Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ನಿಮ್ಮ ಅಂಕಣ
  4. ಅಸಮ್ಮತಿಯನ್ನು ಬಗ್ಗುಬಡಿಯುವ ಪ್ರಯತ್ನ

ಅಸಮ್ಮತಿಯನ್ನು ಬಗ್ಗುಬಡಿಯುವ ಪ್ರಯತ್ನ

ವಾರ್ತಾಭಾರತಿವಾರ್ತಾಭಾರತಿ23 Feb 2016 11:56 PM IST
share

ಅಸಮ್ಮತಿಯ ಧ್ವನಿಯನ್ನು ಅಡಗಿಸುವ ಹಿಂದೂ ಬಲಪಂಥೀಯರ ಪ್ರಯತ್ನದ ವಿಚಾರವಾಗಿ, ವಾಕ್ ಸ್ವಾತಂತ್ರ್ಯದ ಪರ ವಾದಿಸುವವರು ಮತ್ತು ಪ್ರಧಾನಿ ನರೇಂದ್ರ ಮೋದಿ ಸರಕಾರ ಹಾಗೂ ಅದರ ರಾಜಕೀಯ ಮಿತ್ರರ ನಡುವೆ ಹಿಂಸಾತ್ಮಕ ಘರ್ಷಣೆಯಲ್ಲಿ ಭಾರತ ನರಳುತ್ತಿದೆ.ಈ ಸಂಘರ್ಷವು ಮೋದಿ ಆಡಳಿತದ ಕುರಿತ ಗಂಭೀರ ಕಳವಳವನ್ನು ಮುಂದಿಡುತ್ತದೆ ಮತ್ತು ಆರ್ಥಿಕ ಸುಧಾರಣೆಗಳಿಗೆ ಸಂಬಂಧಿಸಿ ಸಂಸತ್ತಿನಲ್ಲಿ ಪ್ರಗತಿಯನ್ನೂ ಇದು ತಡೆಯುವ ಸಾಧ್ಯತೆಯಿದೆ.ಈ ಬಿಕ್ಕಟ್ಟಿನ ಮೂಲ ಜವಾಹರಲಾಲ್ ನೆಹರೂ ವಿಶ್ವವಿದ್ಯಾನಿಲಯದ ವಿದ್ಯಾರ್ಥಿ ಸಂಘಟನೆಯ ಅಧ್ಯಕ್ಷ ಕನ್ಹಯ್ಯಾ ಕುಮಾರ್ ಅವರನ್ನು ದಿಲ್ಲಿ ಪೊಲೀಸರು ದೇಶದ್ರೋಹದ ಆರೋಪದಲ್ಲಿ ಬಂಧಿಸಿರುವುದೇ ಆಗಿದೆ.2013ರಲ್ಲಿ ಮುಹಮ್ಮದ್ ಅಫ್ಝಲ್‌ನನ್ನು ನೇಣಿಗೇರಿಸಿದ ದಿನದ ನೆನಪಿಗಾಗಿ ಫೆ.9ರಂದು ಕ್ಯಾಂಪಸ್ಸಿನಲ್ಲಿ ನಡೆದ ಮೆರವಣಿಗೆಯ ನಂತರ ಕನ್ಹಯ್ಯಿ ಕುಮಾರ್ ಬಂಧನವಾಗಿತ್ತು. ಪಾಕಿಸ್ತಾನಿ ಮೂಲದ ಇಸ್ಲಾಮಿಕ್ ಸಂಘಟನೆಯು 2011 ರಲ್ಲಿ ಭಾರತೀಯ ಸಂಸತ್ತಿನ ಮೇಲೆ ನಡೆಸಿದ ದಾಳಿಯ ಹಿನ್ನೆಲೆಯಲ್ಲಿ ಅಫ್ಝಲ್ ಆರೋಪ ಸಾಬೀತಾಗಿ ನೇಣು ಶಿಕ್ಷೆಯಾಗಿತ್ತು. ಆದರೆ ಅಫ್ಝಲ್‌ವಿಚಾರಣೆ ಮತ್ತು ನೇಣು ವಿಧಿಸಿದ ವಿದ್ಯಮಾನವು ವಿವಾದಾತ್ಮಕವಾಗಿದೆ.

