Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಕರ್ನಾಟಕ
  4. ಜಿಪಂ-ತಾಪಂನಲ್ಲಿ ಕೈ ಮೇಲುಗೈ

ಜಿಪಂ-ತಾಪಂನಲ್ಲಿ ಕೈ ಮೇಲುಗೈ

ವಾರ್ತಾಭಾರತಿವಾರ್ತಾಭಾರತಿ23 Feb 2016 11:46 PM IST
share
ಜಿಪಂ-ತಾಪಂನಲ್ಲಿ ಕೈ ಮೇಲುಗೈ

♦ದ್ವಿತೀಯ ಸ್ಥಾನಕ್ಕೆ ತೃಪ್ತಿ ಪಟ್ಟ ಬಿಜೆಪಿ ♦ಹಲವು ಪಂಚಾಯತ್‌ಗಳು ಅತಂತ್ರ♦

ಬೆಂಗಳೂರು, ಫೆ.23: ಮುಂಬರುವ ವಿಧಾನಸಭಾ ಚುನಾವಣೆಗೆ ದಿಕ್ಸೂಚಿಯೆಂದೇ ಹೇಳಲಾಗುತ್ತಿರುವ ರಾಜ್ಯ ರಾಜಕಾರಣದಲ್ಲಿ ತೀವ್ರ ಕುತೂಹಲ ಸೃಷ್ಟಿಸಿದ್ದ ಜಿ.ಪಂ. ಮತ್ತು ತಾ.ಪಂ.ಚುನಾವಣಾ ಫಲಿತಾಂಶ ಹೊರಬಿದ್ದಿದ್ದು, ಆಡಳಿತಾರೂಢ ಕಾಂಗ್ರೆಸ್ ಮೇಲುಗೈ ಸಾಧಿಸಿದೆ.

ರಾಜ್ಯದ 30ಜಿಲ್ಲೆಗಳ ಪೈಕಿ 11 ಜಿ.ಪಂ.ಗಳಲ್ಲಿ ಕಾಂಗ್ರೆಸ್ ನಿಚ್ಚಳ ಬಹುಮತ ಗಳಿಸುವ ಮೂಲಕ ಅಧಿಕಾರದ ಗದ್ದುಗೆ ಏರಲಿದೆ. ಬಿಜೆಪಿ-7ಜಿ.ಪಂ.ಗಳಲ್ಲಿ ಅಧಿಕಾರ ಹಿಡಿಯುವ ಮೂಲಕ ಎರಡನೆ ಸ್ಥಾನದಲ್ಲಿದ್ದು, ಜೆಡಿಎಸ್ 2 ಜಿ.ಪಂ.ಗಳಲ್ಲಿ ಗೆಲುವಿನ ನಗೆಬೀರಿದ್ದು, ಅಧಿಕಾರದ ಗದ್ದುಗೆ ಏರಲು ಸನ್ನದ್ಧವಾಗಿದೆ. ಉಳಿದ 11 ಜಿ.ಪಂ.ಗಳಲ್ಲಿ ಅತಂತ್ರ ಫಲಿತಾಂಶ ಬಂದಿದೆ.30 ಜಿಲ್ಲಾ ಪಂಚಾಯತ್‌ಗಳ 1,083 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಆಡಳಿತರೂಢ ಕಾಂಗ್ರೆಸ್ ಪಕ್ಷವು 498 ಸ್ಥಾನಗಳನ್ನು ಗೆಲ್ಲುವ ಮೂಲಕ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ.

ವಿರೋಧ ಪಕ್ಷಗಳಾದ ಬಿಜೆಪಿ-408 ಹಾಗೂ ಜೆಡಿಎಸ್-148 ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ. ಪಕ್ಷೇತರರು 27 ಕ್ಷೇತ್ರಗಳಲ್ಲಿ ಜಯಶಾಲಿಯಾಗಿದ್ದು, ಸಿಪಿಎಂ ಹಾಗೂ ಜೆಡಿಯು ತಲಾ ಒಂದು ಸ್ಥಾನಗಳಿಗೆ ತೃಪ್ತಿ ಪಟ್ಟುಕೊಂಡಿವೆ.

