ಮೂಡುಬಿದಿರೆ : ಜೆಡಿಎಸ್, ಸಿಪಿ(ಐ)ಎಂ ಫಲ ಶೂನ್ಯ

ಮೂಡುಬಿದಿರೆ : ಮೂಡುಬಿದಿರೆ ಹೋಬಳಿಯ ಜಿ.ಪಂ ಮತ್ತು ತಾ.ಪಂ ಕ್ಷೇತ್ರ ಚುನಾವಣೆಯಲ್ಲಿ ಸ್ಪರ್ಧಿಸಿರುವ ಜೆಡಿಎಸ್ 4 ಮತ್ತು ಸಿಪಿ(ಐ)ಎಂ ನ 8 ಅಭ್ಯರ್ಥಿಗಳು ಸೋಲುವ ಮೂಲಕ ಈ ಕ್ಷೇತ್ರದಲ್ಲಿ ಫಲ ಶೂನ್ಯವಾಗಿದೆ. ಪುತ್ತಿಗೆ ಜಿ.ಪಂ ಕ್ಷೇತ್ರದಲ್ಲಿ ಸಿಪಿಐಎಂ ನ ಯಾದವ ಶೆಟ್ಟಿ, ಜೆಡಿಎಸ್‌ನ ದಿವಾಕರ ಶೆಟ್ಟಿ, ತಾ.ಪಂನಲ್ಲಿ ಪಾಲಡ್ಕದಲ್ಲಿ ಗಾಯತ್ರಿ ನಾಯ್ಕಿ ಜೆಡಿಎಸ್, ಉಷಾ- ಸಿಪಿಐಎಂ, ತೆಂಕಮಿಜಾರಿನಲ್ಲಿ ಹರಿಪ್ರಸಾದ್ ಶೆಟ್ಟಿ-ಜೆಡಿಎಸ್, ಲಕ್ಷ್ಮೀ-ಸಿಪಿಐಎಂ, ಹೊಸಬೆಟ್ಟುವಿನಲ್ಲಿ ಫ್ಲಾವಿಯಾ ಮೆಂಡಿಸ್-ಜೆಡಿಎಸ್, ರಾಧಾ-ಸಿಪಿಐಎಂ. ಶಿರ್ತಾಡಿ ಜಿ.ಪಂನಲ್ಲಿ ಮೋಹಿನಿ-ಸಿಪಿಐಎಂ, ಬೆಳುವಾಯಿಯಲ್ಲಿ ಸುಂದರ್ ಸಿಪಿಐಎಂ, ಶಿರ್ತಾಡಿಯಲ್ಲಿ ವಿಜಯ-ಸಿಪಿಐಎಂ, ಜಲಜಾಕ್ಷಿ-ಸಿಪಿಐಎಂನ ಅಭ್ಯರ್ಥಿಗಳು ಸ್ಪರ್ಧಿಸಿದ್ದರು. ಆದರೆ ಇವರಲ್ಲಿ ಯಾವುದೇ ಕ್ಷೇತ್ರದಲ್ಲಿಯೂ ಖಾತೆ ತೆರೆಯದೆ ಶೂನ್ಯ ಸಂಪಾದನೆಯಾಗಿದೆ. ಪಕ್ಷೇತರಕ್ಕೆ 125 : ಪಡುಮಾರ್ನಾಡು ತಾ.ಪಂ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ನೇಮಿರಾಜ್ ಬಲ್ಲಾಳ್ ಅವರಿಗೆ 125 ಮತಗಳು ಬಿದ್ದಿವೆ. "ನೋಟಾ"ದತ್ತ 878 ಮತಗಳು : ಪುತ್ತಿಗೆ ಮತ್ತು ಶಿರ್ತಾಡಿ ಜಿ.ಪಂ ಕ್ಷೇತ್ರದಲ್ಲಿ ಒಟ್ಟು 878 ಜನರು "ನೋಟಾ" ದತ್ತ ವಾಲಿದ್ದಾರೆ. ಪುತ್ತಿಗೆ ಜಿ.ಪಂ ಕ್ಷೇತ್ರದಲ್ಲಿ 349 ಮತ್ತು ಶಿರ್ತಾಡಿ ಜಿ.ಪಂನಲ್ಲಿ 529 ಮತಗಳು "ನೋಟಾ"ದತ್ತ ಗುರಿ ಮಾಡಿವೆ.