ಮೋದಿ ಅವರ ಭಾರತೀಯ ಜನತಾ ಪಕ್ಷದ ಅಂಗ ಸಂಸ್ಥೆಯಾಗಿರುವ ವಿದ್ಯಾರ್ಥಿ ಸಂಘಟನೆ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಮತ್ತು ಮೋದಿ ಸರಕಾರವು ನೇಮಿಸಿರುವ ವಿಶ್ವವಿದ್ಯಾನಿಲಯದ ಹೊಸ ನಾಯಕತ್ವವು ಕ್ಯಾಂಪಸ್ ಒಳಗೆ ಪೊಲೀಸರನ್ನು ಕರೆಸಿ ಕನ್ಹಯ್ಯಾ ಕುಮಾರ್‌ನನ್ನು ಬಂಧಿಸುವಂತೆ ಮಾಡಿದ್ದಾರೆ. ಕಳೆದ ವಾರ ಕನ್ಹಯ್ಯಾ ಕುಮಾರ್ ವಿಚಾರಣೆ ನಡೆದ ಹೊಸದಿಲ್ಲಿಯ ನ್ಯಾಯಾಲಯದ ಸನ್ನಿವೇಶ ಆತಂಕಕಾರಿಯಾಗಿದ್ದು, ವಕೀಲರು ಮತ್ತು ಬಿಜೆಪಿಯ ಬೆಂಬಲಿಗರು ಭಾರತ ಮಾತೆಗೆ ಜೈ ಮತ್ತು ದೇಶದ್ರೋಹಿಗಳು ಭಾರತ ಬಿಟ್ಟು ತೊಲಗಿ ಮೊದಲಾದ ಘೋಷಣೆಗಳನ್ನು ಕೂಗಿ ಪತ್ರಕರ್ತರು ಮತ್ತು ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆಸಿದರು. ಪೊಲೀಸರು ಮಧ್ಯಪ್ರವೇಶಿಸಲು ನಿರಾಕರಿಸಿದರು. ಬಿಜೆಪಿ ಸದಸ್ಯ ಓಂ ಪ್ರಕಾಶ್ ಶರ್ಮಾ ವಿದ್ಯಾರ್ಥಿಯ ಮೇಲೆ ಹಲ್ಲೆ ಮಾಡುತ್ತಿರುವುದನ್ನು ಕ್ಯಾಮರಾದಲ್ಲಿ ದಾಖಲಿಸಲಾಗಿದೆ. ‘ಹಲ್ಲೆ ಮಾಡುವುದರಲ್ಲಿ ತಪ್ಪಿಲ್ಲ ಅಥವಾ ಪಾಕಿಸ್ತಾನದ ವಿರುದ್ಧ ಘೋಷಣೆ ಕೂಗುವವರನ್ನು ಕೊಲೆ ಮಾಡುವುದರಲ್ಲೂ ತಪ್ಪಿಲ್ಲ’ ಎಂದು ಈ ಬಿಜೆಪಿ ಶಾಸಕ ಹೇಳಿ ವಿದ್ಯಾರ್ಥಿಗಳು ಅಂತಹ ತಪ್ಪು ಮಾಡಿದ್ದಾರೆಂದು ಆರೋಪಿಸಿದ್ದಾರೆ.


