ಅವಿಭಜಿತ ದ.ಕ.: ಜಿಪಂ ಬಿಜೆಪಿ ತೆಕ್ಕೆಗೆ
ಕರಾವಳಿ ಜಿಲ್ಲೆಗಳಾದ ದ.ಕ. ಮತ್ತು ಉಡುಪಿಯ ಜಿಪಂ ಅಧಿಕಾರ ಬಿಜೆಪಿಯ ಪಾಲಾಗಿದೆ.
ಮಂಗಳೂರು, ಫೆ.23: ದ.ಕ. ಜಿಪಂನ 36 ಕ್ಷೇತ್ರಗಳಲ್ಲಿ 21 ಕ್ಷೇತ್ರಗಳನ್ನು ಬಿಜೆಪಿ ಹಾಗೂ 15 ಕ್ಷೇತ್ರಗಳನ್ನು ಕಾಂಗ್ರೆಸ್ ಗೆದ್ದು ಕೊಂಡಿದ್ದು, ಈ ಬಾರಿ ಮತ್ತೆ ಬಿಜೆಪಿ ಅಧಿಕಾರದ ಚುಕ್ಕಾಣಿ ಹಿಡಿದಿದೆ. ಕಳೆದ ಅವಧಿಯಲ್ಲಿ (2010ನೆ ಸಾಲಿನ ಚುನಾವಣೆಯಲ್ಲಿ) 35 ಕ್ಷೇತ್ರಗಳಲ್ಲಿ 24 ಬಿಜೆಪಿ ಹಾಗೂ 11 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆದ್ದು, ಬಿಜೆಪಿ ಅಧಿಕಾರ ನಡೆಸಿತ್ತು. 2010ನೆ ಅವಧಿಯಲ್ಲಿ ದ.ಕ. ಜಿಪಂನ ಕ್ಷೇತ್ರವಾಗಿದ್ದ ಕೋಟೆಕಾರು, ತುಂಬೆ, ವಿಟ್ಲವು ಬದಲಾಗಿ ಕ್ಷೇತ್ರಗಳ ಪುನರ್ ವಿಂಗಡಣೆಯ ಬಳಿಕ ಕುವೆಟ್ಟು, ಸೋಮೇಶ್ವರ, ಸಜಿಪ ಮುನ್ನೂರು, ಪುಣಚ ಕ್ಷೇತ್ರಗಳು ಹೊಸತಾಗಿ ಸೇರ್ಪಡೆಗೊಂಡಿದ್ದವು.
Next Story





