ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷರಾಗಿ ನ್ಯಾ. ಎಚ್.ಎಲ್. ದತ್ತು

ಹೊಸದಿಲ್ಲಿ, ಫೆ. 23 : ಸರ್ವೋಚ್ಛ ನ್ಯಾಯಾಲಯದ ನಿವೃತ್ತ ಮುಖ್ಯ ನ್ಯಾಯಾಧೀಶ, ಕನ್ನಡಿಗ ನ್ಯಾ. ಹಂದ್ಯಾಳ ಲಕ್ಷ್ಮಿನಾರಾಯಣಸ್ವಾಮಿ ದತ್ತು ಅವರು ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ ( ಎನ್ ಎಚ್ ಆರ್ ಸಿ) ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಕಳೆದ ಮೇ ೧೧ ರಂದು ನಿವೃತ್ತ ಮುಖ್ಯ ನ್ಯಾಯಾಧೀಶ ಕೆ.ಜಿ.ಬಾಲಕೃಷ್ಣನ್ ಅವರ ಅವಧಿ ಮುಗಿದ ಬಳಿಕ ಈ ಸ್ಥಾನ ಖಾಲಿಯಿತ್ತು. ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಸಮಿತಿ ದತ್ತು ಅವರ ಹೆಸರನ್ನು ಅಂತಿಮಗೊಳಿಸಿದೆ. ಕಳೆದ ಡಿಸೆಂಬರ್ ೨ ರಂದು ನಿವೃತ್ತರಾದ ದತ್ತು ಮುಂದಿನ ಐದು ವರ್ಷಗಳ ಕಾಲ ಎನ್ ಎಚ್ ಆರ್ ಸಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಲಿದ್ದಾರೆ.
Next Story