ಹೀಗೆ ಗುಂಪಿನಲ್ಲಿ ಹಲ್ಲೆ ನಡೆಸುವ ಮನಸ್ಥಿತಿಯ ಜವಾಬ್ದಾರಿಯು ಮೋದಿ ಸರಕಾರದ ಮೇಲೂ ಇದೆ. ಕನ್ಹಯ್ಯಾ ಕುಮಾರ್ ಬಂಧನದ ನಂತರ ಗೃಹಸಚಿವ ರಾಜ್‌ನಾಥ್ ಸಿಂಗ್ ಮಾತನಾಡಿ, ಯಾರೇ ಆದರೂ ಭಾರತ ವಿರೋಧಿ ಘೋಷಣೆಗಳನ್ನು ಕೂಗಿದಲ್ಲಿ ಮತ್ತು ರಾಷ್ಟ್ರದ ಏಕತೆ ಮತ್ತು ಸಾರ್ವಭೌಮತೆಯನ್ನು ಪ್ರಶ್ನಿಸಿದಲ್ಲಿ, ಅವರನ್ನು ಸುಮ್ಮನೆ ಬಿಡಲಾಗುವುದಿಲ್ಲ ಎಂದು ಹೇಳಿದ್ದಾರೆ. ಭಾರತದ ಸುಪ್ರೀಂಕೋರ್ಟ್ ದೇಶದ್ರೋಹಕ್ಕೆ ಸಂಬಂಧಿಸಿ ವಸಾಹತುಶಾಹಿ ಸಂದರ್ಭದ ಕಾನೂನಿನ ವ್ಯಾಪ್ತಿಯನ್ನು ಮಿತಿಗೊಳಿಸಿದ್ದು, ಅನಿವಾರ್ಯ ಕಾನೂನು ವಿರೋಧಿ ಕೃತ್ಯಕ್ಕೆ ಪ್ರಚೋದನೆ ಮಾತ್ರ ದೇಶದ್ರೋಹವಾಗಲಿದೆ ಎಂದು ಹೇಳಿದೆ. ಆದರೆ ರಾಜ್‌ನಾಥ್ ಈ ವಾಸ್ತವವನ್ನು ತಿಳಿದುಕೊಂಡಿಲ್ಲ. ಪ್ರಜಾಪ್ರಭುತ್ವದಲ್ಲಿ ಅಸಮ್ಮತಿಯನ್ನು ತೋರಿಸುವುದು ಪ್ರಮುಖ ಹಕ್ಕೇ ವಿನಾ ಅಪರಾಧವಲ್ಲ ಎನ್ನುವುದನ್ನು ಮರೆತಿದ್ದಾರೆ.ನಡುವೆ ನೂರಾರು ಪತ್ರಕ ರ್ತರು ಕಳೆದ ವಾರ ಪ್ರತಿಭಟನಾತ್ಮ ಕವಾಗಿ ಭಾರತೀಯ ಪ್ರೆಸ್‌ಕ್ಲಬ್ ನಿಂದ ಹೊಸದಿಲ್ಲಿಯ ಸುಪ್ರೀಂ ಕೋರ್ಟಿಗೆ ಮೆರವಣಿಗೆ ಹೋಗಿ ದ್ದಾರೆ. ಇತ್ತೀಚೆಗಿನ ದಿನಗಳಲ್ಲಿ ಭಾರತದಾದ್ಯಂತ ವಿಶ್ವವಿದ್ಯಾನಿಲಯ ಗಳಲ್ಲಿ ಸಾವಿರಾರು ವಿದ್ಯಾರ್ಥಿಗಳು ಮತ್ತು ಸಿಬ್ಬಂದಿ ಪ್ರತಿಭಟನೆ ನಡೆಸುತ್ತಿ ದ್ದಾರೆ. ತಮ್ಮ ಪ್ರಜಾಸತ್ತಾತ್ಮಕ ಹಕ್ಕುಗಳನ್ನು ಬಳಸಿಕೊಳ್ಳುವುದಕ್ಕೆ ಸರಕಾರ ಬೆದರಿಕೆ ಹಾಕುತ್ತಿರು ವುದರ ವಿರುದ್ಧ ಧ್ವನಿ ಎತ್ತುವುದು ಭಾರತೀಯ ನಾಗರಿಕರ ಹಕ್ಕು. ಮೋದಿ ತನ್ನ ಸಚಿವರು ಮತ್ತು ಪಕ್ಷಕ್ಕೆ ಲಗಾಮು ಹಾಕಬೇಕು, ಮತ್ತು ಈಗಿನ ಬಿಕ್ಕಟ್ಟನ್ನು ತಣ್ಣಗಾಗಿಸಬೇಕು. ಇಲ್ಲದಿದ್ದರೆ ದೇಶದಆರ್ಥಿಕ ಪ್ರಗತಿ ಮತ್ತು ಭಾರತದ ಪ್ರಜಾಪ್ರಭುತ್ವ ಎರಡೂ ನಾಶವಾಗುವ ಅಪಾಯವಿದೆ ಕನ್ಹಯ್ಯೆ ಕುಮಾರ್ ವಿರುದ್ಧದ ದೇಶದ್ರೋಹದ ಆರೋಪವನ್ನು ತೆಗೆದುಹಾಕಬೇಕು. ಹೊಸ ದಿಲ್ಲಿಯ ಸೆಂಟರ್ ಫಾರ್ ಪಾಲಿಸಿ ರೀಸರ್ಚ್ ಸಂಸ್ಥೆಯ ಅಧ್ಯಕ್ಷ ಪ್ರತಾಪ್ ಭಾನು ಮೆಹ್ತಾ ಇತ್ತೀಚೆಗಿನ ತನ್ನ ಲೇಖನದಲ್ಲಿ ಎಚ್ಚರಿಸು ವಂತೆ, ಮೋದಿ ಸರಕಾರದ ಸದಸ್ಯರು ಪ್ರಜಾಪ್ರಭುತ್ವಕ್ಕೆ ಬೆದರಿಕೆ ಒಡ್ಡಿದ್ದಾರೆ, ಇದೇ ದೊಡ್ಡ ದೇಶವಿರೋಧಿ ಕೃತ್ಯ ಆಗಿದೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X