ದುಬೈ ಟೆನಿಸ್ ಚಾಂಪಿಯನ್‌ಶಿಪ್: ಜೊಕೊವಿಕ್‌ಗೆ 699ನೆ ಗೆಲುವು

ದುಬೈ, ಫೆ.23: ದುಬೈ ಟೆನಿಸ್ ಚಾಂಪಿಯನ್‌ಶಿಪ್‌ನಲ್ಲಿ ಸ್ಪೇನ್‌ನ ಟಾಮ್ಮಿ ರಾಬ್ರೆಡೊರನ್ನು ನೇರ ಸೆಟ್‌ಗಳಿಂದ ಮಣಿಸಿದ ಸರ್ಬಿಯದ ನೊವಾಕ್ ಜೊಕೊವಿಕ್ ವೃತ್ತಿಜೀವನದಲ್ಲಿ 699ನೆ ಗೆಲುವು ಸಂಪಾದಿಸಿದ್ದಾರೆ. ಇದೀಗ 700ನೆ ಗೆಲುವಿನತ್ತ ಚಿತ್ತವಿರಿಸಿದ್ದಾರೆ.
ಸೋಮವಾರ ನಡೆದ ಪುರುಷರ ಸಿಂಗಲ್ಸ್ ಪಂದ್ಯದಲ್ಲಿ ಜೊಕೊವಿಕ್ ಅವರು ರಾಬ್ರೆಡೊರನ್ನು 6-1, 6-2 ನೇರ ಸೆಟ್‌ಗಳಿಂದ ಮಣಿಸಿದರು. ಈ ಋತುವಿನಲ್ಲಿ ಆಡಿದ ಎಲ್ಲ 13 ಪಂದ್ಯಗಳನ್ನು ಜಯಿಸಿರುವ ಜೊಕೊವಿಕ್ 2016ರಲ್ಲಿ ಮೂರನೆ ಪ್ರಶಸ್ತಿಯ ಮೇಲೆ ಕಣ್ಣಿಟ್ಟಿದ್ದಾರೆ.
ಜೊಕೊವಿಕ್ ಈಗಾಗಲೇ ದೋಹಾ ಹಾಗೂ ಮೆಲ್ಬೋರ್ನ್ ಓಪನ್ ಪ್ರಶಸ್ತಿಯನ್ನು ಗೆದ್ದುಕೊಂಡಿದ್ದಾರೆ. ಅಗ್ರ ಶ್ರೇಯಾಂಕದ ಜೊಕೊವಿಕ್ ಮುಂದಿನ ಸುತ್ತಿನಲ್ಲಿ ಟುನೀಶಿಯದ ಮಲೆಕ್ ಜಝಿರಿ ಅವರನ್ನು ಎದುರಿಸಲಿದ್ದಾರೆ. ಜೊಕೊವಿಕ್ ಸತತ 10ನೆ ಬಾರಿ ದುಬೈ ಓಪನ್‌ನಲ್ಲಿ ಸ್ಪರ್ಧಿಸುತ್ತಿದ್ದಾರೆ.
2009 ರಿಂದ 2011 ಹಾಗೂ 2013ರಲ್ಲಿ ಪ್ರಶಸ್ತಿಯನ್ನು ಜಯಿಸಿದ್ದಾರೆ. ಕಳೆದ ವರ್ಷ ರೋಜರ್ ಫೆಡರರ್ ವಿರುದ್ಧ ಶರಣಾಗಿದ್ದರು
Next Story





