ಕೇಂದ್ರ ಸರಕಾರದ ನೀತಿಯಿಂದ ಬಡವನ ಹೊಟ್ಟೆಗೆ ಕಲ್ಲು ಬಿದ್ದಿದೆ!
ಮಾನ್ಯರೆ,ವಾಹರಲಾಲ್ ನೆಹರೂ ವಿಶ್ವ ವಿದ್ಯಾನಿಲಯದಲ್ಲಿ (ಕನ್ಹಯ್ಯಾ ಕುಮಾರ್ ಬಿಟ್ಟು) ಬೇರೆ ಕೆಲವು ವಿದ್ಯಾರ್ಥಿಗಳು ಅಫ್ಝಲ್ ಗುರು ಜಿಂದಾಬಾದ್ ಭಾರತ್ ಮುರ್ದಾಬಾದ್ ಎಂದು ಕೂಗು ಹಾಕಿದ್ದು ದೇಶದ್ರೋಹ ನಿಜ. ಆದರೆ ಇದು ಕೇವಲ ಬಾಯಿ ಮಾತಿನ ದೇಶ ದ್ರೋಹ. ಆದರೆ ಬಿಜೆಪಿಯ ಅಮಿತ್ ಶಾ ರ ಗುಜರಾತಿ ಮತ್ತು ಮಾರ್ವಾಡಿ ಜೈನ ವ್ಯಾಪಾರಿಗಳು ಬಾಯಿ ಮಾತಿನ ಬದಲು ವೌನವಾಗಿದ್ದು ನೈಜ ಕೃತ್ಯದಿಂದ ದೇಶದ್ರೋಹ ಬಗೆಯುತ್ತಿದ್ದಾರೆ. ಆಫ್ರಿಕಾದ ಕೆಲವು ದೇಶಗಳಲ್ಲಿ ತೊಗರಿ ಬೇಳೆ ಮತ್ತು ಉದ್ದಿನ ಬೇಳೆ ಕೆಜಿಗೆ ಕೇವಲ ರೂ.40-45 ಮಾತ್ರ ಇದ್ದರೆ ಅದನ್ನು ಗುಜರಾತಿನ ಜೈನ ವ್ಯಾಪಾರಿಗಳು ಅಲ್ಲಿಂದ ಅದೇ ಕ್ರಯಕ್ಕೆ ಖರೀದಿಸಿ ತಂದು ಭಾರತದ ಬಡ ಜನರಿಗೆ ಕಿಲೋಗೆ ರೂ.225ರಂತೆ ಮಾರಿ ಗಳಿಸಿದ ಭರ್ಜರಿ ಲಾಭವನ್ನು ವಿದೇಶದಲ್ಲಿ ಅಡಗಿಸಿಡುವುದು ನಿಜವಾಗಿ ಮಹಾ ಭಯಂಕರ ದೇಶದ್ರೋಹ ಅಲ್ಲವೇ? ಅದೂ ಬಡವರಲ್ಲಿ ಅತಿ ಬಡವರ ಆಹಾರವಾದ ಬೇಳೆಕಾಳುಗಳನ್ನು ಈ ರೀತಿ ಕಳ್ಳ ದಾಸ್ತಾನು ಮಾಡಿ ವಿಪರೀತ ಲಾಭ ಮಾಡುವುದು ದೇಶದ್ರೋಹ ಮಾತ್ರವಲ್ಲ ಮಹಾಪಾಪ ಸಹ ಆಗಿದೆ. ದಿಲ್ಲಿಯ ಜೆಎನ್‌ಯು ವಿಶ್ವವಿದ್ಯಾನಿಲಯದಲ್ಲಿ ದೇಶದ್ರೋಹದ ಘೋಷಣೆ ಹಾಕಿದ್ದರಿಂದ ಯಾವುದೇ ಬಡವನ ಹೊಟ್ಟೆಗೆ ಕಲ್ಲು ಬಿದ್ದಿಲ್ಲ. ಆದರೆ ಬಿಜೆಪಿ ಯವರ ಚೇಲಾ ವ್ಯಾಪಾರಿಗಳ ಈ ಆಹಾರ ಧಾನ್ಯಗಳ ಕಳ್ಳ ದಾಸ್ತಾನುಗಳಿಂದ ಭಾರತದ ಪ್ರತಿಯೊಬ್ಬ ಬಡವನ ಹೊಟ್ಟೆಗೆ ಕಲ್ಲು ಬಿದ್ದಿದೆ, ಬಡವರ ಮಕ್ಕಳು ಅರೆ ಹೊಟ್ಟೆ ಮಲಗುವಂತಾಗಿದೆ. ಇದು ದಿಲ್ಲಿಯ ಗೂಂಡಾ ವಕೀಲರಿಗೆ ಕಾಣಿಸುತ್ತಿಲ್ಲ ಯಾಕೆ?
ರಿಸರ್ವ್ ಬ್ಯಾಂಕಿನ ಗವರ್ನರ್ ರಘುರಾಮ್ ರಾಜನ್ ಮಸಾಲೆ ದೋಸೆ ದುಬಾರಿಯಾಗಲು ಕಾವಲಿ ಕಾರಣವೆಂದು ಹೇಳಿದ್ದಾರೆ. ಆದರೆ ಅವರ ಗವರ್ನರ್-ಶಿಪ್ ಅವಧಿಯಲ್ಲೇ ದೋಸೆಗೆ ಬೇಕಾಗುವ ಅಕ್ಕಿ ಶೇ.50 ಹೆಚ್ಚು ದುಬಾರಿಯಾಗಿದ್ದರೆ, ಉದ್ದಿನ ಬೇಳೆ ಮೂರು ಪಟ್ಟು ಅಂದರೆ ಶೇ.300 ದುಬಾರಿಯಾಗಿದೆ. ಬಹುಶಃ ನಮ್ಮ ಆರ್‌ಬಿಐ ಗವರ್ನರ್ ರಾಜನ್ ಕೇವಲ ಪಿಝ್ಝಿ ಬರ್ಗರ್ ಮಾತ್ರ ತಿನ್ನುತ್ತಿರಬೇಕು. ಅದಕ್ಕಾಗಿ ದೋಸೆ ಮಾಡುವ ಕಾವಲಿಯ ತಂತ್ರಜ್ಞಾನದ ಉನ್ನತೀಕರಣ ಮಾಡಬೇಕೆಂದು ಅವರು ಸಲಹೆ ಕೊಟ್ಟಿದ್ದು. ಕೇವಲ ಪಿಝ್ಝಿ ಬರ್ಗರ್ ತಿನ್ನುವವರಿಗೆ ಅಕ್ಕಿ ಬೇಳೆ ಎಣ್ಣೆ ನೀರುಳ್ಳಿಯ ಕ್ರಯ ಗೊತ್ತಿರಲು ಹೇಗೆ ಸಾಧ್ಯ? -ಹರೀಶ್ ಎಮ್.ಆರ್. ಕುಂಜಿಬೆಟ್ಟು, ಉಡುಪಿ