175 ತಾಲೂಕು ಪಂಚಾಯತ್‌ಗಳ 3,884 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿಯೂ ಕಾಂಗ್ರೆಸ್ ತನ್ನ ಪ್ರಾಬಲ್ಯ ಮರೆದಿದ್ದು, 1,705 ಸ್ಥಾನಗಳಲ್ಲಿ ಗೆಲುವಿನ ನಗೆ ಬೀರಿದೆ. ಬಿಜೆಪಿ-1,362, ಜೆಡಿಎಸ್-610, ಬಿಎಸ್ಪಿ-5, ಸಿಪಿಎಂ-6, ಪಕ್ಷೇತರರು-179, ಜೆಡಿಯು-9 ಹಾಗೂ ಇತರೆ ಎಂಟು ಸ್ಥಾನಗಳಲ್ಲಿ ಜಯಶಾಲಿಯಾಗಿದ್ದಾರೆ.

ಬೆಂಗಳೂರು ನಗರ: ಜಿಲ್ಲಾ ಪಂಚಾಯತ್‌ನ 50 ಕ್ಷೇತ್ರಗಳಲ್ಲಿ ಬಿಜೆಪಿ-23, ಕಾಂಗ್ರೆಸ್-21, ಜೆಡಿಎಸ್-5, ಪಕ್ಷೇತರ-1; ನಾಲ್ಕು ತಾಲೂಕು ಪಂಚಾಯತ್‌ಗಳ 97 ಕ್ಷೇತ್ರಗಳಲ್ಲಿ ಬಿಜೆಪಿ-48, ಕಾಂಗ್ರೆಸ್-39, ಜೆಡಿಎಸ್-8, ಪಕ್ಷೇತರ-2.

ಬೆಂಗಳೂರು ಗ್ರಾಮಾಂತರ: ಜಿಲ್ಲಾಪಂಚಾಯತ್‌ನ 21 ಕ್ಷೇತ್ರಗಳ ಪೈಕಿ ಕಾಂಗ್ರೆಸ್-13, ಬಿಜೆಪಿ-3, ಜೆಡಿಎಸ್-5; ನಾಲ್ಕು ತಾಲೂಕು ಪಂಚಾಯತ್‌ಗಳ 77 ಕ್ಷೇತ್ರಗಳಲ್ಲಿ ಬಿಜೆಪಿ-10, ಕಾಂಗ್ರೆಸ್-48, ಜೆಡಿಎಸ್-19 ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ.

ಉಡುಪಿ: ಜಿಲ್ಲಾ ಪಂಚಾಯತ್‌ನ 26 ಕ್ಷೇತ್ರಗಳಲ್ಲಿ ಬಿಜೆಪಿ-20, ಕಾಂಗ್ರೆಸ್-6; ಮೂರು ತಾಲೂಕು ಪಂಚಾಯತ್‌ಗಳ 98 ಸ್ಥಾನಗಳ ಪೈಕಿ ಬಿಜೆಪಿ-72, ಕಾಂಗ್ರೆಸ್-26. ದಕ್ಷಿಣ ಕನ್ನಡ: ಜಿಲ್ಲಾ ಪಂಚಾಯತ್‌ನ 36 ಕ್ಷೇತ್ರಗಳಲ್ಲಿ ಬಿಜೆಪಿ-21, ಕಾಂಗ್ರೆಸ್-15; ಐದು ತಾಲೂಕು ಪಂಚಾಯತ್‌ಗಳ 136 ಸ್ಥಾನಗಳಲ್ಲಿ ಬಿಜೆಪಿ-70, ಕಾಂಗ್ರೆಸ್-66.

ಹಾಸನ: ಜಿಲ್ಲಾ ಪಂಚಾಯತ್‌ನ 40 ಕ್ಷೇತ್ರಗಳ ಪೈಕಿ ಬಿಜೆಪಿ-1, ಕಾಂಗ್ರೆಸ್-16, ಜೆಡಿಎಸ್-23; ಎಂಟು ತಾಲೂಕು ಪಂಚಾಯತ್‌ಗಳ 153 ಕ್ಷೇತ್ರಗಳ ಪೈಕಿ ಬಿಜೆಪಿ-6, ಕಾಂಗ್ರೆಸ್-56, ಜೆಡಿಎಸ್-87, ಪಕ್ಷೇತರ-3.
ಕೊಡಗು: ಜಿಲ್ಲಾ ಪಂಚಾಯತ್‌ನ 29 ಕ್ಷೇತ್ರಗಳ ಪೈಕಿ ಬಿಜೆಪಿ-18, ಕಾಂಗ್ರೆಸ್-10, ಜೆಡಿಎಸ್-1; ಮೂರು ತಾಲೂಕು ಪಂಚಾಯತ್‌ಗಳ 50 ಕ್ಷೇತ್ರಗಳ ಪೈಕಿ ಬಿಜೆಪಿ-36, ಕಾಂಗ್ರೆಸ್-11, ಜೆಡಿಎಸ್-3.

