ಮತ್ತೆ ಚೀನಾವನ್ನು ಹಿಂದಿಕ್ಕಿದ ಭಾರತ ವಾಯು ಮಾಲಿನ್ಯ ಮಟ್ಟದಲ್ಲಿ!
ವಾಶಿಂಗ್ಟನ್, ಫೆ. 23: ಏಷ್ಯಾದಲ್ಲಿ ಯಾವ ದೇಶದ ಗಾಳಿ ಹೆಚ್ಚು ಮಲಿನ? ಭಾರತದ್ದಾ ಅಥವಾ ಚೀನಾದ್ದಾ? ಇದು ಸುದೀರ್ಘ ಚರ್ಚೆಯ ವಿಷಯ. ಈಗ ಇದಕ್ಕೆ ಉತ್ತರ ಸಿಕ್ಕಿದೆ- ಭಾರತದ ಗಾಳಿಯೇ ಹೆಚ್ಚು ಮಾಲಿನ್ಯಕಾರಕ!
ನಾಸಾ ಉಪಗ್ರಹಗಳು ಕಳುಹಿಸಿದ ಚಿತ್ರಗಳ ವಿಶ್ಲೇಷಣೆಯಲ್ಲಿ ಈ ವಿಷಯ ಸ್ಪಷ್ಟವಾಗಿದೆ. ಶ್ವಾಸಕೋಶಗಳನ್ನು ಪ್ರವೇಶಿಸಿ ಕ್ಯಾನ್ಸರ್ ಮತ್ತು ಹೃದಯದ ಕಾಯಿಲೆಯನ್ನು ಉಂಟು ಮಾಡಬಹುದಾದ ಸೂಕ್ಷ್ಮ ‘ಪರ್ಟಿಕ್ಯುಲೇಟ್ ಮ್ಯಾಟರ್’ ಕಣಗಳ ಸಂಖ್ಯೆ ಚೀನಾದಲ್ಲಿ ಕಳೆದ ಹಲವು ವರ್ಷಗಳಲ್ಲಿ ಗಣನೀಯ ಪ್ರಮಾಣದಲ್ಲಿ ಇಳಿದಿದೆ. ಆದರೆ, ಭಾರತದಲ್ಲಿ ಇದರ ಪ್ರಮಾಣ ಉಲ್ಬಣಿಸಿದೆ. 2015 ಭಾರತದ ಅತ್ಯಂತ ಮಾಲಿನ್ಯಕಾರಕ ವರ್ಷವಾಗಿತ್ತು.
Next Story





