ಭೂ ಸ್ವಾಧೀನ ಕಾಯ್ದೆ ಹಿಂದೆಗೆತ ಸಾಧ್ಯತೆ
ಹೊಸದಿಲ್ಲಿ, ಫೆ.23: ನರೇಂದ್ರ ಮೋದಿ ಸರಕಾರದ ಮಹಾತ್ತ್ವಾಕಾಂಕ್ಷಿ ಭೂ ಸ್ವಾಧೀನ ಮಸೂದೆಯು ಮುಗಿದ ಅಧ್ಯಾಯದಂತೆ ತೋರುತ್ತಿದೆ. ಕೈಗಾರಿಕೆಗಳು ಹಾಗೂ ಮೂಲ ಸೌಕರ್ಯ ಯೋಜನೆಗಳಿಗೆ ಭೂ ಸ್ವಾಧೀನದ ನಿಯಮಾವಳಿಯನ್ನು ಸಡಿಲಿಸಿ ಆರ್ಥಿಕ ಚಟುವಟಿಕೆಗಳಿಗೆ ಉತ್ತೇಜನ ನೀಡುವ ಸಲುವಾಗಿ ಕಳೆದ ವರ್ಷದವರೆಗೆ ಸರಕಾರ ಈ ಮಸೂದೆಯನ್ನು ಸಂಸತ್ತಿನ ಮುಂದಿರಿಸುತ್ತಲೇ ಬಂದಿತ್ತು.
ಇಂದು ಆರಂಭವಾಗಿರುವ ಸಂಸತ್ತಿನ ಆಯವ್ಯಯ ಅಧಿವೇಶನದಲ್ಲಿ ಭೂ ಸ್ವಾಧೀನ, ಪುನರ್ವಸತಿ ಹಾಗೂ ಪರಿಹಾರ ನೀಡಿಕೆ (ತಿದ್ದುಪಡಿ) ಮಸೂದೆ-2015ನ್ನು ಹಿಂದೆಗೆಯಲು ಸರಕಾರ ಸಿದ್ಧವಾಗಿದೆಯೆಂದು ಎನ್‌ಡಿಟಿವಿಗೆ ಮೂಲಗಳು ತಿಳಿಸಿವೆ.
ಹಿಂದಿನ ಕಾಂಗ್ರೆಸ್ ಸರಕಾರದ 2013ರ ಪ್ರಮುಖ ಭೂ ಮಸೂದೆಯನ್ನು ತಿದ್ದುಪಡಿ ಮಾಡಲು ಯತ್ನಿಸಿದುದಕ್ಕಾಗಿ, ವಿಪಕ್ಷಗಳು, ಮಿತ್ರ ಪಕ್ಷಗಳು ಹಾಗೂ ಬಿಜೆಪಿ ಸಂಯೋಜಿತ ಸಂಘಟನೆಗಳ ಭಾರೀ ವಿರೋಧವನ್ನು ಮೋದಿ ಸರಕಾರ ಎದುರಿಸಿತ್ತು. ಕಾಂಗ್ರೆಸ್ ಈ ಕ್ರಮವನ್ನು ರೈತ ವಿರೋಧಿಯೆಂದು ಕರೆದಿತ್ತು.
Next Story