ಮೈಸೂರು: ಜಿಲ್ಲಾ ಪಂಚಾಯತ್‌ನ 49 ಕ್ಷೇತ್ರಗಳ ಪೈಕಿ ಬಿಜೆಪಿ-8, ಕಾಂಗ್ರೆಸ್-22, ಜೆಡಿಎಸ್-18; ಏಳು ತಾಲೂಕು ಪಂಚಾಯತ್‌ಗಳ 187 ಕ್ಷೇತ್ರಗಳ ಪೈಕಿ ಬಿಜೆಪಿ-31, ಕಾಂಗ್ರೆಸ್-83, ಜೆಡಿಎಸ್-69, ಪಕ್ಷೇತರ-4.

 ಮಂಡ್ಯ: ಜಿಲ್ಲಾ ಪಂಚಾಯತ್‌ನ 41 ಕ್ಷೇತ್ರಗಳ ಪೈಕಿ ಕಾಂಗ್ರೆಸ್-13, ಜೆಡಿಎಸ್-27 ಹಾಗೂ ಪಕ್ಷೇತರ-1; ಏಳು ತಾಲೂಕು ಪಂಚಾಯತ್‌ಗಳ 155 ಕ್ಷೇತ್ರಗಳ ಪೈಕಿ ಬಿಜೆಪಿ-3, ಕಾಂಗ್ರೆಸ್-51, ಜೆಡಿಎಸ್-92, ಪಕ್ಷೇತರ-6, ಇತರೆ-3.

ಕೋಲಾರ: ಜಿಲ್ಲಾ ಪಂಚಾಯತ್‌ನ 30 ಕ್ಷೇತ್ರಗಳ ಪೈಕಿ ಬಿಜೆಪಿ-5, ಕಾಂಗ್ರೆಸ್-15, ಜೆಡಿಎಸ್-10; ಐದು ತಾಲೂಕು ಪಂಚಾಯತ್‌ಗಳ 111 ಕ್ಷೇತ್ರಗಳ ಪೈಕಿ ಬಿಜೆಪಿ-17, ಕಾಂಗ್ರೆಸ್-43, ಜೆಡಿಎಸ್-48, ಪಕ್ಷೇತರ-3.

ಉತ್ತರ ಕನ್ನಡ: ಜಿಲ್ಲಾ ಪಂಚಾಯತ್‌ನ 39 ಕ್ಷೇತ್ರಗಳಲ್ಲಿ ಬಿಜೆಪಿ-11, ಕಾಂಗ್ರೆಸ್-23, ಜೆಡಿಎಸ್-2, ಪಕ್ಷೇತರ-3; 11 ತಾಲೂಕು ಪಂಚಾಯತ್‌ಗಳ 130 ಕ್ಷೇತ್ರಗಳಲ್ಲಿ ಬಿಜೆಪಿ-37, ಕಾಂಗ್ರೆಸ್-65, ಜೆಡಿಎಸ್-11, ಪಕ್ಷೇತರರು-17.

ಚಿಕ್ಕಬಳ್ಳಾಪುರ: ಜಿಲ್ಲಾ ಪಂಚಾಯತ್‌ನ 28 ಕ್ಷೇತ್ರಗಳಲ್ಲಿ ಬಿಜೆಪಿ-1, ಕಾಂಗ್ರೆಸ್-21, ಜೆಡಿಎಸ್-5, ಸಿಪಿಎಂ-1; ಆರು ತಾಲೂಕು ಪಂಚಾಯತ್‌ಗಳ 108 ಸ್ಥಾನಗಳಲ್ಲಿ ಬಿಜೆಪಿ-1, ಕಾಂಗ್ರೆಸ್-74, ಜೆಡಿಎಸ್-22, ಸಿಪಿಎಂ-6, ಪಕ್ಷೇತರರು ಐದು ಮಂದಿ ವಿಜಯಿಯಾಗಿದ್ದಾರೆ.

