ಮತಗಳನ್ನು ಪಡೆದಿದೆ. ತಮ್ಮ ಸ್ವಕ್ಷೇತ್ರ ವರುಣಾದಲ್ಲಿ ಕಾಂಗ್ರೆಸ್‌ಗೆ ಹಿನ್ನಡೆ ಆಗಿಲ್ಲ. ಪದೇ ಪದೇ ಚುನಾವಣೆ ಫಲಿತಾಂಶದ ಹಿನ್ನೆಲೆಯಲ್ಲಿ ಸಂಪುಟ ಪುನಾರಚಣೆ ಮಾಡಲು ಸಾಧ್ಯವಾಗಿಲ್ಲ. ಬಜೆಟ್ ನಂತರ ಸಂಪುಟ ಪುನಾರಚನೆ ಮಾಡಲಾಗುವುದು.ನನ್ನ ಸಂಪುಟದಲ್ಲಿ ಎಲ್ಲರೂ ಸಮರ್ಥ ಸಚಿವರಿದ್ದಾರೆ. ಯಾರೂ ಅಸಮರ್ಥ ಸಚಿವರು ಇಲ್ಲ" ಎಂದು ಸಿಎಂ ಸಿದ್ದರಾಮಯ್ಯ ಮಾಹಿತಿ ಹೇಳಿದರು.





