ಐಸಿಸಿ ರ್ಯಾಂಕಿಂಗ್: ಆಸ್ಟ್ರೇಲಿಯ ನಂ.1
ದುಬೈ, ಫೆ.24: ನ್ಯೂಝಿಲೆಂಡ್ ವಿರುದ್ಧದ 2ನೆ ಟೆಸ್ಟ್ ಪಂದ್ಯವನ್ನು 7 ವಿಕೆಟ್‌ಗಳಿಂದ ಗೆದ್ದುಕೊಂಡಿರುವ ಆಸ್ಟ್ರೇಲಿಯ ತಂಡ 8ನೆ ಬಾರಿ ಐಸಿಸಿ ಟೆಸ್ಟ್ ರ್ಯಾಂಕಿಂಗ್‌ನಲ್ಲಿ ನಂ.1 ಸ್ಥಾನಕ್ಕೇರಿದ್ದು, ಐಸಿಸಿ ಟೆಸ್ಟ್ ಸ್ಮರಣಿಕೆ ಹಾಗೂ 1 ಮಿಲಿಯನ್ ಡಾಲರ್ ನಗದು ಬಹುಮಾನವನ್ನು ಪಡೆದುಕೊಳ್ಳಲು ಅರ್ಹತೆ ಪಡೆದಿದೆ.
ಆಸ್ಟ್ರೇಲಿಯ ತಂಡ ಕಿವೀಸ್ ವಿರುದ್ಧ ಸರಣಿಯನ್ನು 2-0 ಅಂತರದಿಂದ ಕ್ಲೀನ್‌ಸ್ವೀಪ್ ಸಾಧಿಸಿದ ಕಾರಣ 112 ಅಂಕವನ್ನು ಗಳಿಸಿದೆ. 110 ಅಂಕ ಹೊಂದಿರುವ ಭಾರತ ಎರಡನೆ ಸ್ಥಾನಕ್ಕೆ ಕುಸಿದಿದೆ. ಎಪ್ರಿಲ್ 1ಕ್ಕೆ ಮೊದಲು ಆಸ್ಟ್ರೇಲಿಯ ನಂ.1 ಸ್ಥಾನದಲ್ಲೇ ಉಳಿದರೆ ಐಸಿಸಿ ಸಮಾರಂಭದಲ್ಲಿ ಸ್ಮರಣಿಕೆ ಹಾಗೂ ನಗದು ಬಹುಮಾನವನ್ನು ಪಡೆಯುತ್ತದೆ.
ಆಸ್ಟ್ರೇಲಿಯ 2003 ರಿಂದ 2009ರ ತನಕ ನಂ.1 ಸ್ಥಾನದಲ್ಲಿತ್ತು. ಭಾರತ 2010 ಹಾಗೂ 2011ರಲ್ಲಿ ನಂ.1 ಸ್ಥಾನದಲ್ಲಿತ್ತು. 2012ರಲ್ಲಿ ಇಂಗ್ಲೆಂಡ್ ನಂ.1 ಸ್ಥಾನದಲ್ಲಿತ್ತು. 2013 ರಿಂದ 2015ರ ತನಕ ನಂ.1 ಸ್ಥಾನದಲ್ಲಿದ್ದ ದಕ್ಷಿಣ ಆಫ್ರಿಕ ಹ್ಯಾಟ್ರಿಕ್ ಸಾಧಿಸಿತ್ತು.
ಟೆಸ್ಟ್ ರ್ಯಾಂಕಿಂಗ್: 1. ಆಸ್ಟ್ರೇಲಿಯ(112), 2. ಭಾರತ(110), 3. ದಕ್ಷಿಣ ಆಫ್ರಿಕ(109), 4. ಪಾಕಿಸ್ತಾನ(106), 5. ಇಂಗ್ಲೆಂಡ್(102), 6. ನ್ಯೂಝಿಲೆಂಡ್(96), 7. ಶ್ರೀಲಂಕಾ(89), 8. ವೆಸ್ಟ್‌ಇಂಡೀಸ್(76), 9.3 ಬಾಂಗ್ಲಾದೇಶ(47) ಹಾಗೂ 10. ಝಿಂಬಾಬ್ವೆ(05)