 ಬೀದರ್: ಜಿಲ್ಲಾ ಪಂಚಾಯತ್‌ನ 34 ಕ್ಷೇತ್ರಗಳ ಪೈಕಿ ಬಿಜೆಪಿ-11, ಕಾಂಗ್ರೆಸ್-19, ಜೆಡಿಎಸ್-3 ಹಾಗೂ ಪಕ್ಷೇತರ-1; ಐದು ತಾಲೂಕು ಪಂಚಾಯತ್‌ಗಳ 131 ಕ್ಷೇತ್ರಗಳ ಪೈಕಿ ಬಿಜೆಪಿ-34, ಕಾಂಗ್ರೆಸ್-62, ಜೆಡಿಎಸ್-18, ಬಿಎಸ್ಪಿ-3, ಪಕ್ಷೇತರ-13, ಇತರೆ-1.

ಕಲಬುರಗಿ: ಜಿಲ್ಲಾ ಪಂಚಾಯತ್‌ನ 47 ಕ್ಷೇತ್ರಗಳ ಪೈಕಿ ಬಿಜೆಪಿ-24, ಕಾಂಗ್ರೆಸ್-21, ಜೆಡಿಯು-1; ಏಳು ತಾಲೂಕು ಪಂಚಾಯತ್‌ಗಳ 179 ಕ್ಷೇತ್ರಗಳ ಪೈಕಿ ಬಿಜೆಪಿ-80, ಕಾಂಗ್ರೆಸ್-78, ಜೆಡಿಎಸ್-5, ಪಕ್ಷೇತರ-7, ಜೆಡಿಯು-9.

ವಿಜಯಪುರ: ಜಿಲ್ಲಾ ಪಂಚಾಯತ್‌ನ 42 ಕ್ಷೇತ್ರಗಳ ಪೈಕಿ ಬಿಜೆಪಿ-20, ಕಾಂಗ್ರೆಸ್-17, ಜೆಡಿಎಸ್-3, ಪಕ್ಷೇತರ-1; ಐದು ತಾಲೂಕು ಪಂಚಾಯತ್‌ಗಳ 159 ಕ್ಷೇತ್ರಗಳ ಪೈಕಿ ಬಿಜೆಪಿ-65, ಕಾಂಗ್ರೆಸ್-71, ಜೆಡಿಎಸ್-12, ಬಿಎಸ್ಪಿ-1, ಪಕ್ಷೇತರ-10.

 ರಾಯಚೂರು: ಜಿಲ್ಲಾ ಪಂಚಾಯತ್‌ನ 38 ಕ್ಷೇತ್ರಗಳ ಪೈಕಿ ಬಿಜೆಪಿ-17, ಕಾಂಗ್ರೆಸ್-12, ಜೆಡಿಎಸ್-9; ಐದು ತಾಲೂಕು ಪಂಚಾಯತ್‌ಗಳು 142 ಕ್ಷೇತ್ರಗಳ ಪೈಕಿ ಬಿಜೆಪಿ-54, ಕಾಂಗ್ರೆಸ್-52, ಜೆಡಿಎಸ್-29, ಪಕ್ಷೇತರರು-7.
 ಶಿವಮೊಗ್ಗ: ಜಿಲ್ಲಾ ಪಂಚಾಯತ್‌ನ 31 ಕ್ಷೇತ್ರಗಳ ಪೈಕಿ ಬಿಜೆಪಿ-15, ಕಾಂಗ್ರೆಸ್-8, ಜೆಡಿಎಸ್-7, ಪಕ್ಷೇತರ-1; ಏಳು ತಾಲೂಕು ಪಂಚಾಯತ್‌ಗಳ 97 ಕ್ಷೇತ್ರಗಳ ಪೈಕಿ ಬಿಜೆಪಿ-47, ಕಾಂಗ್ರೆಸ್-31, ಜೆಡಿಎಸ್-13, ಪಕ್ಷೇತರ-6.
 ಚಿತ್ರದುರ್ಗ: ಜಿಲ್ಲಾ ಪಂಚಾಯತ್‌ನ 37 ಕ್ಷೇತ್ರಗಳ ಪೈಕಿ ಬಿಜೆಪಿ-10, ಕಾಂಗ್ರೆಸ್-23, ಜೆಡಿಎಸ್-2, ಪಕ್ಷೇತರ-2; ಆರು ತಾಲೂಕು ಪಂಚಾಯತ್‌ಗಳ 136 ಕ್ಷೇತ್ರಗಳ ಪೈಕಿ ಬಿಜೆಪಿ-45, ಕಾಂಗ್ರೆಸ್-70, ಜೆಡಿಎಸ್-16, ಪಕ್ಷೇತರ-5.

