ಸರಣಿ ಹಂತಕನ ಪುಸ್ತಕವನ್ನು ವಾಪಸ್ ಪಡೆದ ಅಮೆಝಾನ್

ವ್ಯಾಂಕೋವರ್ (ಬ್ರಿಟಿಶ್ ಕೊಲಂಬಿಯ), ಫೆ. 23: ಕೆನಡದ ಸರಣಿ ಹಂತಕನೋರ್ವ ಬರೆದನೆನ್ನಲಾದ ಪುಸ್ತಕವೊಂದನ್ನು ಅಮೆಝಾನ್‌ನಲ್ಲಿ ಆನ್‌ಲೈನ್‌ನಲ್ಲಿ ಮಾರಾಟಕ್ಕಿಟ್ಟ ಗಂಟೆಗಳೊಳಗೆ ಹಿಂದಕ್ಕೆ ಪಡೆಯಲಾಗಿದೆ.
ಸೋಮವಾರ ಹೇಳಿಕೆಯೊಂದನ್ನು ಹೊರಡಿಸಿದ ಪುಸ್ತಕದ ಪ್ರಕಾಶನ ಸಂಸ್ಥೆ ‘ಔಟ್‌ಸ್ಕರ್ಟ್ಸ್ ಪ್ರೆಸ್’, ತನ್ನ ವೆಬ್‌ಸೈಟ್‌ನಿಂದ ಪುಸ್ತಕವನ್ನು ತೆಗೆಯುವಂತೆ ಅಮೆಝಾನ್‌ಗೆ ಸೂಚಿಸಿರುವುದಾಗಿ ತಿಳಿಸಿದೆ. ಅದೇ ವೇಳೆ, ಅದು ಸಂತ್ರಸ್ತ ಕುಟುಂಬಗಳ ಕ್ಷಮೆ ಕೋರುವುದಾಗಿಯೂ ಹೇಳಿದೆ.
ಆರು ಲೈಂಗಿಕ ಕೆಲಸಗಾರರ ಹತ್ಯೆ ಪ್ರಕರಣದಲ್ಲಿ, 2007ರಲ್ಲಿ ರಾಬರ್ಟ್ ಪಿಕ್ಟನ್‌ನ ಆರೋಪ ಸಾಬೀತಾಗಿತ್ತು. ಈ ಮಹಿಳೆಯರನ್ನು ಪಿಕ್ಟನ್ ತನ್ನ ಹಂದಿ ಸಾಕಣೆ ಕಟ್ಟಡದಲ್ಲಿ ಕೊಂದು ಕೆಲವು ಅವಯವಗಳನ್ನು ಹಂದಿಗಳಿಗೆ ತಿನ್ನಿಸಿದ್ದ. ಆತನಿಗೆ ಜೀವಾವಧಿ ಜೈಲು ಶಿಕ್ಷೆ ವಿಧಿಸಲಾಗಿದೆ.
‘ಪಿಕ್ಟನ್: ಇನ್ ಹಿಸ್ ಓನ್ ವರ್ಡ್ಸ್’ ಎಂಬ 144 ಪುಟಗಳ ಆತ್ಮಕತೆ ಸೋಮವಾರದಿಂದ ‘ಅಮೆಝಾನ್’ನಲ್ಲಿ ಲಭ್ಯವಿಲ್ಲ.
Next Story





