ಎರಡನೆ ಟ್ವೆಂಟಿ-20: ಭಾರತದ ವನಿತೆಯರಿಗೆ ಜಯ

ಮಿಥಾಲಿ ರಾಜ್ ಅಜೇಯ ಅರ್ಧಶತಕ
ರಾಂಚಿ, ಫೆ.24: ಮಧ್ಯಮ ಕ್ರಮಾಂಕದ ಕುಸಿತದಿಂದ ಚೇತರಿಸಿಕೊಂಡ ಭಾರತದ ಮಹಿಳಾ ಕ್ರಿಕೆಟ್ ತಂಡ ಶ್ರೀಲಂಕಾ ವಿರುದ್ಧದ ಎರಡನೆ ಟ್ವೆಂಟಿ-20 ಅಂತಾರಾಷ್ಟ್ರೀಯ ಪಂದ್ಯವನ್ನು 5 ವಿಕೆಟ್‌ಗಳ ಅಂತರದಿಂದ ಗೆದ್ದುಕೊಂಡಿತು.
ಬುಧವಾರ ನಡೆದ ಪಂದ್ಯದಲ್ಲಿ ಗೆಲುವು ಸಾಧಿಸಿರುವ ಭಾರತ ಮೂರು ಪಂದ್ಯಗಳ ಟ್ವೆಂಟಿ-20 ಸರಣಿಯಲ್ಲಿ 2-0 ಮುನ್ನಡೆ ಸಾಧಿಸಿದೆ. ಭಾರತ ಮೊದಲು ಬ್ಯಾಟಿಂಗ್ ಮಾಡಿದ್ದ ಶ್ರೀಲಂಕಾವನ್ನು 20 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 107 ರನ್‌ಗೆ ನಿಯಂತ್ರಿಸಿತು. ಚೇಸಿಂಗ್‌ನ ವೇಳೆ ಆತಂಕದ ಕ್ಷಣವನ್ನು ಎದುರಿಸಿದ ಭಾರತ 19ನೆ ಓವರ್‌ನಲ್ಲಿ ಗೆಲುವಿನ ರನ್ ಬಾರಿಸಿತು.
ಮೊದಲು ಬ್ಯಾಟಿಂಗ್ ಆಯ್ದುಕೊಂಡ ಶ್ರೀಲಂಕಾದ ನಿರ್ಧಾರ ಕೈಕೊಟ್ಟಿತು. ಎಕ್ತಾ ಬಿಶ್ತ್(3-22) ಹಾಗೂ ಪೂನಂ ಯಾದವ್(3-17) ಲಂಕಾದ ಅಗ್ರ ಕ್ರಮಾಂಕದ ಆಟಗಾರ್ತಿಯರಿಗೆ ಸವಾಲಾದರು. ದಿಲಾನಿ ಮನೊದರಾ(27) ಹಾಗೂ ನಾಯಕಿ ಶಶಿಕಲಾ ಸಿರಿವರ್ಧನೆ(26) ಎರಡಂಕೆಯ ಸ್ಕೋರ್ ದಾಖಲಿಸಿದರು.
ಗೆಲ್ಲಲು ಸುಲಭ ಸವಾಲು ಪಡೆದಿದ್ದ ಭಾರತಕ್ಕೆ ನಾಯಕಿ ಮಿಥಾಲಿ ರಾಜ್(ಔಟಾಗದೆ 51, 52 ಎಸೆತ, 6 ಬೌಂಡರಿ) ಉತ್ತಮ ಅಡಿಪಾಯ ಹಾಕಿಕೊಟ್ಟಿದ್ದರು. ಆದರೆ, ಅವರಿಗೆ ಮಧ್ಯಮ ಕ್ರಮಾಂಕದಲ್ಲಿ ಉತ್ತಮ ಸಾಥ್ ಸಿಗಲಿಲ್ಲ. ಮಿಥಾಲಿಗೆ ಸಾಥ್ ನೀಡಿದ ಅನುಜಾ ಪಾಟೀಲ್ 33 ಎಸೆತಗಳಲ್ಲಿ 34 ರನ್ ಗಳಿಸಿ ತಂಡವನ್ನು 19ನೆ ಓವರ್‌ನಲ್ಲಿ ಗೆಲುವಿನ ದಡ ಸೇರಿಸಿದರು.
ಸಂಕ್ಷಿಪ್ತ ಸ್ಕೋರ್
ಶ್ರೀಲಂಕಾ: 20 ಓವರ್‌ಗಳಲ್ಲಿ 107/8
(ದಿಲಾನಿ ಮನೊದರಾ 27, ಪೂನಂ ಯಾದವ್ 3-17)
ಭಾರತ: 19 ಓವರ್‌ಗಳಲ್ಲಿ 108/5
(ಮಿಥಾಲಿ ರಾಜ್ ಔಟಾಗದೆ 51, ಇನೊಕಾ ರಣವೀರ 3-10)