 ಚಿಕ್ಕಮಗಳೂರು: ಜಿಲ್ಲಾ ಪಂಚಾಯತ್‌ನ 33 ಕ್ಷೇತ್ರಗಳ ಪೈಕಿ ಬಿಜೆಪಿ-19, ಕಾಂಗ್ರೆಸ್-12, ಜೆಡಿಎಸ್-2; ಏಳು ತಾಲೂಕು ಪಂಚಾಯತ್‌ಗಳ 107 ಕ್ಷೇತ್ರಗಳ ಪೈಕಿ ಬಿಜೆಪಿ-61, ಕಾಂಗ್ರೆಸ್-33, ಜೆಡಿಎಸ್-10, ಪಕ್ಷೇತರ-3.

 ಯಾದಗಿರಿ: ಜಿಲ್ಲಾ ಪಂಚಾಯತ್‌ನ 24 ಕ್ಷೇತ್ರಗಳಲ್ಲಿ ಬಿಜೆಪಿ-11, ಕಾಂಗ್ರೆಸ್-12, ಜೆಡಿಎಸ್-1; ಮೂರು ತಾಲೂಕು ಪಂಚಾಯತ್‌ಗಳ 94 ಕ್ಷೇತ್ರಗಳಲ್ಲಿ ಬಿಜೆಪಿ-39, ಕಾಂಗ್ರೆಸ್-44, ಜೆಡಿಎಸ್-8, ಪಕ್ಷೇತರರು-3.

ಬಾಗಲಕೋಟೆ: ಜಿಲ್ಲಾ ಪಂಚಾಯತ್‌ನ 36 ಕ್ಷೇತ್ರಗಳಲ್ಲಿ ಬಿಜೆಪಿ-18, ಕಾಂಗ್ರೆಸ್-17, ಪಕ್ಷೇತರ-1; ಆರು ತಾಲೂಕು ಪಂಚಾಯತ್‌ಗಳ 130 ಕ್ಷೇತ್ರಗಳಲ್ಲಿ ಬಿಜೆಪಿ-56, ಕಾಂಗ್ರೆಸ್-70, ಜೆಡಿಎಸ್-1, ಪಕ್ಷೇತರರು-3.

ಕೊಪ್ಪಳ: 29 ಜಿಲ್ಲಾ ಪಂಚಾಯತ್ ಕ್ಷೇತ್ರಗಳಲ್ಲಿ ಬಿಜೆಪಿ-11, ಕಾಂಗ್ರೆಸ್-17, ಪಕ್ಷೇತರ-1; ನಾಲ್ಕು ತಾಲೂಕು ಪಂಚಾಯತ್‌ಗಳ 109 ಕ್ಷೇತ್ರಗಳಲ್ಲಿ ಬಿಜೆಪಿ-40, ಕಾಂಗ್ರೆಸ್-64, ಜೆಡಿಎಸ್-1, ಪಕ್ಷೇತರ-4.

ಗದಗ: ಜಿಲ್ಲಾ ಪಂಚಾಯತ್‌ನ 19 ಕ್ಷೇತ್ರಗಳಲ್ಲಿ ಬಿಜೆಪಿ-8, ಕಾಂಗ್ರೆಸ್-11; ಐದು ತಾಲೂಕು ಪಂಚಾಯತ್‌ಗಳ 75 ಕ್ಷೇತ್ರಗಳಲ್ಲಿ ಬಿಜೆಪಿ-35, ಕಾಂಗ್ರೆಸ್-40.

ಧಾರವಾಡ: ಜಿಲ್ಲಾ ಪಂಚಾಯತ್‌ನ 22 ಕ್ಷೇತ್ರಗಳಲ್ಲಿ ಬಿಜೆಪಿ-11, ಕಾಂಗ್ರೆಸ್-10, ಪಕ್ಷೇತರ-1; ಐದು ತಾಲೂಕು ಪಂಚಾಯತ್‌ನ 82 ಕ್ಷೇತ್ರಗಳಲ್ಲಿ ಬಿಜೆಪಿ-36, ಕಾಂಗ್ರೆಸ್-29, ಜೆಡಿಎಸ್-7, ಪಕ್ಷೇತರ-10.

 ಹಾವೇರಿ: ಜಿಲ್ಲಾ ಪಂಚಾಯತ್‌ನ 34 ಕ್ಷೇತ್ರಗಳಲ್ಲಿ ಬಿಜೆಪಿ-12, ಕಾಂಗ್ರೆಸ್-22; ಏಳು ತಾಲೂಕು ಪಂಚಾಯತ್‌ಗಳ 128 ಕ್ಷೇತ್ರಗಳಲ್ಲಿ ಬಿಜೆಪಿ-46, ಕಾಂಗ್ರೆಸ್-76, ಪಕ್ಷೇತರ-6.

ಬಳ್ಳಾರಿ: ಜಿಲ್ಲಾ ಪಂಚಾಯತ್‌ನ 40 ಕ್ಷೇತ್ರಗಳಲ್ಲಿ ಬಿಜೆಪಿ-21, ಕಾಂಗ್ರೆಸ್-17, ಪಕ್ಷೇತರ-2; ಏಳು ತಾಲೂಕು ಪಂಚಾಯತ್‌ಗಳ 150 ಸ್ಥಾನಗಳಲ್ಲಿ ಬಿಜೆಪಿ-83, ಕಾಂಗ್ರೆಸ್-57, ಜೆಡಿಎಸ್-5, ಪಕ್ಷೇತರರು ಐದು ಮಂದಿ ಗೆಲುವು ಸಾಧಿಸಿದ್ದಾರೆ.

 ದಾವಣಗೆರೆ: ಜಿಲ್ಲಾ ಪಂಚಾಯತ್‌ನ 36 ಕ್ಷೇತ್ರಗಳಲ್ಲಿ ಬಿಜೆಪಿ-22, ಕಾಂಗ್ರೆಸ್-8, ಜೆಡಿಎಸ್-2, ಪಕ್ಷೇತರರು-4; ಆರು ತಾಲೂಕು ಪಂಚಾಯತ್‌ಗಳ 133 ಸ್ಥಾನಗಳ ಪೈಕಿ ಬಿಜೆಪಿ-76, ಕಾಂಗ್ರೆಸ್-43, ಜೆಡಿಎಸ್-8, ಪಕ್ಷೇತರರು-6 ಮಂದಿ ಗೆಲುವಿನ ನಗೆ ಬೀರಿದ್ದಾರೆ.

ತುಮಕೂರು: ಜಿಲ್ಲಾ ಪಂಚಾಯತ್‌ನ 57 ಕ್ಷೇತ್ರಗಳಲ್ಲಿ ಬಿಜೆಪಿ-19, ಕಾಂಗ್ರೆಸ್-23, ಜೆಡಿಎಸ್-14, ಪಕ್ಷೇತರ-1; ಹತ್ತು ತಾಲೂಕು ಪಂಚಾಯತ್‌ಗಳ 215 ಸ್ಥಾನಗಳಲ್ಲಿ ಬಿಜೆಪಿ-56, ಕಾಂಗ್ರೆಸ್-74, ಜೆಡಿಎಸ್-81, ಪಕ್ಷೇತರ-4 ಮಂದಿ ಗೆಲುವು ಸಾಧಿಸಿದ್ದಾರೆ.

ಬೆಳಗಾವಿ: ಜಿಲ್ಲಾ ಪಂಚಾಯತ್‌ನ 90 ಕ್ಷೇತ್ರಗಳಲ್ಲಿ ಬಿಜೆಪಿ-39, ಕಾಂಗ್ರೆಸ್-43, ಜೆಡಿಎಸ್-2, ಪಕ್ಷೇತರರು-6; ಹತ್ತು ತಾಲೂಕು ಪಂಚಾಯತ್‌ಗಳ 345 ಸ್ಥಾನಗಳ ಪೈಕಿ ಬಿಜೆಪಿ-145, ಕಾಂಗ್ರೆಸ್-144, ಜೆಡಿಎಸ್-9, ಪಕ್ಷೇತರರು 45 ಮಂದಿ ಗೆದ್ದಿದ್ದಾರೆ.

ಚಾಮರಾಜನಗರ: ಜಿಲ್ಲಾ ಪಂಚಾಯತ್‌ನ 23 ಕ್ಷೇತ್ರಗಳ ಪೈಕಿ ಬಿಜೆಪಿ-9, ಕಾಂಗ್ರೆಸ್-14; ನಾಲ್ಕು ತಾಲೂಕು ಪಂಚಾಯತ್‌ಗಳ 89 ಕ್ಷೇತ್ರಗಳ ಪೈಕಿ ಬಿಜೆಪಿ-34, ಕಾಂಗ್ರೆಸ್-50, ಜೆಡಿಎಸ್-1, ಬಿಎಸ್ಪಿ-1, ಪಕ್ಷೇತರ-2.

...................

ಕಿಂಗ್‌ಮೇಕರ್ ಯಾರು?

ಅತಂತ್ರ ಜಿಲ್ಲಾ ಪಂಚಾಯತ್‌ಗಳು ಬಾಗಲಕೋಟೆ, ಬೆಂಗಳೂರುನಗರ, ಬೆಳಗಾವಿ, ವಿಜಯಪುರ, ಧಾರವಾಡ, ಕೋಲಾರ, ಮೈಸೂರು, ರಾಯಚೂರು, ಶಿವಮೊಗ್ಗ, ತುಮಕೂರು ಹಾಗೂ ಯಾದಗಿರಿ.

ಕಾಂಗ್ರೆಸ್: ಬೆಂಗಳೂರು ಗ್ರಾಮಾಂತರ, ಬೀದರ್, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ಗದಗ, ಹಾವೇರಿ, ಕೊಪ್ಪಳ, ರಾಮನಗರ, ಉತ್ತರಕನ್ನಡ.

ಬಿಜೆಪಿ: ಬಳ್ಳಾರಿ, ಚಿಕ್ಕಮಗಳೂರು, ದಕ್ಷಿಣ ಕನ್ನಡ, ದಾವಣಗೆರೆ, ಕೊಡಗು, ಉಡುಪಿ ಹಾಗೂ ಕಲಬುರಗಿ.

 ಜೆಡಿಎಸ್: ಹಾಸನ ಹಾಗೂ ಮಂಡ್ಯ.

ಜೆಡಿಎಸ್ ‘ಕಿಂಗ್‌ಮೇಕರ್’
ಬೆಂಗಳೂರು ನಗರ, ಕೋಲಾರ, ಮೈಸೂರು, ರಾಯಚೂರು, ತುಮಕೂರು ಹಾಗೂ ಯಾದಗಿರಿ.

ಪಕ್ಷೇತರರ ಅಗತ್ಯ
ಬಾಗಲಕೋಟೆ, ಬೆಳಗಾವಿ, ವಿಜಯಪುರ, ಧಾರವಾಡ ಹಾಗೂ ಶಿವಮೊಗ್ಗ.

..............

ಕುಮಾರಸ್ವಾಮಿಗೆ ತೀವ್ರ ಮುಖಭಂಗ

ಸ್ವಕ್ಷೇತ್ರ ರಾಮನಗರದಲ್ಲಿ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿಗೆ ತೀವ್ರ ಮುಖಭಂಗವಾಗಿದ್ದು, ಇಂಧನ ಸಚಿವ ಡಿ.ಕೆ.ಶಿವಕುಮಾರ್ ಮತ್ತೊಮ್ಮೆ ತಮ್ಮ ಪ್ರಾಬಲ್ಯ ಮೆರೆದಿದ್ದಾರೆ. ರಾಮನಗರ ಜಿಲ್ಲಾ ಪಂಚಾಯತ್‌ನ 22 ಕ್ಷೇತ್ರಗಳಲ್ಲಿ ಕಾಂಗ್ರೆಸ್-16, ಜೆಡಿಎಸ್-6, ನಾಲ್ಕು ತಾಲೂಕು ಪಂಚಾಯತ್‌ಗಳ 81 ಸ್ಥಾನಗಳಲ್ಲಿ ಕಾಂಗ್ರೆಸ್-54, ಜೆಡಿಎಸ್-27 ಗೆಲವು ಸಾಧಿಸಿದ್ದರೆ, ಬಿಜೆಪಿ ಖಾತೆ ತೆರೆಯುವಲ್ಲಿಯೂ ವಿಫಲವಾಗಿದೆ.


.............

ನಿರೀಕ್ಷೆಯಂತೆ ಫಲಿತಾಂಶ

ರಾಜ್ಯ ಸರಕಾರದ ಕಾರ್ಯಕ್ರಮಗಳ ಆಧಾರದ ಮೇಲೆ ಜಿಪಂ-ತಾಪಂ ಚುನಾವಣಾ ಫಲಿತಾಂಶ ಬಂದಿದೆ. 10 ಜಿಪಂಗಳಲ್ಲಿ ಸ್ವಂತ ಶಕ್ತಿಯಿಂದ ಕಾಂಗ್ರೆಸ್ ಅಧಿಕಾರದ ಚುಕ್ಕಾಣಿ ಹಿಡಿಯಲಿದೆ. ಕೆಲವು ಕಡೆ ಇತರ ಪಕ್ಷಗಳೊಂದಿಗೆ ಹೊಂದಾಣಿಕೆ ಮಾಡಿಕೊಂಡರೆ ಹೆಚ್ಚು ಜಿಲ್ಲಾ ಪಂಚಾಯತ್‌ಗಳಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ.
- ಡಾ.ಜಿ.ಪರಮೇಶ್ವರ್, ಕೆಪಿಸಿಸಿ ಅಧ್ಯಕ್ಷ

..........

ತಟ್ಟಿದ ಕಳಸಾ ಬಂಡೂರಿ ಬಿಸಿ

ಗದಗ, ಫೆ.23: ಕಳಸಾ ಬಂಡೂರಿ ಹೋರಾಟದ ಬಿಸಿ ಪಂಚಾಯತ್ ಚುನಾವಣೆಗೂ ತಟ್ಟಿದ್ದು, ಗದಗ ಜಿಲ್ಲೆಯಲ್ಲಿ ಗಣನೀಯ ಪ್ರಮಾಣದಲ್ಲಿ ನೋಟಾ ಮತಗಳು ಚಲಾವಣೆಯಾಗಿವೆ. ಆ ಮೂಲಕ ಹೈದರಾಬಾದ್ ಕರ್ನಾಟಕದ ಜನರು ರಾಜಕೀಯ ನಾಯಕರಿಗೆ ಎಚ್ಚರಿಕೆ ನೀಡಿದ್ದಾರೆ.

ಕಳಸ ಬಂಡೂರಿ ಹೋರಾಟ ಸಮಿತಿಯ ರೈತ ನಾಯಕರು ನೋಟಾ ಮತ ಚಲಾವಣೆಗೆ ಜನಜಾಗೃತಿ ಮೂಡಿಸಿದ ಹಿನ್ನಲೆಯಲ್ಲಿ ಗದಗ ಜಿಲ್ಲೆಯಲ್ಲಿ ಸುಮಾರು 10,024 ಅತ್ಯಧಿಕ ನೋಟಾ ಮತ ಚಲಾವಣೆಗೊಂಡಿದೆ. ಗದಗ ತಾಲೂಕು ವ್ಯಾಪ್ತಿಯಲ್ಲಿ 1529, ನರಗುಂದ ತಾಲೂಕಿನಲ್ಲಿ 2582,ರೋಣ ತಾಲೂಕಿನಲ್ಲಿ 1663,ಮುಂಡರಗಿ 1,778 ಹಾಗೂ ಶಿರಹಟ್ಟಿ ತಾಲೂಕಿನಲ್ಲಿ 2,472 ನೋಟಾ ಮತ ಚಲಾವಣೆಯಾಗಿದೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X